Advertisement
ಉದ್ಯಾನವನ
ಪಾಳುಬಿದ್ದ ಉದ್ಯಾನವನ ನಂತರದ ದಿನಗಳಲ್ಲಿ ಕಿಡಿಗೇಡಿಗಳ ಅಡ್ಡೆಯೂ ಆಗಿತ್ತು. ಅನೈತಿಕ ಚಟುವಟಿಕೆಗಳ ತಾಣವೂ ಆಗಿ ಈ ಪರಿಸರದ ಜನತೆಗೆ ಸಹಿಸಲು ಕಷ್ಟವಾದ ಪರಿಸ್ಥಿತಿ ಇತ್ತು. ಇವೆಲ್ಲದರಿಂದ ಜನತೆ ರೋಸಿ ಹೋಗಿದ್ದರು. ಉದ್ಯಾನವನ ದುರವಸ್ಥೆ ಬಗ್ಗೆ ಉದಯವಾಣಿ ಸುದಿನ ಸರಣಿ ವರದಿಗಳನ್ನು ಪ್ರಕಟಿಸಿ, ಆಡಳಿತವನ್ನು ಎಚ್ಚರಿಸಿತ್ತು.
Related Articles
ಇಷ್ಟೆಲ್ಲ ಕಾಮಗಾರಿ ಆಗಿ ಇನ್ನೇನು ಕೆಲವೇ ದಿನಗಳಲ್ಲಿ ನೂತನ ಉದ್ಯಾನವನ ಉದ್ಘಾಟನೆಗೊಳ್ಳಲಿದೆ ಎನ್ನುವಾಗ ಕೆಲವು ಕಿಡಿಗೇಡಿಗಳಿಂದ ಹಾನಿಗೊಳಗಾಗಿದೆ. ಸಿಮೆಂಟ್ ತಡೆ ಬೇಲಿಯನ್ನು ಅಲ್ಲಲ್ಲಿ ಮುರಿಯಲಾಗಿದೆ. ಮಕ್ಕಳನ್ನು ಒಳಗೆ ನುಗ್ಗಿಸಿ ಕಳುಹಿಸಲಾಗುತ್ತಿದೆ. ದೊಡ್ಡವರು ಹೋಗುವಂತೆ ಬೇಲಿ ಮುರಿದಿದ್ದು, ಆಗಾಗ್ಗೆ ಮದ್ಯದ ಬಾಟಲಿಗಳು ಇಲ್ಲಿ ದೊರೆಯುತ್ತಿದೆ.
Advertisement
ಟಿ.ಟಿ. ರೋಡ್ ಉದ್ಯಾನವನ ಹಾಗೂ ಫೆರ್ರಿ ರೋಡ್ ಉದ್ಯಾನವನ ಸಂಜೆ ಹಾಗೂ ಬೆಳಗಿನ ವೇಳೆಗೆ ನೂರಾರು ಮಂದಿಗೆ ಅನುಕೂಲವಾಗಿದೆ. ಆದರೆ ಸೂಕ್ತ ಬೆಳಕಿನ ವ್ಯವಸ್ಥೆ ಹಾಗೂ ಸಿಸಿ ಕೆಮರಾ ಅಳವಡಿಸಿದರೆ ಇಲ್ಲಿ ಕಿಡಿಗೇಡಿಗಳ ಕಾಟ ನಿಲ್ಲಲಿದೆ. ಮಂಜೂರು
ಪುರಸಭೆ ಅಧ್ಯಕ್ಷರೂ ಆದ, ಈ ವಾರ್ಡ್‌ನ ಸದಸ್ಯೆ ವೀಣಾ ಭಾಸ್ಕರ ಮೆಂಡನ್ ಅವರ ಮುತುವರ್ಜಿಯಿಂದ ಉದ್ಯಾನವನ ಪುನರ್‌ನಿರ್ಮಾಣಕ್ಕೆ 10.5 ಲಕ್ಷ ರೂ. ಮಂಜೂರಾಗಿದ್ದು ಕಾಮಗಾರಿ ನಡೆದಿದೆ. ಆರಂಭವಾಗುವಾಗ ಕೆಲವರಿಂದ ವಿರೋಧವೂ ಬಂದಿತ್ತು. ಈಗ ಉದ್ಯಾನವನದಲ್ಲಿ ಇಂಟರ್‌ಲಾಕ್ ಅಳವಡಿಸಲಾಗಿದೆ. ತಡೆಬೇಲಿ ಹಾಕಲಾಗಿದೆ. ಮಕ್ಕಳ ಆಟಕ್ಕೆ ಉಯ್ನಾಲೆ ಹಾಗೂ ಇನ್ನಿತರ ಸಲಕರಣೆ ಅಳವಡಿಸಲಾಗಿದೆ. ಬಿದ್ದರೆ ಏಟಾಗದಂತೆ ಮರಳು ಹಾಕಲಾಗಿದೆ. ಇನ್ನೂ ಸ್ವಲ್ಪ ಕಾಮಗಾರಿಯ ಅವಶ್ಯವಿದೆ. ಸುಣ್ಣ ಬಣ್ಣ ಆಗಬೇಕಿದೆ. ಉದ್ಯಾನವನದ ಹೊರಭಾಗದಲ್ಲಿ ಸ್ವಲ್ಪ ಸ್ಥಳಕ್ಕೆ ಇಂಟರ್‌ಲಾಕ್ ಅವಶ್ಯವಿದೆ. ಶೀಘ್ರ ಲೋಕಾರ್ಪಣೆ
ಕಾಮಗಾರಿ ಅಂತಿಮ ಹಂತದಲ್ಲಿದ್ದು ಕಿಡಿಗೇಡಿಗಳು ಸಿಮೆಂಟ್ ಬೇಲಿಗೆ ಹಾನಿ ಮಾಡಿದ್ದಾರೆ. ಅದನ್ನು ಸರಿಪಡಿಸಿ, ಸಿಸಿಟಿವಿ ಹಾಗೂ ಲೈಟಿಂಗ್ ಹಾಕಿ ಶೀಘ್ರ ಲೋಕಾರ್ಪಣೆ ಮಾಡಲಾಗುವುದು.
– ವೀಣಾ ಭಾಸ್ಕರ ಮೆಂಡನ್, ಅಧ್ಯಕ್ಷರು, ಪುರಸಭೆ