Advertisement
Eurasain Spoonbill (Platalea leucorodia)RM Duck ಈ ಪಕ್ಷಿಗೆ ಚಮಚ ಕೊಕ್ಕಿನ ಕೊಕ್ಕರೆ ಎಂಬ ಹೆಸರು ಇದೆ. ಇದು “ತ್ರೆಸ್ಕಿಯೊರ್ನಿತಿಡಿಯಾ’ ಕುಟುಂಬಕ್ಕೆ ಸೇರಿದೆ. ಬಿಳಿ ಬಣ್ಣದ ಗರಿ, ಉದ್ದದ ಬೂದುಗಪ್ಪು ಕಾಲು, ತುದಿಯಲ್ಲಿ ದೋಸೆ ಸೊಟ್ಟುಗದಂತೆ ಅಗಲವಾಗಿರುವ ಚುಂಚು ಇದನ್ನು ದೂರದಿಂದಲೇ ಸುಲಭವಾಗಿ ಗುರುತಿಸಲು ಸಹಾಯಕವಾಗಿದೆ. ಇದು ಸುಮಾರು 60 ಸೆಂ.ಮೀ ಎತ್ತರ ಬೆಳೆಯಬಲ್ಲುದು. ಇದರ ವೈಜ್ಞಾನಿಕ ಹೆಸರಿನಲ್ಲಿರುವ “ಪ್ಲೇಟಲಿಯ’ ಪದ ಲ್ಯಾಟಿನ್‌ನಿಂದ ಬಂದಿದೆ. ಪ್ಲೇಟಲಿಯಾ ಅಂದರೆ ಅಗಲವಾಗಿರುವ- ಪ್ರತ್ಯೇಕ ಚುಂಚನ್ನು ಹೊಂದಿರುವ ಕೊಕ್ಕರೆ ಎಂದರ್ಥ.
Related Articles
Advertisement
ಸಾಮಾನ್ಯವಾಗಿ ಈ ಪಕ್ಷಿ ನೀರು ನಿಂತ ಗದ್ದೆ, ಕೃಷಿ ನೀರಾವರಿಗಾಗಿ ನಿರ್ಮಿಸಿದ ಕಟ್ಟೆ, ಆಣೆಕಟ್ಟಿನ ಹಿನ್ನೀರ ಪ್ರದೇಶ, ಜೌಗು ಪ್ರದೇಶ- ನದಿ ತೀರದ ಕೆಸರಿನ ಪ್ರದೇಶಗಳಲ್ಲಿ ಆಹಾರವನ್ನು ಹುಡುಕಿಕೊಳ್ಳುತ್ತವೆ.
ಕಪ್ಪೆ ಚಿಪ್ಪು, ಗೊದ್ದ, ಕಟ್ಟಿರುವೆ, ಅವುಗಳ ಮೊಟ್ಟೆ, ಕಪ್ಪೆ, ಶಂಖದ ಹುಳು, ಚಿಕ್ಕ ಏಡಿ, ಮೀನು, ಶಟಿÛಗಳು ಇದರ ಪ್ರಮುಖ ಆಹಾರ. ಅಲ್ಲದೆ ಕೆಸರಿನಲ್ಲಿರುವ ಮಣ್ಣು ಹುಳು, ಎರೆಹುಳದ ಮೊಟ್ಟೆಗಳನ್ನೂ ತಿನ್ನುವವು. ಇವುಗಳು ಸಂತಾನೋತ್ಪತ್ತಿ ಮಾಡುವ ಸಮಯ ಜುಲೈನಿಂದ ನವೆಂಬರ್. ಈ ಸಂದರ್ಭದಲ್ಲಿ ಕೆರೆ ದಂಡೆಯಲ್ಲಿರುವ ಮರಗಳ ಮೇಲೆ ಸಾಮಾನ್ಯ ಎತ್ತರದಲ್ಲಿ ಕೋಲುಗಳನ್ನು ಸಂಗ್ರಹಿಸಿ ಅಟ್ಟಣಿಗೆ ನಿರ್ಮಿಸಿ, ಮಧ್ಯ ಜಲಸಸ್ಯ ಮುಂತಾದ ಮೆತ್ತನೆ ಹಾಸು- ಹಾಕಿ ಮೊಟ್ಟೆ ಇಡುವುದು.
ಸಂಜೆ ಮತ್ತು ಬೆಳಗ್ಗೆ ಆಹಾರ ಸಂಗ್ರಹಿಸುವ ಚಟುವಟಿಕೆಯಲ್ಲಿ ತೊಡಗುವುದು. ತನ್ನ ಗೂಡಿನ ಸುಮಾರು 15 ಕಿ.ಮೀ ವ್ಯಾಪ್ತಿಯಲ್ಲಿ ತನ್ನ ಮರಿಗಳಿಗೆ ಆಹಾರ ಹುಡುಕುತ್ತವೆ. ಇದೊಂದು ಸುಂದರ ಚುಂಚಿನ ಹಕ್ಕಿ. ಏಷಿಯನ್ ಬಿಲ್ ಸ್ಟೋರ್ಕ್, ಐಬಿಸ್, ಪೆಲಿಕನ್‌ನ ಸಹಚರಿಯಾಗಿರುವ ಈ ಸುಂದರ ಹಕ್ಕಿ ಪರಿಸರದ ಚೆಲುವನ್ನು ಹೆಚ್ಚಿಸಿದೆ ಎಂದರೆ ತಪ್ಪಾಗಲಾರದು.