ಯೂರೋಪಿನ ಮರಕೋಳಿ ಹಕ್ಕಿಗಳ ವಿಶೇಷವೆಂದರೆ- ನೋಡಲು ಗಂಡು-ಹೆಣ್ಣು ಎಂರಡೂ ಒಂದೇ ರೀತಿ ಇರುತ್ತವೆ.Eurasian Woodcock ((Scolopaxn rusticola Linnacus) (Blyth) RM- Partridge+ ಹೆಣ್ಣ ಹಕ್ಕಿಯನ್ನು ಒಲಿಸಿಕೊಳ್ಳಲು ಗಂಡು ಹಕ್ಕಿಯು ಕ್ರಾಕ್, ಕ್ರಾಕ್ ಎಂಬ ದನಿ ಹೊರಡಿಸುತ್ತಾ ಹೆಣ್ಣಿನ ಸುತ್ತಲೂ ಗಿರಕಿ ಹೊಡೆಯುತ್ತಿರುತ್ತದೆ….
ಈ ಹಕ್ಕಿಯನ್ನು ವುಡ್ ಕೊಕ್ ಅಂತಾರೆ. ಇದರ ಮೈಬಣ್ಣ ಮರದ ತೊಗಟೆಯನ್ನು ಹೋಲುವುದರಿಂದ ಮರಕೋಳಿ ಎಂಬ ಹೆಸರು ಬಂದಿರಬಹುದು. ಇದು ಯುರೋಪ್ ಮತ್ತು ಏಷಿಯಾ ಖಂಡದ ಭೂಪ್ರದೇಶದಲ್ಲೂ ಕಾಣಸಿಗುತ್ತದೆ. ಶ್ರೀಲಂಕಾ ಮತ್ತು ಸುತ್ತಲಿನ ನಡುಗಡ್ಡೆ ಪ್ರದೇಶದಲ್ಲೂ ಆವಾಸ ಸ್ಥಾನ ಹೊಂದಿದೆ. ಇದೇ ಕುಟುಂಬಕ್ಕೆ ಸೇರಿದ ಪಟ್ಟೆ ಗೊರವ ನಮ್ಮಲ್ಲಿ ಇದೆ. ಚಳಿಗಾಲ ಬಂದರೆ ಈ ಹಕ್ಕಿಗೆಖುಷಿ. ಹಿಮದ ಜೊತೆ, ಜೌಗು ಪ್ರದೇಶಗಳಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಗದ್ದೆ ಸಾಲುಗಳಲ್ಲೂ ಇದನ್ನು ನೋಡಬಹುದು. ಜಗತ್ತಿನಲ್ಲಿ, ಸುಮಾರು 14 ರಿಂದ 16 ಮಿಲಿಯನ್ ಪಕ್ಷಿ$ಇದೆ ಎಂದು ಉಲ್ಲೇಖೀಸಲಾಗಿದೆ. ಯುರೋಪಿನ ದೇಶದಲ್ಲಿ ಇದರ ಮಾಂಸವನ್ನು ಬೆಳಗಿನ ಉಪಹಾರಕ್ಕಾಗಿ ಬಳಸುತ್ತಾರೆ.
ಇದರ ಇರುನೆಲೆ ಸಮುದ್ರ ತೀರ, ಕೆಸರು ಮಣ್ಣಿನ ಗಜನೀ- ಕೆಸರಿನ ದಿಬ್ಬ ಇರುವ ಜಾಗ. ಇಂಥ ಕಡೆ ಉಸುಕನ್ನು-ತನ್ನ ಉದ್ದ ಚುಂಚಿನಲ್ಲಿ ಕೆದಕುತ್ತಾ ಇಲ್ಲವೇ ಕೆಸರಿನ ಜಾಗವನ್ನು ತನ್ನ ಚುಂಚಿನಿಂದ ಕುಕ್ಕಿ, ಕುಕ್ಕಿ ಪರೀಕ್ಷಿಸುತ್ತದೆ. ತನ್ನ ಚುಂಚನ್ನು ಮಣ್ಣಿನ ಕೆಸರಿನಲ್ಲಿ ಚುಚ್ಚಿ-ಚುಚಿ -ಅಲ್ಲಿರುವ ಮಣ್ಣಿನ ಹುಳು-ಎರೆಹುಳುಗಳನ್ನು ಹಿಡಿದು ತಿನ್ನುತ್ತದೆ. ಈ ಹಕ್ಕಿಯ ಸ್ವಭಾವ, ಕೋಳಿಗಳ ಸ್ವಭಾವ ಎರಡೂ ಒಂದೇ. ಬಹುದೂರ ಹಾರುವ ಸಾಮರ್ಥಯ ಹೊಂದಿರುವುದರಿಂದ- ಇದನ್ನು ಮರದ ತೊಗಟೆ ಚಿತ್ತಾರದ ಮೈಯ ಹಕ್ಕಿ ಎನ್ನುವುದು ಸರಿಯಾಗಿದೆ.
ಈ ಹಕ್ಕಿ ಕೋಳಿಗೆ ದೊಡ್ಡ ಮತ್ತು ದಪ್ಪ ಕಣ್ಣಿದೆ. ಹಾಗಾಗಿ, ತನ್ನ ಕುತ್ತಿಗೆಯನ್ನು ತಿರುಗಿಸದೇ 360 ಡಿಗ್ರಿ ಜಾಗದಲ್ಲಿರುವ ತನ್ನ ಬೇಟೆಯನ್ನು ಸುಲಭವಾಗಿ ಹುಡುಕುತ್ತದೆ. ಗಂಡು ಹಕ್ಕಿ ದಾರಿಯಲ್ಲಿನ ಧೂಳನ್ನು ಎಬ್ಬಿಸಿ -ಇದು ತನ್ನ ಸಾಮ್ರಾಜ್ಯ ಎಂದು ಘೋಷಿಸುತ್ತದೆ. ಇದು ಅಪಾಯದ ಸಂಕೇತವೂ ಆಗಿರುತ್ತದೆ. ಹೀಗಾಗಿ, ಹೆಣ್ಣು ಎಚ್ಚೆತ್ತುಕೊಂಡು, ಯಾವುದೋ ವೈರಿ ತನ್ನ ಮರಿಗಳ ಮೇಲೆ ಎರಗುತ್ತಿದೆ ಎಂಬುದನ್ನು ಅರಿತು, ತನ್ನ ಎರಡು ಕಾಲಿನ ಮಧ್ಯ -ಇಲ್ಲವೇ ರೆಕ್ಕೆ ಅಗಲಿಸಿ, ಅದರ ಮಧ್ಯ ಮರಿಗಳನ್ನು ಅಡಗಿಸಿಕೊಂಡು ರಕ್ಷಣೆ ನೀಡುತ್ತದೆ.
ಈ ಹಕ್ಕಿಗೆ ಉರುಟಾದ ದಪ್ಪ ತಲೆ, ಕಂದು ಮೈನಿಂದ ಕೂಡಿರುತ್ತದೆ. ನೇರವಾಗಿರುವ ಚುಂಚೇ ಇಡೀ ಹಕ್ಕಿಯಲ್ಲಿ ಪ್ರಧಾನವಾಗಿ ಕಾಣುತ್ತದೆ. ಹಾರುವಾಗ ತನ್ನ ಮರಿಗಳನ್ನು ಬೆನ್ನಿನ ಮೇಲೆ ಹೊತ್ತೂಯ್ದ ನಿದರ್ಶನಗಳಿವೆ. ಕುತ್ತಿಗೆ ಮತ್ತು ಎದೆ ಭಾಗದಲ್ಲಿ ಕಂದು ಮಿಶ್ರಿತ ಬದನೆಕಾಯಿ ಬಣ್ಣದ ಅರ್ಧ ವರ್ತುಲಾಕಾರದ ರೇಖೆ ಸಮಾನಾಂತರದಲ್ಲಿ ಇದೆ. ರೇಖೆಯ ನಡುವಿನ ಭಾಗ ಮಸಕು ಬಿಳಿ ಬಣ್ಣದಿಂದ ಕೂಡಿರುತ್ತದೆ. ಪ್ರಾಯಕ್ಕೆ ಬಂದ ಹಕ್ಕಿ-ಕೋಳಿ 33-38 ಸೆಂ.ಮೀ. ನಷ್ಟು ಗಾತ್ರದಿಂದ ಕೂಡಿರುತ್ತದೆ. ಇದು ರೆಕ್ಕೆ ಅಗಲಿಸಿದಾಗ 55-65 ಸೆಂ.ಮೀ. ಇರುವುದು. ಹೀಗೆ ಅಗಲಿಸಿದಾಗ ಇದರ ರೆಕ್ಕೆಯಲ್ಲಿರುವ ಬಣ್ಣದ ಚಿತ್ತಾರ ಚೆನ್ನಾಗಿ ಕಾಣುತ್ತದೆ.
ಗಂಡು ಹೆಣ್ಣು ಒಂದೇರೀತಿ ಕಂಡರೂ, ಗಂಡು ಹಕ್ಕಿಯ ಗಾತ್ರ ಹೆಚ್ಚಿರುತ್ತದೆ. ಇದರಿಂದ ಗಂಡು ಹೆಣ್ಣನ್ನು ಸುಲಭವಾಗಿ ಗುರುತಿಸಬಹುದು ಹಾಗೂ ಪ್ರತ್ಯೇಕಿಸಬಹುದು. ಹೆಣ್ಣನ್ನು ಒಲಿಸಿಕೊಳ್ಳಲು ಗಂಡು ಹಕ್ಕಿಯು ಅದರ ಹಿಂದೆಯೇ ವರ್ತುಲಾಕಾರವಾಗಿ ಸುತ್ತುವುದು, ಸಮ್ಮತಿಗಾಗಿ ಕ್ರಾಕ್ ಕ್ರಾಕ್ ಎಂಬ ದನಿ ಹೊರಡಿಸುತ್ತದೆ. ಒಣ ಹುಲ್ಲು ಮತ್ತು ಎಲೆಗಳಿಂದ ಗೂಡು ನಿರ್ಮಿಸುತ್ತದೆ. ಕಂದು ಚುಕ್ಕೆ ಇರುವ 2-4 ಮೊಟ್ಟೆ ಇಡುತ್ತದೆ.
ಪಿ. ವಿ. ಭಟ್ ಮೂರೂರು