Advertisement

ಬೆಂಗಳೂರು ಪೊಲೀಸರ ವಿರುದ್ಧ ಇ.ಡಿ.ಆಕ್ರೋಶ​​​​​​​

06:00 AM Nov 17, 2018 | |

ಬೆಂಗಳೂರು: ಬಹುಕೋಟಿ ವಂಚನೆಯ ಆ್ಯಂಬಿಡೆಂಟ್‌ ಪ್ರಕರಣ ಮತ್ತೂಂದು ಮಗ್ಗಲಿಗೆ ಹೊರಳಿದೆ. ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ)ದ ಹೆಸರು ಪ್ರಸ್ತಾಪ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್‌ ನಡೆಗೆ ಇ.ಡಿ. ತಿರುಗಿ ಬಿದ್ದಿದೆ.

Advertisement

ಜತೆಗೆ, ಆ್ಯಂಬಿಡೆಂಟ್‌ ಕಂಪನಿ ವಿರುದ್ಧ ನಗರ ಪೊಲೀಸರು ದಾಖಲಿಸಿಕೊಂಡಿರುವ ಪ್ರಕರಣದ ಸಮಗ್ರ ಮಾಹಿತಿ ನೀಡಿ. ಈ ಪ್ರಕರಣವು “ಲೇವಾದೇವಿ ವ್ಯವಹಾರ ನಿಯಂತ್ರಣ ಕಾಯ್ದೆ'(ಪಿಎಂಎಲ್‌ಎ) ಉಲ್ಲಂಘನೆ ಆಗಿದ್ದರೆ ಪರಿಶೀಲಿಸಲಾಗುವುದು ಎಂದು ಜಾರಿ ನಿರ್ದೇಶನಾಲಯದ ಜಂಟಿ ನಿರ್ದೇಶಕ ರಮಣ ಗುಪ್ತಾ ಅವರು ಬೆಂಗಳೂರು ಪೊಲೀಸ್‌ ಆಯುಕ್ತ ಸುನಿಲ್‌ ಕುಮಾರ್‌ ಅವರಿಗೆ ಪತ್ರ ಬರೆದಿದ್ದಾರೆ.

ಆ್ಯಂಬಿಡೆಂಟ್‌ ಕಂಪನಿಯ ವಂಚನೆ ಪ್ರಕರಣದಲ್ಲಿ”ನಗರ ಪೊಲೀಸ್‌ ಆಯುಕ್ತರು ನ.7ರಂದು ಹೊರಡಿಸಿದ್ದ ಪತ್ರಿಕಾ ಪ್ರಕಟಣೆಯಲ್ಲಿ ಇ.ಡಿ.ವಿಚಾರವನ್ನು ಅನಗತ್ಯವಾಗಿ ಪ್ರಸ್ತಾಪಿಸಿರುವುದರಿಂದ, ಸಾರ್ವಜನಿಕ ವಲಯದಲ್ಲಿ ತನಿಖಾ ಸಂಸ್ಥೆ ಬಗ್ಗೆ ಅನುಮಾನಗಳು ಹುಟ್ಟುಕೊಳ್ಳುತ್ತಿವೆ’ ಎಂದು ಇ.ಡಿ. ಅಸಮಾಧಾನ ವ್ಯಕ್ತಪಡಿಸಿದೆ.

“ಪ್ರಕರಣದಲ್ಲಿ ನಮ್ಮ ಸಂಸ್ಥೆಯ ಹೆಸರು ಕೇಳಿ ಬಂದ ಕೂಡಲೇ ನಿರ್ದೇಶನಾಲಯದ ಅಧಿಕಾರಿಗಳನ್ನು ಸಂಪರ್ಕಿಸಿ ಸತ್ಯಾಸತ್ಯತೆ ಖಚಿತಪಡಿಸಿಕೊಳ್ಳಲು ಯಾವುದೇ ಪ್ರಯತ್ನ ಮಾಡಿಲ್ಲ’ ಎಂದೂ ಪತ್ರದಲ್ಲಿ ತಿಳಿಸಲಾಗಿದೆ.

ಆ್ಯಂಬಿಡೆಂಟ್‌ ಕಂಪನಿಯ ಅಕ್ರಮ ವಹಿವಾಟಿಗೆ ಸಂಬಂಧಿಸಿದಂತೆ ಇ.ಡಿ. ಕೈಗೊಂಡಿರುವ ಕ್ರಮಗಳ ಬಗ್ಗೆ ಪತ್ರದಲ್ಲಿ ವಿವರಿಸಿರುವ ರಮಣ್‌ ಗುಪ್ತಾ, 2016ರಿಂದ ಇದುವರೆಗೂ “ಹಜ್‌/ಉಮ್ರಾ’ ಯೋಜನೆ ಹೆಸರಿನಲ್ಲಿ ಮಾಸಿಕ ಶೇ.12ರಷ್ಟು ಬಡ್ಡಿ ಸೇರಿ ಕೊಡುವುದಾಗಿ ಕಂಪನಿ ಹಣ ಸಂಗ್ರಹಿಸಿತ್ತು. ಈ ಸಂಬಂಧ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೇಮಾ) ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು 1.97ಕೋಟಿ ರೂ.ವಶಕ್ಕೆ ಪಡೆಯಲಾಗಿತ್ತು. ಅಲ್ಲದೆ, ಈ  ಕಂಪನಿಯ ವ್ಯವಹಾರಗಳ ಬಗ್ಗೆ ಸೆಬಿ, ಆರ್‌ಬಿಐ ಹಾಗೂ ಕಾರ್ಪೋರೇಟ್‌ ವ್ಯವಹಾರಗಳ ಸಚಿವಾಲಯ ಕೂಡ ಕಂಪನಿಯ ವ್ಯವಹಾರದ ಮೇಲೆ ನಿಗಾವಹಿಸಿದೆ ಎಂದು ಸ್ಪಷ್ಟಪಡಿಸಿದೆ.

Advertisement

ನಗರ ಪೊಲೀಸ್‌ ಆಯುಕ್ತರ ಪತ್ರಿಕಾ ಹೇಳಿಕೆಯಲ್ಲಿ ಏನಿತ್ತು?
ಆ್ಯಂಬಿಡೆಂಟ್‌ ಕಂಪನಿಯ ಮಾಲೀಕ ಸೈಯದ್‌ ಅಹಮದ್‌ ಫ‌ರೀದ್‌, ವಿರುದಟಛಿ ಇ.ಡಿ.ಯಲ್ಲಿ ನಡೆಯುತ್ತಿರುವ ಪ್ರಕರಣದಲ್ಲಿ ಸಹಾಯ ಕೋರಿ ಜನಾರ್ದನರೆಡ್ಡಿ ಹಾಗೂ ಆತನ ಆಪ್ತ ಆಲಿಖಾನ್‌ ರವರೊಂದಿಗೆ ಸಭೆ ನಡೆಸಿ, ಇದಕ್ಕಾಗಿ 20 ಕೋಟಿ ರೂ.ಹಣವನ್ನು ನೀಡಲು ಮಾತುಕತೆ ನಡೆಸಿದ್ದಾರೆ. 

ಈ ವೇಳೆ 20 ಕೋಟಿ ರೂ.ಹಣವನ್ನು ಚಿನ್ನದ ರೂಪದಲ್ಲಿ ನೀಡುವಂತೆ ಜನಾರ್ದನ ರೆಡ್ಡಿಯು ಷರತ್ತು ವಿಧಿಸಿದ್ದರು. ಅದರಂತೆ ಸೈಯದ್‌ ಅಹಮ್ಮದ್‌ ಫ‌ರೀದ್‌, ಅಲಿಖಾನ್‌ಗೆ ಪರಿಚಯವಿರುವ ಬಳ್ಳಾರಿಯ ರಾಜಮಹಲ್‌ ಫ್ಯಾನ್ಸಿ ಜುವೆಲ್ಲರ್ನ ರಮೇಶ್‌ ಮೂಲಕ ಬೆಂಗಳೂರಿನ ಅಂಬಿಕಾ ಸೇಲ್ಸ್‌ ಕಾರ್ಪೊರೇಷನ್‌ನ ರಮೇಶ್‌ ಕೊಠಾರಿ ಬಳಿ 18 ಕೋಟಿ ರೂ. ಮೊತ್ತದ 57 ಕೆ.ಜಿ ಚಿನ್ನವನ್ನು ಖರೀದಿಸಿ ಜನಾರ್ದನ ರೆಡ್ಡಿಗೆ ತಲುಪಿಸಿರುವುದು ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸ್‌ ಆಯುಕ್ತರ ಪ್ರಕಟಣೆಯಲ್ಲಿ ಉಲ್ಲೇಖೀಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next