Advertisement

Euro Cup 2024: ಪ್ರಶಸ್ತಿ ಸುತ್ತಿಗೆ ಸ್ಪೇನ್‌ ಲಗ್ಗೆ

01:43 AM Jul 11, 2024 | Team Udayavani |

ಮ್ಯೂನಿಕ್‌: ಕೂಟದ ನೆಚ್ಚಿನ ತಂಡಗಳಲ್ಲೊಂದಾದ ಸ್ಪೇನ್‌ ಯೂರೋ ಕಪ್‌ ಫ‌ುಟ್‌ಬಾಲ್‌ ಟೂರ್ನಿಯ ಫೈನಲ್‌ ತಲುಪಿದೆ. ಸೆಮಿಫೈನಲ್‌ ಸೆಣಸಾಟದಲ್ಲಿ ಅದು ಕೈಲಿಯನ್‌ ಎಂಬಪೆಯ ಫ್ರಾನ್ಸ್‌ ತಂಡವನ್ನು 2-1 ಗೋಲುಗಳಿಂದ ಪರಾಭವಗೊಳಿಸಿತು.

Advertisement

ಇಂಗ್ಲೆಂಡ್‌-ನೆದರ್ಲೆಂಡ್ಸ್‌ ದ್ವಿತೀಯ ಸೆಮಿಫೈನಲ್‌ನಲ್ಲಿ ಮುಖಾಮುಖಿ ಆಗಲಿವೆ.16 ವರ್ಷದ ಲಮಿನ್‌ ಎಮಲ್‌ ಗೋಲೊಂದನ್ನು ಬಾರಿಸಿದ್ದು ಸ್ಪೇನ್‌ ತಂಡದ ವಿಶೇಷವೆನಿಸಿತು. ಅವರು ಪಂದ್ಯದ 21ನೇ ನಿಮಿಷದಲ್ಲಿ ಖಾತೆ ತೆರೆದರು. ದ್ವಿತೀಯ ಗೋಲನ್ನು ಡ್ಯಾನಿ ಒಲ್ಮೊ 25ನೇ ನಿಮಿಷದಲ್ಲಿ ಬಾರಿಸಿದರು. ಆದರೆ ಇದಕ್ಕೂ ಬಹಳ ಮೊದಲೇ, ಪಂದ್ಯದ 9ನೇ ನಿಮಿಷದಲ್ಲೇ ರ್‍ಯಾಂಡಲ್‌ ಕೊಲೊ ಮೌನಿ ಫ್ರಾನ್ಸ್‌ ಪರ ಗೋಲು ಬಾರಿಸಿದ್ದರು. ಆದರೆ ಈ ಮೇಲುಗೈಯನ್ನು ಉಳಿಸಿಕೊಳ್ಳಲು ಫ್ರಾನ್ಸ್‌ಗೆ ಸಾಧ್ಯವಾಗಲಿಲ್ಲ.

ತಮ್ಮ ವಯಸ್ಸಿಗೂ ಮೀರಿದ ಸಾಧನೆಯಿಂದಾಗಿ ಲಮಿನ್‌ ಎಮಲ್‌ ದೊಡ್ಡ ಹೀರೋ ಎನಿಸಿ ಕೊಂಡು ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು. “ನಾವು ಬಹಳ ಬೇಗ ಗೋಲು ಬಿಟ್ಟುಕೊಟ್ಟು ಅತ್ಯಂತ ಕಠಿನ ಸನ್ನಿವೇಶದಲ್ಲಿದ್ದೆವು. ನನ್ನದೇನೂ ವಿಶೇಷ ಸಾಧನೆಯಲ್ಲ. ಚೆಂಡು ಅನುಕೂಲಕರ ಹಂತದಲ್ಲಿ ನನಗೆ ಸಿಕ್ಕಿತು. ಮೊದಲ ಅಂತಾ ರಾಷ್ಟ್ರೀಯ ಗೋಲಿನ ಸಹಜ  ಖುಷಿ ಯನ್ನು ಅನುಭವಿಸಿದೆ. ತಂಡ ಗೆದ್ದದ್ದು ಇದಕ್ಕೂ ಮಿಗಿಲಾದ ಸಂಭ್ರಮ ತಂದಿದೆ’ ಎಂಬುದಾಗಿ ಎಮಲ್‌ ಹೇಳಿದರು.

ಎಮಲ್‌ 17ನೇ ಹುಟ್ಟುಹಬ್ಬ ಆಚರಿಸಿದ ಒಂದೇ ದಿನದಲ್ಲಿ ಸ್ಪೇನ್‌ ಬರ್ಲಿನ್‌ನಲ್ಲಿ ಫೈನಲ್‌ ಆಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next