ಚಿಂತಾಮಣಿ: ಎತ್ತಿನಹೊಳೆ ಕಾಮಗಾರಿ ನಡೆಯುತ್ತಿದ್ದು ನೀರು ಬರಲು ಇನ್ನೆರಡು ವರ್ಷ ಬೇಕಾಗುತ್ತದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು. ತಾಲೂಕಿನ ಕುರಟಹಳ್ಳಿ ಮತ್ತು ದಂಡಯಪಾಳ್ಯ ಕೆರೆಗಳ ಬಳಿಯ ಕೆ.ಸಿ.ವ್ಯಾಲಿ ನೀರು ಹರಿಸುವ ಸ್ಥಳಗಳನ್ನು ವೀಕ್ಷಿಸಿ ಮಾತನಾಡಿ, ಕೆ.ಸಿ. ವ್ಯಾಲಿ ನೀರು ಹರಿಯುತ್ತಿರುವ ಕೆರೆಗಳ ದುಸ್ಥಿತಿ ಬಹಳ ಹದಗೆಟ್ಟಿದೆ.
ಸಚಿವ, ಸಂಸದರು, ಸೇರಿದಂತೆ ಎಲ್ಲಾ ಶಾಸಕರ, ಅಧಿಕಾರಿಗಳ ಜೊತೆ ಸಭೆ ನಡೆಸಿ ಕೆರೆಗಳ ದುರಸ್ಥಿಗೆ ಕ್ರಮ ಕೈಗೊಳ್ಳಲಾಗುವುದೆಂದರು. ಇನ್ನು ಅಧಿಕೃತವಾಗಿ ರಾಜ್ಯದಲ್ಲೇ ವಾಸವಾಗಿರುವ ರಾಜ್ಯ ನಿವಾಸಿಗಳಲ್ಲಿ ಕೊರೊನಾ ಕಂಡು ಬರುತ್ತಿಲ್ಲ. ಬದಲಾಗಿ ಹೊರಗಿನ ರಾಜ್ಯಗಳಾದ ಮಹಾರಾಷ್ಟ್ರ, ಗುಜರಾತ್, ಕೇರಳ ರಾಜ್ಯಗಳಲ್ಲಿ ವಾಸವಿದ್ದು ರಾಜ್ಯಕ್ಕೆ ಬರುತ್ತಿರುವರಲ್ಲೇ ಹೆಚ್ಚಾಗಿ ಕಂಡು ಬರುತ್ತಿದ್ದು ಕಠಿಣ ಕ್ರಮ ಕೈಗೊಳ್ಳ ಲಾಗುವುದೆಂದು ತಿಳಿಸಿದರು.
ರಾಜ್ಯದಲ್ಲಿ ದಿನೇ ದಿನೆ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿದ್ದರೂ ಲೆಕ್ಕಿಸದ ಸಚಿವ ಹಾಗೂ ಕ್ಷೇತ್ರದ ಶಾಸಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ತಾಲೂಕಿನ ಕುರಟಹಳ್ಳಿ ಮತ್ತು ದಂಡಯಪಾಳ್ಯ ಕೆರೆಗಳ ಬಳಿಯ ಕೆ.ಸಿ.ವ್ಯಾಲಿ ನೀರಿನ ಡಿಸಿ ಪಾಯಿಂಟ್‌ಗಳನ್ನು ಪರಿಶೀಲಿಸಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು. ಪರಿಶೀಲನೆ ವೇಳೆ ಕಾನೂನು ಸಚವರಾದ ಜೆ.ಸಿ.ಮಾಧು ಸ್ವಾಮಿ, ಕೋಲಾರ ಸಂಸದ ಎಸ್.ಮುನಿಸ್ವಾಮಿ ಹಾಗೂ ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ,
ವಿಧಾನಪರಿಷತ್ ಸದಸ್ಯರಾದ ವೈ.ಎ. ನಾರಾಯಣಸ್ವಾಮಿ, ತೂಪಲ್ಲಿ ಚೌಡರೆಡ್ಡಿ ಸಾಮಾಜಿಕ ಅಂತರ ಸಾಮಾಜಿಕ ಅಂತರ ಮರೆತಿ ದ್ದರು. ಇದೇ ವೇಳೆ ಕುರುಟಹಳ್ಳಿ ಕೆರೆ ಕಟ್ಟೆ ದುಸ್ಥಿತಿ ಬಗ್ಗೆ ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಕುರುಟಹಳ್ಳಿ ಡಾಬಾ ಮಂಜುನಾಥ, ಸಚಿವ ಮಾಧುಸ್ವಾಮಿ ಅವರಿಗೆ ಮನವರಿಕೆ ಮಾಡಿದರು. ರೈತ ಮುಖಂಡ ಸೀಕಲ್ ರವಣಾರೆಡ್ಡಿ ನೇತೃತ್ವದಲ್ಲಿ ಹಲವು ರೈತ ಮುಖಂಡರು ಕುರುಟಹಳ್ಳಿ ಕೆರೆ ದುರಸ್ತಿಗೆ ಮನವಿ ಮಾಡಿದರು. ಜೆಡಿಎಸ್ ಮತ್ತು ಬಿಜೆಪಿ, ಎಂ.ಸಿ.ಸುಧಾಕರ್ ಬೆಂಬಲಿಗರು ಉಪಸ್ಥಿತರಿದ್ದರು.