Advertisement

ಎತ್ತಿನಹೊಳೆ ಯೋಜನೆ ಗೊಂದಲ ನಿವಾರಿಸಲು ರಾಜ್ಯಕ್ಕೆ ಕೇಂದ್ರ ಸೂಚನೆ

02:19 PM Feb 21, 2017 | Team Udayavani |

ಬೆಳ್ತಂಗಡಿ: ನೇತ್ರಾವತಿ ನದಿಯಲ್ಲಿ ಉಪಲಬ್ದವಾಗುವ 24 ಟಿಎಂಸಿ ನೀರನ್ನು ಕೋಲಾರ, ರಾಮನಗರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಹಾಯಿಸಲು ಉದ್ದೇಶಿಸಿರುವ ರಾಜ್ಯದ ಕ್ರಮದ ಕುರಿತು ಸೃಷ್ಟಿಯಾಗಿರುವ ಗೊಂದಲ ನಿವಾರಿಸುವಂತೆ ಪ್ರಧಾನಿ ಸಚಿವಾಲಯವು ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ.
ಮಸ್ಕತ್‌ನಲ್ಲಿ ಉದ್ಯೋಗಿಯಾಗಿದ್ದು, ಪ್ರಸ್ತುತ ಪುತ್ತೂರಿನಲ್ಲಿ ಮೆಕ್ಯಾನಿಕಲ್‌ ಎಂಜಿನಿಯರ್‌ ಆಗಿರುವ ಭರತೇಶ ಅಲ
ಸಂಡೆಮಜಲು ಅವರು ದ. ಕ. ಜಿಲ್ಲೆಯ ಜನತೆ ಪರವಾಗಿ 2016ರ ಮೇ 24ರಂದು ಪ್ರಧಾನಿ ಸಚಿವಾಲಯದ ದೂರು
ದುಮ್ಮಾನ ವಿಭಾಗಕ್ಕೆ ಇ-ಮೇಲ್‌ ಮುಖಾಂತರ ದೂರಿದ್ದರು.

Advertisement

“ಮಾಡು ಇಲ್ಲವೇ ಮಡಿ’ ಸ್ಥಿತಿ ನೇತ್ರಾವತಿ ತಿರುವಿನ ಹುನ್ನಾರದ ಎತ್ತಿನಹೊಳೆ ಯೋಜನೆಯನ್ನು ರಾಜ್ಯ ಸರಕಾರ ಹಮ್ಮಿಕೊಂಡಿದೆ. ನೀರಿಲ್ಲದ ಯೋಜನೆಗೆ 12 ಸಾವಿರ ಕೋ. ರೂ. ವ್ಯಯಿಸುತ್ತಿದೆ. ಈ ಯೋಜನೆಯಿಂದ ಪಶ್ಚಿಮ ಘಟ್ಟದ ಜೀವವೈವಿಧ್ಯಕ್ಕೆ ಧಕ್ಕೆಯಾಗಲಿದೆ. ದ.ಕ. ಜನತೆಗೆ ಯೋಜನೆ ಕುರಿತು ಸ್ಪಷ್ಟ ಮಾಹಿತಿ ದೊರೆಯದ ಕಾರಣ “ಮಾಡು ಇಲ್ಲವೇ ಮಡಿ’ ಎಂಬ ಸನ್ನಿವೇಶ ಒದಗಿಬಂದಿದೆ. ನೇತ್ರಾವತಿ ನದಿಯನ್ನೇ ಅವಲಂಬಿಸಿದ ಜಿಲ್ಲೆಯ ಜನರ ಜೀವನಾಡಿ ನೇತ್ರಾವತಿ ನದಿಯ ತಂಟೆಗೆ ಬಾರದಂತೆ ರಾಜ್ಯಕ್ಕೆ ಸೂಚಿಸಬೇಕೆಂದು ಅವರು ದೂರಿನಲ್ಲಿ ತಿಳಿಸಿದ್ದರು.

2017ರ ಫೆ. 18ರಂದು ಈ ದೂರು ಪರಿಶೀಲಿಸಿದ ಪ್ರಧಾನಿ ಸಚಿವಾಲಯ ದೂರನ್ನು ರಾಜ್ಯ ಸರಕಾರಕ್ಕೆ ರವಾನೆ
ಮಾಡಿದೆ. ಕೈಗೊಂಡ ಕ್ರಮಗಳ ಕುರಿತು ದೂರುದಾರರು ಹಾಗೂ ಸಚಿವಾಲಯಕ್ಕೆ ಮಾಹಿತಿ ನೀಡುವಂತೆ ಸೂಚಿಸಿದೆ. ಸಾರ್ವಜನಿಕ ದೂರುಗಳಿಗೆ ಕನಿಷ್ಠ ಇಷ್ಟಾದರೂ ಸ್ಪಂದಿಸುವ ಮನೋಭಾವ ಕೇಂದ್ರ ಸರಕಾರಕ್ಕೆ ಇದ್ದು, ಇನ್ನು ರಾಜ್ಯ ಸರಕಾರದ ಸ್ಪಂದನೆ ಹೇಗೆ ಬರಲಿದೆ ಎಂದು ಕಾದು ನೋಡಬೇಕಿದೆ ಎಂದು ಭರತೇಶ ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next