Advertisement

ಎಲ್ಲ ಗ್ಯಾಡ್ಜೆಟ್‌ಗಳಿಗೆ ಒಂದೇ ಚಾರ್ಜರ್‌!

10:02 PM Jun 10, 2022 | Team Udayavani |

ಲಂಡನ್‌: ಮೊಬೈಲ್‌, ಲ್ಯಾಪ್‌ಟಾಪ್‌, ಟ್ಯಾಬ್‌, ಸ್ಮಾರ್ಟ್‌ವಾರ್ಚ್‌ ಹೀಗೆ ಎಲ್ಲ ಎಲೆಕ್ಟ್ರಾನಿಕ್‌ ಉತ್ಪನ್ನಕ್ಕೆ ಪ್ರತ್ಯೇಕ ಚಾರ್ಜರ್‌ ಇಟ್ಟುಕೊಳ್ಳುವುದು ದೊಡ್ಡದೊಂದು ಸಮಸ್ಯೆ. ಇದಕ್ಕೆ ಪರಿಹಾರವಾಗಿ ಯುರೋಪಿಯನ್‌ ಒಕ್ಕೂಟವು, ಟೈಪ್‌ ಸಿ ಚಾರ್ಜರ್‌ ಅನ್ನು ಎಲ್ಲ ಉತ್ಪನ್ನಗಳಿಗೆ ಬಳಸುವಂತೆ ಹೊಸದೊಂದು ನಿಯಮ ಮಾಡಿದೆ.

Advertisement

ಸುಮಾರು 10 ವರ್ಷಗಳಿಂದ ಚರ್ಚೆಯಲ್ಲಿದ್ದ ಈ ನಿಯಮಕ್ಕೆ ಇತ್ತೀಚೆಗೆ ಒಕ್ಕೂಟ ಅನುಮೋದನೆ ಕೊಟ್ಟಿದೆ. ಇನ್ನು ಎಲ್ಲ ಉತ್ಪನ್ನಗಳನ್ನು ಸಿ ಟೈಪ್‌ ಚಾರ್ಜರ್‌ ಬಳಸಿ ಚಾರ್ಜ್‌ ಮಾಡುವಂತೆಯೇ ತಯಾರಿಸಬೇಕು. ಒಟ್ಟಿನಲ್ಲಿ 2024ರೊಳಗಾಗಿ ಎಲ್ಲ ಉತ್ಪನ್ನಗಳಿಗೆ ಒಂದೇ ಚಾರ್ಜರ್‌ ಇರಬೇಕು ಎಂದು ಹೇಳಲಾಗಿದೆ.

ಲ್ಯಾಪ್‌ಟಾಪ್‌ ತಯಾರಕ ಸಂಸ್ಥೆಗಳಿಗೆ ವಿಶೇಷ ರಿಯಾಯಿತಿ ಕೊಡಲಾಗಿದ್ದು, ನೀತಿ ಜಾರಿಗೆ ಬಂದು 40 ತಿಂಗಳೊಳಗೆ ಸಂಸ್ಥೆಗಳು ಸಿ ಟೈಪ್‌ ಚಾರ್ಜಿಂಗ್‌ ಇರುವ ಲ್ಯಾಪ್‌ಟಾಪ್‌ ಗಳನ್ನು ಮಾರುಕಟ್ಟೆಗೆ ಬಿಡಬೇಕೆಂದು ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next