Advertisement

ಸದ್ಯ ಬೋಯಿಂಗ್‌ ವಿಮಾನ ಬಳಸೆವು: ಇಥಿಯೋಪಿಯನ್‌ ಏರ್‌ ಲೈನ್ಸ್‌

06:16 AM Mar 11, 2019 | Team Udayavani |

ಆ್ಯಡಿಸ್‌ ಅಬಾಬಾ : 157 ಜನರ ಸಾವಿಗೆ ಕಾರಣವಾದ ಇಟಿ-302 ಬೋಯಿಂಗ್‌ ವಿಮಾನ ದುರಂತವನ್ನು ಅನುಸರಿಸಿ ಇಥಿಯೋಪಿಯನ್‌ ಏರ್‌ ಲೈನ್ಸ್‌ ತನ್ನಲ್ಲಿನ ಎಲ್ಲ   737 ಮ್ಯಾಕ್ಸ್‌ 8 ಬೋಯಿಗ್‌ ವಿಮಾನಗಳನ್ನು ಮಾರ್ಚ್‌ 10ರಿಂದಲೇ, ಮುಂದಿನ ಆದೇಶದ ವರೆಗೆ, ಬಳಸದಿರಲು ನಿರ್ಧರಿಸಿದೆ. 

Advertisement

ಇಟಿ-302 ಬೋಯಿಂಗ್‌ ವಿಮಾನದ ದುರಂತಕ್ಕೆ ಕಾರಣವೇನೆಂಬುದು ಈಗಿನ್ನೂ ನಮಗೆ ನಿಖರವಾಗಿ ಗೊತ್ತಾಗಿಲ್ಲ. ಹಾಗಿದ್ದರೂ ಪ್ರಯಾಣಿಕರ ಸುರಕ್ಷೆ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವ ಸಲುವಾಗಿ ನಾವು ನಮ್ಮಲ್ಲಿನ ಎಲ್ಲ ಬೋಯಿಂಗ್‌ ಬಿ-737-8 ಮ್ಯಾಕ್ಸ್‌ ಸರಣಿಯ ವಿಮಾನಗಳನ್ನು ಬಳಸದಿರಲು ನಿರ್ಧರಿಸದ್ದೇವೆ ಎಂದು ಇಥಿಯೋಪಿಯನ್‌ ಏರ್‌ ಲೈನ್ಸ್‌, ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿರುವ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next