Advertisement

ಅವಧಿಗಿಂತ ಮೊದಲೇ ಎಥನಾಲ್‌ ಗುರಿ: ಪೆಟ್ರೋಲ್‌ನಲ್ಲಿ ಶೇ.20 ಮಿಶ್ರಣಕ್ಕೆ ನಿರ್ಧಾರ: ಸಿಎಂ

01:04 AM Jul 09, 2022 | Team Udayavani |

ಬೆಂಗಳೂರು: ಪೆಟ್ರೋಲ್‌ನಲ್ಲಿ ಶೇ. 20ರಷ್ಟು ಎಥನಾಲ್‌ ಮಿಶ್ರಣದ ಗುರಿಯನ್ನು ಅವಧಿಗಿಂತ ಮೊದಲೇ ಸಾಧಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Advertisement

ಬೆಂಗಳೂರಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ “ಕರ್ನಾಟಕದಲ್ಲಿ ಎಥನಾಲ್‌ ಉತ್ಪಾದನೆ: ನೀತಿಗಳು, ಆವಿಷ್ಕಾರಗಳು ಮತ್ತು ಸುಸ್ಥಿರ ಅನುಸಂಧಾನ’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈಗಾಗಲೇ ಪೆಟ್ರೋಲ್‌ನಲ್ಲಿ ಶೇ. 10ರಷ್ಟು ಎಥನಾಲ್‌ ಮಿಶ್ರಣದ ಗುರಿ ಸಾಧನೆ ಆಗಿದೆ. ಮುಂದಿನ ಒಂದೂವರೆ ವರ್ಷದಲ್ಲಿ ದುಪ್ಪಟ್ಟು ಆಗಲಿದೆ ಎಂದರು.

ರಾಜ್ಯದಲ್ಲಿ ಎಥನಾಲ್‌ ನೀತಿ ಜಾರಿಗೆ ತೀರ್ಮಾನಿಸಲಾಗಿದ್ದು, ಕರಡು ಸಿದ್ಧಗೊಂಡಿದೆ. ಎಥನಾಲ್‌ ಮಿಶ್ರಣವನ್ನು ಶೇ. 20ಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯದ ಉದ್ದೇಶಿತ ಎಥನಾಲ್‌ ನೀತಿ ಪೂರಕವಾಗಿರಲಿದೆ ಎಂದರು.

ರಾಜ್ಯದಲ್ಲಿ 32 ಎಥನಾಲ್‌ ಉತ್ಪಾದನ ಘಟಕಗಳಿದ್ದು, ಕಬ್ಬಿನಿಂದ ಮಾತ್ರವಲ್ಲದೆ ಭತ್ತ ಮತ್ತು ಗೋವಿನಜೋಳದ ಹುಲ್ಲು ಮತ್ತಿತರ ಬಹು ವಿಧದ ಉತ್ಪನ್ನಗಳ ಎಥನಾಲ್‌ ಘಟಕಗಳು ಕೂಡ ತಲೆಯೆತ್ತಲಿವೆ ಎಂದರು.

Advertisement

ದೇಶದಲ್ಲಿ 2021-22ರಲ್ಲಿ 800 ಕೋಟಿ ಲೀಟರ್‌ ಎಥನಾಲ್‌ ಉತ್ಪಾದನೆ ಆಗಿದೆ. ಬರುವ ವರ್ಷ ಇದು ಸಾವಿರ ಕೋಟಿ ಲೀಟರ್‌ ತಲುಪುವ ನಿರೀಕ್ಷೆ ಇದೆ. ಈ ಗುರಿ ಸಾಧನೆಯಿಂದ 30 ಸಾವಿರ ಕೋಟಿ ರೂ.ಗಳಷ್ಟು ವಿದೇಶಿ ವಿನಿಮಯ ದಲ್ಲಿ ಉಳಿತಾಯ ಆಗಲಿದೆ. ಇದು ದೇಶದ ಆರ್ಥಿಕ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್‌ ನಿರಾಣಿ ಹೇಳಿದರು.

ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನ ಕೊಪ್ಪ, ಶಾಸಕ ಬೆಳ್ಳಿ ಪ್ರಕಾಶ್‌, ರಾಜ್ಯ ಸಹಕಾರ ಮಾರುಕಟ್ಟೆ ಮಹಾಮಂಡಳದ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

1.30 ಲಕ್ಷ ಕೋ.ರೂ. ಹೂಡಿಕೆ
ರಾಜ್ಯದಲ್ಲಿ ವಿವಿಧ ಯೋಜನೆಗಳಡಿ ಶೀಘ್ರದಲ್ಲೇ 1.30 ಲಕ್ಷ ಕೋ.ರೂ. ಬಂಡವಾಳ ಹೂಡಿಕೆ ಆಗಲಿದೆ. ಈ ಸಂಬಂಧ ಹಲವು ಕಂಪೆನಿಗಳ ಜತೆ ಒಡಂಬಡಿಕೆಗೆ ಸಹಿ ಹಾಕಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next