Advertisement

ಸಂಗ್ರಹಿಸಲಾಗುತ್ತಿದೆ ಹಾನಿಯ ಅಂದಾಜು

11:19 AM Aug 27, 2019 | Team Udayavani |

ಜಮಖಂಡಿ: ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ, ಮೂಲಭೂತ ಸೌಕರ್ಯ ಸಹಿತ ಒಟ್ಟಾರೆ ಜನಜೀವನ ತೀವ್ರ ಅಸ್ತವ್ಯಸ್ತವಾಗಿದ್ದು, ಹಾನಿಯ ಅಂದಾಜು ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಕೇಂದ್ರ ಅಧ್ಯಯನ ತಂಡದ ಪ್ರಕಾಶ ಹೇಳಿದರು.

Advertisement

ನಗರದಲ್ಲಿ ರವಿವಾರ ರಾತ್ರಿ ಪ್ರವಾಹ ಸಂದರ್ಭದಲ್ಲಿ ಡ್ರೋಣ್‌ ಕ್ಯಾಮೆರಾ ಮೂಲಕ ಸೆರೆ ಹಿಡಿದ ಪ್ರವಾಹ ದೃಶ್ಯಗಳನ್ನು ವೀಕ್ಷಿಸಿ ಮಾತನಾಡಿದ ಅವರು, ತಾಲೂಕಿನ ಬಹುತೇಕ ಗ್ರಾಮಗಳು ಕೃಷ್ಣಾನದಿ ಪ್ರವಾಹಕ್ಕೆ ತೊಂದರೆಗೆ ಸಿಲುಕಿವೆ. ನೆರೆಪ್ರವಾಹದಿಂದ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದರು.

ಜಿಲ್ಲೆಯಲ್ಲಿ ಪ್ರವಾಹದಿಂದ ರೈತರ ಪ್ರಮುಖ ಬೆಳೆಗಳಾದ ಕಬ್ಬು, ದಾಳಿಂಬೆ, ಜನ-ಜಾನುವಾರು, ಸೇತುವೆ ಹಾಗೂ ರಸ್ತೆಗಳು ತೀವ್ರ ಹಾನಿಗೊಳಗಾಗಿದೆ. ಇನ್ನೊಂದು ಅಧ್ಯಯನ ಭೇಟಿ ಕೈಗೊಂಡು ನಿಖರ ಹಾನಿ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಸೇತುವೆ ಹಾನಿ ವೀಕ್ಷಣೆ: ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಸೇತುವೆ ಹಾನಿ ವೀಕ್ಷಿಸಿ ಸಮಗ್ರ ಮಾಹಿತಿ ಸಂಗ್ರಹಿಸಿ ಮಾಹಿತಿ ಪಡೆಯಿತು

ತಾತ್ಕಾಲಿಕ ದುರಸ್ತಿ: ಚಿಕ್ಕಪಡಸಲಗಿ ಸೇತುವೆ ಹಾನಿಯಾಗಿದ್ದು, ತಾಲೂಕಾಡಳಿತ ತಾತ್ಕಾಲಿಕವಾಗಿ ರಸ್ತೆ ಸುಧಾರಣೆ ಮಾಡಿರುವುದನ್ನು ಕೇಂದ್ರ ಪ್ರವಾಹ ಅಧ್ಯಯನ ತಂಡ ವೀಕ್ಷಿಸಿತು.

Advertisement

ಎರಡೂ ಗ್ರಾಮದ ಸಂಪರ್ಕ ಸೇತುವೆ ತಾತ್ಕಾಲಿಕ ದುರಸ್ತಿಯಾದಲ್ಲಿ ಜನ-ಜಾನುವಾರುಗಳಿಗೆ ಕಾಲ್ನಡಿಗೆ ಮೂಲಕ ತೆರಳಲು ಅನುಕೂಲವಾಗಲಿದೆ ಎಂದು ಅಧ್ಯಯನಕ್ಕೆ ತಂಡಕ್ಕೆ ಡಿಸಿ ಅವರು ಮನವರಿಕೆ ಮಾಡಿದರು. ಸೇತುವೆ ಮೇಲ್ಧಾವಣಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ದುರಸ್ತಿಗೆ ಕನಿಷ್ಟ ಎರಡು ತಿಂಗಳು ಕಾಲಾವಕಾಶ ಅಗತ್ಯವಿದೆ ಎಂದು ಡಿಸಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next