Advertisement

ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಮೌಲ್ಯಮಾಪನ; ಪ್ರೌಢಶಿಕ್ಷಣ ಸಚಿವರಿಗೆ ಸಂಕನೂರ ಆಗ್ರಹ

07:45 AM May 23, 2020 | Suhan S |

ಧಾರವಾಡ: ಕೋವಿಡ್ ದಿಂದ ಲಾಕ್‌ಡೌನ್‌ ಮುಂದುವರಿದಿರುವ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುವಂತೆ ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಿಗೆ ಆಗ್ರಹಿಸಿದ್ದಾರೆ.

Advertisement

ಈ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದ ಯಾವುದೇ ನಗರ ಪ್ರದೇಶದಲ್ಲಿ ವಸತಿಗಾಗಿ ಲಾಡ್ಜಿಂಗ್‌ ಮತ್ತು ಹೋಟೆಲ್‌ಗ‌ಳು ಲಾಕಡೌನ್ ದಿಂದ ಪ್ರಾರಂಭವಾಗಿಲ್ಲ. ಹೀಗಾಗಿ ಬೇರೆ ಜಿಲ್ಲೆಯ ಉಪನ್ಯಾಸಕರು ನಿಗದಿತ ಮೌಲ್ಯಮಾಪನ ಕೇಂದ್ರಕ್ಕೆ ಬಂದು ಮೌಲ್ಯಮಾಪನ ಮಾಡಲು ಆಗಲ್ಲ. ಈ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಯಲ್ಲಿ ಮೌಲ್ಯಮಾಪನ ಕೇಂದ್ರ ಮಾಡುವುದರಿಂದ ಎಲ್ಲಾ ಜಿಲ್ಲೆಯಲ್ಲಿ ಇರತಕ್ಕಂತಹ ಉಪನ್ಯಾಸಕರು ಮೌಲ್ಯಮಾಪನ ಕಾರ್ಯದಲ್ಲಿ ಪಾಲ್ಗೊಳ್ಳಲು ಅನುಕೂಲವಾಗಲಿದೆ ಎಂದಿದ್ದಾರೆ. 55ವರ್ಷ ಮೇಲ್ಪಟ್ಟ ಉಪನ್ಯಾಸಕರಿಗೆ ಮೌಲ್ಯಮಾಪನ ಕಾರ್ಯದಿಂದ ವಿನಾಯಿತಿ ನೀಡುವುದು, ಗರ್ಭಿಣಿ ಮಹಿಳೆಯರಿಗೆ ಹಾಗೂ 2-3 ವರ್ಷದ ಮಗು ಇರುವ ತಾಯಂದಿರಿಗೆ, ಉಸಿರಾಟದ ತೊಂದರೆ, ರಕ್ತದೊತ್ತಡ ಖಾಯಿಲೆಯಿಂದ ಬಳಲುತ್ತಿರುವವರಿಗೆ ವಿನಾಯತಿ ನೀಡಬೇಕು. ಮೌಲ್ಯಮಾಪನ ಕಾರ್ಯದಲ್ಲಿ ನಿರತರಾಗಿರುವವರಿಗೆ ಇಲಾಖೆಯಿಂದಲೇ ಮಾಸ್ಕ್- ಸ್ಯಾನಿಟೈಸರ್‌ ಪೂರೈಸುವುದರ ಜತೆಗೆ ಸ್ಕ್ರೀನಿಂಗ್‌ ನಡೆಸುವಂತೆ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next