Advertisement
ಆದರೆ, ಪೆನ್ಸಿಲಿಗೆ ಬರೆಯುವ ಕೈಗಳ ಸಹಕಾರ ಇಲ್ಲದಿದ್ದರೆ ಕೇವಲ ಪೆನ್ಸಿಲ್ ಒಂದೇ ಏನನ್ನೂ ಬರೆಯಲು ಯಾ ಮಾಡಲು ಸಾಧ್ಯವಿಲ್ಲ. ಅಕ್ಷರಗಳನ್ನು ಬರೆಯುವ ಪೆನ್ಸಿಲ್ ಬಳಸುತ್ತಾ ಹೋದಂತೆ ಅದರ ಮೊನಚನ್ನು ಮತ್ತು ಬರೆಯುವ ಗುಣವನ್ನು ಕಳೆದುಕೊಳ್ಳುತ್ತದೆ. ಆಗ ಪೆನ್ಸಿಲ್‌ನ ತುದಿಯನ್ನು ಕೆತ್ತಿ ಮತ್ತೂಮ್ಮೆ ಮೊನಚು ಮಾಡಿದಾಗ ಮತ್ತೆ ತೀಕ್ಷ್ಣವಾಗಿ ಬರೆಯಲು ಪ್ರಾರಂಭಿಸುತ್ತದೆ.
Related Articles
Advertisement
ಪೆನ್ಸಿಲ್ ಕೆಟ್ಟ ವಿಚಾರಗಳನ್ನು, ಒಳ್ಳೆಯ ವಿಚಾರಗಳನ್ನೂ ಬರೆದು ಗುರುತಾಗಿ ಇಡುತ್ತದೆ. ಅದೇ ರೀತಿ ಜೀವನ ಎನ್ನುವ ಕಾಗದದಲ್ಲಿ ಯಾವುದೇ ವಿಚಾರವನ್ನು ಬರೆಯುವ ಮೊದಲು ಬಹಳಷ್ಟು ಜಾಗೃತರಾಗಿದ್ದು,ಸಾಧ್ಯವಾದಷ್ಟು ಉತ್ತಮ ವಿಚಾರಗಳನ್ನೇ ಬರೆಯಲು ಪ್ರಯತ್ನಿಸಬೇಕು. ಬರೆದುದು ತಪ್ಪಾಗುವ ಮತ್ತು ಅಳಿಸಿ ತಿದ್ದುವ ಮೊದಲೇ ಸಾಕಷ್ಟು ಯೋಚಿಸಿ ಬರೆಯಬೇಕು. ತಪ್ಪಾಗಿ ಬರೆದುಬಿಟ್ಟರೆ ಅದರ ಗುರುತು ಶಾಶ್ವತವಾಗಿ ಉಳಿದುಬಿಡುತ್ತದೆ.
ಮನುಷ್ಯನ ವ್ಯಕ್ತಿತ್ವವು ಇದೇ ರೀತಿ ಪೆನ್ಸಿಲ್‌ನಂತೆ ಆಗಬೇಕು. ಸಮಾಜ ಸೇವೆಯಲ್ಲಿ ವ್ಯಕ್ತಿಯು ಪೆನ್ಸಿಲ್‌ನಂತೆ ನಿಧಾನವಾಗಿ ಕಳೆದುಹೋದರೂ ಆ ವ್ಯಕ್ತಿಯು ತಾನು ಮಾಡಿದ ಉತ್ತಮ ಕೆಲಸಗಳು ಮತ್ತು ಆತ ಕಾಗದದಲ್ಲಿ ಬರೆದಿಟ್ಟ ಒಳ್ಳೆಯ ವಿಚಾರಗಳು ಮತ್ತು ಅಕ್ಷರಗಳು ಪ್ರಪಂಚದಲ್ಲಿ ಶಾಶ್ವತವಾಗಿ ಉಳಿಯುವ ರೀತಿಯ ಸಾಧನೆಯನ್ನು ನಾವೆಲ್ಲರೂ ಮಾಡಬೇಕು.
ಪೆನ್ಸಿಲ್‌ನಿಂದ ಮನುಷ್ಯ ಕಲಿಯಬೇಕಾದ ನಾಲ್ಕು ಪಾಠಗಳು ಇವೆ. ಅವುಗಳೆಂದರೆ, ಬರೆಯುವ ಗುಣವಿರುವ ಪೆನ್ಸಿಲ್ ತಾನೇ ಸ್ವತಂತ್ರವಾಗಿ ಏನನ್ನೂ ಬರೆಯಲು ಸಾಧ್ಯವಿಲ್ಲ. ಇತರರು ಹಿಡಿದು ಬರೆದಾಗಲೇ ಅದರ ಮೌಲ್ಯ ಹೆಚ್ಚುವುದು. ಹಾಗೆಯೇ ನಮ್ಮೊಂದಿಗೆ ಇತರರೂ ಇದ್ದಾಗಲೇ ನಮ್ಮ ಮೌಲ್ಯ ಹೆಚ್ಚುತ್ತದೆ.
ಪೆನ್ಸಿಲ್‌ನ ಹೊರಭಾಗದ ಮರದ ಹಿಡಿಕೆಗೆ ಮೌಲ್ಯವಿರದೇ ಕೇವಲ ಅದರ ಒಳಗೆ ಇರುವ ಸೀಸದ ಗುಣಮಟ್ಟಕ್ಕೆ ಮಾತ್ರ ಬೆಲೆಯಿರುವಂತೆ ವ್ಯಕ್ತಿಯ ಬಾಹ್ಯ ನೋಟಕ್ಕೂ ಬೆಲೆ ಇರದೇ ಆತನಲ್ಲಿರುವ ಮೌಲ್ಯಕ್ಕೆ ಮಾತ್ರ ಬೆಲೆ ಇರುತ್ತದೆ. ಪೆನ್ಸಿಲ್ ಬರೆಯುತ್ತಾ ಹೋದಂತೆ ಮೊನಚು ಕಳೆದುಕೊಂಡಾಗ ಅದರ ತುದಿಯನ್ನು ಕತ್ತರಿಸಿ ಮತ್ತೆ ಮೊನಚು ಮಾಡುವ ಹಾಗೇ ನಮ್ಮ ಜೀವನದಲ್ಲಿ ಆಗಿಂದಾಗ್ಗೆ ಹೆಚ್ಚಿನ ಜ್ಞಾನ ಮತ್ತು ಕೌಶಲವನ್ನು ಗಳಿಸಿಕೊಳ್ಳುವ ಮೂಲಕ ಮೊನಚು ಮಾಡುವ ಗುಣವಿರಬೇಕು.
ಪೆನ್ಸಿಲ್ ಮೂಲಕ ಬರೆದದ್ದು ತಪ್ಪಾದಾಗ ಅದನ್ನು ರಬ್ಬರ್ ಮೂಲಕ ಒರೆಸಿ ಮತ್ತೆ ಸರಿಪಡಿಸುವಂತೆ ಜೀವನದಲ್ಲಿ ತಪ್ಪು ಘಟಿಸಿದಾಗ ಅದನ್ನು ತಿದ್ದಿಕೊಂಡು ಮತ್ತೆ ದೃಢವಾಗಿ ಸಾಗಬೇಕು. ಈ ಜಗತ್ತಿನಲ್ಲಿ ಎಲ್ಲವೂ ನನ್ನೊಬ್ಬನಿಂದಲೇ ಎನ್ನುವುದನ್ನು ಮರೆತು ಇತರರ ಸಹಕಾರದೊಂದಿಗೆ ಕಾಲ ಕಾಲಕ್ಕೆ ತನ್ನನ್ನು ತಾನು ಚೂಪು ಮಾಡಿಕೊಂಡು, ತಿದ್ದಿಕೊಂಡು ಬದುಕುವುದನ್ನು ಕಲಿಯಬೇಕು.
ಸಂತೋಷ್ ರಾವ್ ಪೆರ್ಮುಡ
ಪಟ್ರಮೆ ಬೆಳ್ತಂಗಡಿ