Advertisement

ಸಾವಿನಲ್ಲೂ ಭೇದಭಾವ ಸರಿಯಲ್ಲ: ಸ್ವಾಮೀಜಿ

05:38 PM Jun 01, 2022 | Team Udayavani |

ಹುಬ್ಬಳ್ಳಿ: ಸಾವಿನಲ್ಲಿ ಬೇಧಭಾವ ಮಾಡುವುದು ಸರಿಯಲ್ಲ. ಎರಡು ದಿನದ ಅಂತರದಲ್ಲಿ ಇದೇ ರಸ್ತೆಯಲ್ಲಿ ನಡೆದ ಎರಡು ದುರಂತಗಳ ಪೈಕಿ ಒಂದರಲ್ಲಿ ಮೃತಪಟ್ಟವರ ಕುಟುಂಬದವರಿಗೆ ಪರಿಹಾರ ನೀಡಲಾಗಿದೆ. ಇನ್ನೊಂದು ದುರಂತದಲ್ಲಿನ ಮೃತಪಟ್ಟವರ ಕುಟುಂಬಸ್ಥರಿಗೆ ಇಂದಿಗೂ ಪರಿಹಾರ ನೀಡುವ ಕೆಲಸ ಆಗಿಲ್ಲ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಇತ್ತೀಚೆಗೆ ಧಾರವಾಡದ ಬಾಡಾ ಬಳಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಇಲ್ಲಿನ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಮಂಗಳವಾರ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿ ನಂತರ ಸುದ್ದಿಗಾರರೊಂದಿಗೆ ಮತನಾಡಿದ ಅವರು, ಒಂದೇ ಕುಟುಂಬದ 11 ಜನ ಮೃತಪಟ್ಟ ಘಟನೆ ಘೋರ ದುರಂತವಾಗಿದೆ. ಸರಕಾರ ಘೋಷಿಸಿದ ಪರಿಹಾರ ಇಂದಿಗೂ ಬಿಡುಗಡೆಯಾಗಿಲ್ಲ.

ಆದರೆ ಇದಾದ ಎರಡು ದಿನದಲ್ಲಿ ಇನ್ನೊಂದು ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ ಪ್ರಧಾನ ಮಂತ್ರಿ ಪರಿಹಾರ ನಿಧಿಯಡಿ ಪರಿಹಾರ ಚೆಕ್‌ ನೀಡಲಾಯಿತು. ಮನುಷ್ಯತ್ವ,  ಮಾನವೀಯತೆ ಇದ್ದರೆ ಸಾವಿನಲ್ಲಿ ಯಾರೂ ಬೇಧಭಾವ ಮಾಡಬಾರದು. ಯಾವುದೇ ಸಮಾಜದಲ್ಲಿ ಸಾವು ಸಂಭವಿಸಿದರೂ ಅದು ಸಾವು ಎಂಬುದನ್ನು ಮರೆಯಬಾರದು.

ಅಪಘಾತದಲ್ಲಿ ಉಳಿದುಕೊಂಡು ಚಿಕಿತ್ಸೆ ಪಡೆಯುತ್ತಿರುವವರ ಬದುಕು ಕೂಡ ದೊಡ್ಡ ದುರಂತವೇ ಸರಿ. ಮುಂದೆ ಅವರು ದುಡಿದು ಜೀವನ ನಡೆಸಲು ಅಸಾಧ್ಯ. ಹೀಗಾಗಿ ಪ್ರಧಾನ ಮಂತ್ರಿಗಳು ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಮೃತ ಕುಟುಂಬ ಸದಸ್ಯರಿಗೆ 15 ಲಕ್ಷ ರೂ. ಪರಿಹಾರ ನೀಡಬೇಕು. ಒಂದು ವೇಳೆ ಪರಿಹಾರ ನೀಡದಿದ್ದರೆ ಧಾರವಾಡದ ಜನತೆ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next