Advertisement

ತೈಲೋತ್ಪನ್ನಗಳ ಮೇಲೆ ಜಿಎಸ್‌ಟಿ+ವ್ಯಾಟ್‌?

06:00 AM Jun 21, 2018 | |

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಅಡಿಯಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ತನ್ನಿ ಎಂದು ಆಗ್ರಹಿಸುತ್ತಿರುವವರಿಗೊಂದು ಎಚ್ಚರಿಕೆ… ಒಂದು ವೇಳೆ ಕೇಂದ್ರ ಸರ್ಕಾರ ಈ ಎರಡೂ ತೈಲೋತ್ಪನ್ನಗಳನ್ನು ಜಿಎಸ್‌ಟಿ ಅಡಿಯಲ್ಲಿ ತಂದುಬಿಟ್ಟರೆ ಈಗ ನಾವು ನೀಡುತ್ತಿರುವ ದರಕ್ಕಿಂತಲೂ ತುಸು ಹೆಚ್ಚೇ ನೀಡಬೇಕಾಗುತ್ತದೆ…!

Advertisement

ಈಗಾಗಲೇ ಕೇಂದ್ರ ಸರ್ಕಾರ ಎಲ್ಲಾ ಬಗೆಯ ತೈಲೋತ್ಪನ್ನಗಳನ್ನು ಜಿಎಸ್‌ಟಿ ಅಡಿಯಲ್ಲಿ ತರುವ ಸಂಬಂಧ ಪ್ರಕ್ರಿಯೆ ಶುರು ಮಾಡಿದೆ. ಇದರಲ್ಲಿ ಭಾಗಿಯಾಗಿರುವ ಅಧಿಕಾರಿಯೊಬ್ಬರು ತೈಲೋತ್ಪನ್ನಗಳ ಮೇಲಿನ ತೆರಿಗೆ ಯಾವ ರೀತಿಯಲ್ಲಿರಲಿದೆ ಎಂಬ ಬಗ್ಗೆ ವಿವರಣೆ ನೀಡಿದ್ದಾರೆ. ಇವರ ಪ್ರಕಾರ, ಪೆಟ್ರೋಲ್‌, ಡೀಸೆಲ್‌ಗ‌ಳ ಮೇಲೆ ಸರ್ಕಾರ ನೈಜವಾದ ಜಿಎಸ್‌ಟಿ ವಿಧಿಸುವುದಿಲ್ಲ. ಇದಕ್ಕೆ ಬದಲಾಗಿ, ಕೇಂದ್ರದ ಅಬಕಾರಿ, ರಾಜ್ಯ ಸರ್ಕಾರಗಳ ಮೌಲ್ಯವರ್ಧಿತ ತೆರಿಗೆ ಮತ್ತು ಜಿಎಸ್ಟಿಯನ್ನು ಒಟ್ಟುಗೂಡಿಸಿ ಒಂದು ತೆರಿಗೆ ಪದ್ಧತಿಯನ್ನು ಜಾರಿಗೆ ತರಲಿದೆ. ಒಂದು ವೇಳೆ ಈ ರೀತಿ ತಂದುಬಿಟ್ಟರೆ, ಪೆಟ್ರೋಲ್‌ ಮತ್ತು ಡೀಸೆಲ್‌ಗೆ ಈಗಿನದ್ದಕ್ಕಿಂಥ ಹೆಚ್ಚೇ ಹಣ ನೀಡಬೇಕಾಗುತ್ತದೆ. 

ಅಂದರೆ, ಲಭ್ಯಮೂಲಗಳ ಪ್ರಕಾರ, ತೈಲೋತ್ಪನ್ನಗಳ ಮೇಲೆ ಶೇ.28 ರಷ್ಟು ಜಿಎಸ್‌ಟಿ ಹಾಕಲಾಗುತ್ತದೆ. ಇದರ ನಂತರ ಕೇಂದ್ರ ಸರ್ಕಾರ ಪೆಟ್ರೋಲ್‌ ಮೇಲೆ 19.48 ರೂ. ಮತ್ತು ಡೀಸೆಲ್‌ ಮೇಲೆ 15.33 ರೂ. ಅಬಕಾರಿ ಸುಂಕ ಹಾಕುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್‌ ಮೇಲೆ 16.21 ರೂ. ಡೀಸೆಲ್‌ ಮೇಲೆ 9.97 ರೂ. ವ್ಯಾಟ್‌ ಹಾಕಲಾಗುತ್ತಿದೆ. ಈ ಎರಡೂ ಸೇರಿ ಸದ್ಯಕ್ಕೆ ಪೆಟ್ರೋಲ್‌ ಮೇಲೆ ಶೇ.45-50 ರಷ್ಟು ಮತ್ತು ಡೀಸೆಲ್‌ ಮೇಲೆ ಶೇ.35-40 ರಷ್ಟು ತೆರಿಗೆ ಹಾಕಲಾಗುತ್ತಿದೆ. 

ಒಂದು ವೇಳೆ ಜನರ ಆಗ್ರಹಕ್ಕೆ ಮಣಿದು ಅಬಕಾರಿ ಸುಂಕ ಮತ್ತು ವ್ಯಾಟ್‌ ರದ್ದು ಮಾಡಿ ಕೇವಲ ಜಿಎಸ್‌ಟಿಯನ್ನಷ್ಟೇ ಹಾಕಿದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳಿಗೆರಡಕ್ಕೂ ಭಾರಿ ನಷ್ಟವುಂಟಾ ಗುತ್ತದೆ. ಅಂದರೆ, ಈಗ ವಸೂಲಿ ಮಾಡುತ್ತಿರುವ ತೆರಿಗೆಗಿಂತ ಶೇ.10 ರಿಂದ 20 ರಷ್ಟು ಕಡಿಮೆ ಬರುತ್ತದೆ. ಏಕೆಂದರೆ, ಸದ್ಯ ಅತಿ ಹೆಚ್ಚು ಎಂದರೂ ಶೇ.28 ರಷ್ಟು ಜಿಎಸ್‌ಟಿ ಹಾಕಲು ಸಾಧ್ಯ. ಹೀಗಾಗಿ ಈ ಮೂರು ತೆರಿಗೆಯನ್ನು ಒಟ್ಟುಗೂಡಿಸಿ ತೆರಿಗೆ ಹಾಕುವ ಲೆಕ್ಕಾಚಾರ ಕೇಂದ್ರ ಸರ್ಕಾರದ್ದಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಇದಷ್ಟೇ ಅಲ್ಲ, ಒಂದು ವೇಳೆ ತೈಲೋತ್ಪನ್ನಗಳನ್ನು ಜಿಎಸ್‌ಟಿ ಅಡಿ ತರಬೇಕಾದರೆ ಕೇಂದ್ರ ಸರ್ಕಾರ ಸುಮಾ ರು 20 ಸಾವಿರ ಕೋಟಿ ರೂ.ಗಳನ್ನು ಇನ್‌ಪುಟ್‌ ಕ್ರೆಡಿಟ್‌ ಟ್ಯಾಕ್‌ ರೂಪದಲ್ಲಿ ಎತ್ತಿಟ್ಟಿರ ಬೇಕು. ಇದಕ್ಕೆ ಅದು ಸಿದ್ಧವಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಜತೆಗೆ ರಾಜ್ಯಗಳು ಜಿಎಸ್ಟಿ ಅಳವಡಿಕೆಗೆ ಒಪ್ಪುವುದು ಕಷ್ಟ ಎಂದೇ ಹೇಳಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next