Advertisement

ಸಿಯುಕೆ ವಿದ್ಯಾರ್ಥಿಗೆ ಯುರೇಶಿಯಾ ಸಂಶೋಧನಾ ಪ್ರಶಸ್ತಿ

04:21 AM Feb 23, 2019 | Team Udayavani |

ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಪ್ರವೀಣ ಕುಮಾರ ರಾಜಸ್ಥಾನದ ಯುರೇಶಿಯಾ ಸಂಶೋಧನಾ ಸಂಸ್ಥೆ ನೀಡುವ ಪ್ರತಿಷ್ಠಿತ ಅಂತಾರಾಷ್ಟ್ರೀಯ ಯುವ ಸಂಶೋಧನಾ ವಿದ್ಯಾರ್ಥಿ ವೇತನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಜಸ್ಥಾನ ಯುರೇಶೀಯಾ ಸಂಶೋಧನಾ ಸಂಸ್ಥೆ ಉತ್ತಮ ಮತ್ತು ಹೆಚ್ಚು ಅಂತಾರಾಷ್ಟ್ರೀಯ ಪ್ರಬಂಧ ಮಂಡನೆ, ಪ್ರಕಟಪಡಿಸಿದ ಸಂಶೋಧನಾ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಿ, ಗುರುತಿಸಿ ಪ್ರಶಸ್ತಿ ನೀಡುತ್ತದೆ.

Advertisement

ಪ್ರಸಕ್ತ ಥೈಲ್ಯಾಂಡ್‌ನ‌ ಬ್ಯಾಂಕಾಕ್‌ನ ಸರಟ್‌ ವಿಶ್ವವಿದ್ಯಾಲಯದಲ್ಲಿ ನಡೆದ ವಿಜ್ಞಾನ ಮತ್ತು ತಂತ್ರಜ್ಞಾನ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಈಜಿಪ್ಟ್ನ ಕೈರೋ ವಿಶ್ವವಿದ್ಯಾಲಯದ ಏಲ್ಗೇರಾಬಾ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಸುಮಾರು 17ಕ್ಕೂ ಹೆಚ್ಚು ದೇಶಗಳ ಯುವ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದು, ಅದರಲ್ಲಿ ಪ್ರವೀಣಕುಮಾರ ಮಾತ್ರ ಆಯ್ಕೆಯಾಗಿರುವುದು ವಿಶೇಷ. ಪ್ರವೀಣಕುಮಾರ ಸದ್ಯ ಭೂಗರ್ಭ ವಿಜ್ಞಾನದ ಪ್ರೊ| ಎಂ.ಎ.ಅಸ್ಲಾಂ ಅವರ ಮಾರ್ಗದರ್ಶನದಲ್ಲಿ ಭೂಮಿ ಮತ್ತು ಮಳೆ ನೀರು ಕುರಿತು ಸಂಶೋಧನೆ ಮಾಡುತ್ತಿದ್ದಾರೆ. ರೈತರು ಮತ್ತು ಸಾರ್ವಜನಿಕರು ಅಂತರ್ಜಲ, ಮಳೆ ನೀರು ಮತ್ತು ಕುಡಿಯುವ ನೀರಿನ ಬಳಕೆ ಬಗ್ಗೆ ಪ್ರವೀಣಕುಮಾರ ಪ್ರಬಂಧ ಮಂಡಿಸಿದ್ದರು. ವಿದ್ಯಾರ್ಥಿ ಪ್ರವೀಣಕುಮಾರ ಸಾಧನೆಗೆ ಪ್ರೊ| ಎಚ್‌.ಎಂ. ಮಹೇಶ್ವರಯ್ಯ ಹರ್ಷವ್ಯಕ್ತಪಡಿಸಿದ್ದಾರೆ. ಅಲ್ಲದೇ, ಅಪ್ರತಿಮ ಸಾಧನೆ ತೋರುವ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯ ಸದಾ ಪ್ರೋತ್ಸಾಹಿಸಿ ಅಗತ್ಯ ನೇರವು ನೀಡುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next