Advertisement
ಇವೆಲ್ಲ ದೃಶ್ಯ ಕಂಡು ಬರುತ್ತಿರುವುದು ಗುಳೇದಗುಡ್ಡ ತಹಶೀಲ್ದಾರ್ ಕಚೇರಿಯಲ್ಲಿ. ಆಧಾರ್ ಕಾರ್ಡ್ ತಿದ್ದುಪಡಿಗಾಗಿ ಗುಳೇದಗುಡ್ಡ ಸೇರಿದಂತೆ ಪರ್ವತಿ, ಖಾನಾಪುರ, ಚಿಮ್ಮಲಗಿ, ಲಾಯದಗುಂದಿ, ಹಳದೂರ, ಮುರುಡಿ, ತೋಗುಣಶಿ, ಕೆಲವಡಿ, ತೆಗ್ಗಿ, ಲಿಂಗಾಪೂರ, ಪಾದನ ಕಟ್ಟಿ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮಗಳ ಜನರು ನಿತ್ಯವೂ ಪರದಾಡುವಂತಾಗಿದೆ.
Related Articles
Advertisement
ಜನರೇಟರ್ ಸ್ಥಳಾಂತರ ಆಗಿಲ್ಲ: ವಿದ್ಯುತ್ ಕೈಕೊಟ್ಟರೆ ಜನರೇಟರ್ ಆದರೂ ಇರಬೇಕು. ಅದು ಹಳೇ ತಹಸೀಲ್ದಾರ್ ಕಚೇರಿ ಮುಂದಿದೆ. ಆದರೆ ಅದನ್ನು ಹೊಸ ತಹಸೀಲ್ದಾರ್ ಕಚೇರಿಗೆ ಸ್ಥಳಾಂತರ ಮಾಡಿಲ್ಲ. ಹೀಗಾಗಿ ಇಲ್ಲಿ ಕರೆಂಟ್ ಸಮಸ್ಯೆ ಕಾಡುತ್ತಿದೆ. ಕಚೇರಿ ಸ್ಥಳಾಂತರಗೊಂಡು ತಿಂಗಳುಗಳು ಕಳೆದರೂ ಜನರೇಟರ್ ಸ್ಥಳಾಂತರಿಸುವ ಕೆಲಸ ಆಗಿಲ್ಲವೆಂದು ಸಾರ್ವಜನಿಕರು ದೂರಿದ್ದಾರೆ.
ಬುತ್ತಿ ಕಟ್ಟಿಕೊಂಡು ಬರ್ತಾರೆ ಜನ: ಆಧಾರ್ ಕಾರ್ಡ್ ಮಾಡಿಸಲು ಗಂಟೆಗಟ್ಟಲೆ ಕಾಯುವ ಸ್ಥಿತಿ ಇರುವುದರಿಂದ ಸುತ್ತಮುತ್ತಲಿನ ಗ್ರಾಮಗಳ ಜನರು ಬುತ್ತಿ ಕಟ್ಟಿಕೊಂಡು ಬರುತ್ತಾರೆ, ಪಾಳೆ ಬಂದರೆ ಒಳಿತು ಇಲ್ಲವಾದರೆ ಕಟ್ಟಿಕೊಂಡು ಬಂದ ಬುತ್ತಿ ಬಿಚ್ಚಿಕೊಂಡು ಊಟ ಮಾಡಿ ಮತ್ತೇ ಪಾಳೆಗೆ ನಿಲ್ಲುತ್ತಾರೆ. ಇನ್ನು ಕೆಲವರು ಪಕ್ಕದ ಹೋಟೆಲ್ಗಳತ್ತ ಮುಖ ಮಾಡುತ್ತಾರೆ.
•ಮಲ್ಲಿಕಾರ್ಜುನ ಕಲಕೇರಿ