Advertisement

ಸಸಾಲಟ್ಟಿ-ಮಂಟೂರ ಏತ ನೀರಾವರಿಗೆ ಅನುಮೋದನೆ : ಬಾಗಲಕೋಟೆ-ಬೆಳಗಾವಿ ಜಿಲ್ಲೆಗೆ ಅನುಕೂಲ

02:10 PM Dec 21, 2021 | Team Udayavani |

ಬೆಳಗಾವಿ: ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಹಳಂಗಳಿ ಗ್ರಾಮದ ಬಳಿ ಕೃಷ್ಣಾ ನದಿಯ ನೀರನ್ನು ಎತ್ತುವಳಿ ಮಾಡಿ ಘಟಪ್ರಭಾ ಎಡದಂಡೆ ಕಾಲುವೆಯ ಬಾಧಿತವಾಗಿರುವ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಒದಗಿಸಲು ಸಸಾಲಟ್ಟಿ ಶಿವಲಿಂಗೇಶ್ವರ ಏತ ನೀರಾವರಿ ಯೋಜನೆಯ 266.00 ಕೋಟಿ ರೂ. ಯೋಜನಾ ವರದಿಗೆ ರಾಜ್ಯ ಸಚಿವ
ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

Advertisement

ಘಟಪ್ರಭಾ ಯೋಜನೆಯಡಿ ಬಾಧಿತವಾಗಿರುವ ಒಟ್ಟು ಅಚ್ಚುಕಟ್ಟು ಇದೆ. ಹಳಂಗಳಿ ಗ್ರಾಮದ ಬಳಿ ಕೃಷ್ಣಾ ನದಿಯ ನೀರನ್ನು ಎತ್ತುವಳಿಯ ಮೂಲಕ ಈ ಯೋಜನೆಗೆ ಬಳಸಿಕೊಳ್ಳಲಾಗುವುದು. ಈ ಮೂಲಕ 19128.50 ಹೆಕ್ಟೇರ್‌ ಭೂಮಿಗೆ ನೀರುಣಿಸಲಾಗುವುದು. ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ನೀರನ್ನು ಈ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗುವುದು.

ಇದೇ ರೀತಿಯಾಗಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಗಲಗಲಿ ಗ್ರಾಮದ ಬಳಿ ಕೃಷ್ಣಾ ನದಿಯ ನೀರನ್ನು ಎತ್ತುವಳಿ ಮಾಡುವ ಮೂಲಕ ಬೀಳಗಿ ಶಾಖಾ ಕಾಲುವೆ ಮತ್ತು ದಕ್ಷಿಣ ಶಾಖಾ ಕಾಲುವೆ ಸೇರಿದಂತೆ ಘಟಪ್ರಭಾ ಎಡದಂಡೆ ಕಾಲುವೆ ಈ ಬಾಧಿ ತವಾಗಿರುವ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಒದಗಿಸಲು ರೂ.228 ಕೋಟಿ ವೆಚ್ಚದ ಮಂಟೂರು ಮಹಾಲಕ್ಷ್ಮಿ
ಏತ ನೀರಾವರಿ ಯೋಜನೆಯ ವಿಸ್ತೃತ ಯೋಜನಾ ವರದಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಘಟಪ್ರಭಾ ಎಡದಂಡೆ ಕಾಲುವೆಯ ಅಚ್ಚುಕಟ್ಟು ಪ್ರದೇಶದ ವಿಶೇಷವಾಗಿ ಹಿಂಗಾರು ಹಂಗಾಮಿನಲ್ಲಿ ರೈತರು ನೀರಾವರಿ ಸೌಲಭ್ಯದಿಂದ ವಂಚಿತರಾಗುತ್ತಿದ್ದು, ವಿಳಂಬವಾದ ಮಾರುತಗಳಿಂದ ಜೂನ್‌ ಮತ್ತು ಜುಲೈ ತಿಂಗಳಿನಲ್ಲಿ ಮಳೆಯ ಕೊರತೆಯಿಂದಾಗಿ ನೀರಾವರಿ ಸೌಲಭ್ಯ ಬಾಧಿತವಾಗಿದೆ. ಹಿರಣ್ಯಕೇಶಿ ನದಿಯಲ್ಲಿ ಒಳ ಹರಿವು ಸಾಮಾನ್ಯವಾಗಿಲ್ಲದೇ ಅಡೆತಡೆಯಿಂದ ಕೂಡಿದೆ ಎಂದು ಅಧ್ಯಯನ ವರದಿಗಳು ತಿಳಿಸಿವೆ.

ಹಿಂಗಾರು ಹಂಗಾಮಿನಲ್ಲಿ ಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡುಗಡೆ ಮಾಡುವ ವ್ಯವಸ್ಥೆಯು ಧೂಪದಾಳ ಅಣೆಕಟ್ಟೆಯ ಮೇಲೆ ಅವಲಂಬಿತವಾಗಿದೆ. ಆದರೆ ಅಲ್ಲಿ ನೀರಿನ ಹರಿವು ಸಾಕಷ್ಟು ಪ್ರಮಾಣದಲ್ಲಿ ಇಲ್ಲದೇ ಇರುವುದರಿಂದ 44566.41 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕೊರತೆ ಉಂಟಾಗಿದೆ. ಇದರಿಂದಾಗಿ ಕೃಷ್ಣಾ ನದಿಯ ನೀರನ್ನು ಬಳಕೆ ಮಾಡುವ ಮೂಲಕ ಎರಡೂ ಯೋಜನೆಗಳನ್ನು ಕೈಗೆತ್ತಿಕೊಂಡು ಸೌಲಭ್ಯ ವಂಚಿತ ನೀರಾವರಿ ಭೂಮಿಗೆ ನೀರೊದಗಿಸಲು ತೀರ್ಮಾನಿಸಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next