Advertisement
ಈ ನಗರ ಸ್ಥಳೀಯ ಸಂಸ್ಥೆಗಳಿಗೆ 2021ರ ಡಿಸೆಂಬರ್‌ನಲ್ಲಿ ಚುನಾವಣೆ ನಡೆದಿತ್ತು. ಆದರೆ ಇನ್ನೂ ಅಧ್ಯಕ್ಷ-ಉಪಾಧ್ಯಕ್ಷರಿಲ್ಲ. ಮುಖ್ಯವಾಗಿ ಇವುಗಳ ಪೈಕಿ ಅನೇಕ ನಗರ ಸ್ಥಳೀಯ ಸಂಸ್ಥೆಗಳ ಅವಧಿ 2018ರಲ್ಲಿ ಪೂರ್ಣಗೊಂಡಿತ್ತು. ವಾರ್ಡ್ ಮೀಸಲಾತಿ ವಿಚಾರ ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಮತ್ತು ಕೊರೊನಾ ಕಾರಣಕ್ಕೆ ಚುನಾವಣೆ ನಡೆದಿರಲಿಲ್ಲ. ಕೊನೆಗೆ ಹೈಕೋರ್ಟ್ ಆದೇಶದ ಬಳಿಕ ಚುನಾವಣೆ ನಡೆಸಲಾಗಿತ್ತು. ಅದರಂತೆ 55 ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಅನೇಕ ಕಡೆಗಳಲ್ಲಿ ನಾಲ್ಕೈದು ವರ್ಷಗಳಿಂದ ಚುನಾಯಿತ ಆಡಳಿತ ವ್ಯವಸ್ಥೆ ಇಲ್ಲದಂತಾಗಿದೆ. ಈ ನಡುವೆ ಈಗ ಒಬಿಸಿ ಮೀಸಲಾತಿ ವಿವಾದ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‌ನಲ್ಲಿ ಬಾಕಿ ಇರುವುದರಿಂದ ಇದು ಇನ್ನಷ್ಟು ವಿಳಂಬವಾಗುವ ಸಾಧ್ಯತೆಯಿದೆ.
ಮೀಸ ಲಾತಿ ನಿಗದಿ ಸಂಬಂಧ ಕೆಲವು ರಾಜ್ಯ ಗ ಳಲ್ಲಿ ಕಾನೂನು ಹೋರಾಟ ನಡೆ ಯು ತ್ತಿದೆ. ರಾಜ್ಯ ದಲ್ಲೂ ಇಂಥದ್ದೇ ಸಂದಿ ಗ್ಧತೆ ಉಂಟಾ ಗಿದ್ದು, ನಿಗ ದಿ ಗಾಗಿ ನ್ಯಾ| ಭ ಕ್ತ ವ ತ್ಸಲ ಆಯೋಗ ರಚಿ ಸ ಲಾ ಗಿದ್ದು, ಇದು ವರದಿ ನೀಡಿದೆ. ಈ ವರ ದಿ ಯನ್ನು ಸರಕಾರ ಅನು ಮೋ ದಿ ಸಿದೆ. ಆದರೆ ಹೈಕೋ ರ್ಟ್ ನ ಲ್ಲಿಯೂ ಈ ಬಗ್ಗೆ ವಿಚಾ ರಣೆ ನಡೆ ಯು ತ್ತಿದೆ. ಇದರ ನಡು ವೆಯೇ ರಾಜ್ಯದ ಕೆಲವು ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಲಾಗಿದ್ದು, ಅದು ಈ ವಾರ ವಿಚಾರಣೆಗೆ ಬರುವ ಸಾಧ್ಯತೆಯಿದೆ.
Related Articles
ಪುರಸಭೆ: ಕಾಪು
ಪಟ್ಟಣ ಪಂಚಾಯತ್: ವಿಟ್ಲ, ಕೋಟೆಕಾರು
Advertisement