Advertisement

ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಆರಂಭ: ಶೇ.20ರಷ್ಟು ಶಿಕ್ಷಕರ ಗೈರು ಹಾಜರಿ

12:03 PM Apr 21, 2017 | |

ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಲ್ಲಿ ನಡೆಸಿದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ರಾಜ್ಯಾದ್ಯಂತ ಗುರುವಾರದಿಂದ ಆರಂಭವಾಗಿದೆ. ಸಕಾರಣವಿಲ್ಲದೆ ಮೌಲ್ಯಮಾಪನಕ್ಕೆ ಗೈರುಹಾಜರಾದ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಮಂಡಳಿ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಮೊದಲ ದಿನ ಶೇ.80ರಷ್ಟು ಶಿಕ್ಷಕರು ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗಿದ್ದಾರೆ.

Advertisement

ಶೇ. 20ರಷ್ಟು ಶಿಕ್ಷಕರು ಗೈರು ಹಾಜರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಗೈರು ಹಾಜ ರಾಗಿರುವ ಎಲ್ಲಾ ಶಿಕ್ಷಕರೂ ಶುಕ್ರವಾರ ತಮ್ಮನ್ನು ನಿಯೋಜಿ ಸಿರುವ ಮೌಲ್ಯಮಾಪನ ಕೇಂದ್ರ ಗಳಿಗೆ ಹಾಜರಾಗಿ ವರದಿ ಮಾಡಿಕೊಳ್ಳಬೇಕು. ತಪ್ಪಿದರೆ ಕರ್ನಾಟಕ ಶಿಕ್ಷಣ ಕಾಯ್ದೆ ಪ್ರಕಾರ ಶಿಸ್ತು ಕ್ರಮ ಕೈಗೊಳ್ಳ ಲಾಗುವುದು ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ಯಶೋದಾ ಬೋಪಣ್ಣ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. 

ರಾಜ್ಯಾದ್ಯಂತ 225 ಕೇಂದ್ರಗಳಲ್ಲಿ ಮೌಲ್ಯ ಮಾಪನ ನಡೆಯುತ್ತಿದ್ದು, ಉಪಮುಖ್ಯಮೌಲ್ಯ ಮಾಪಕರು, ಸಹಾಯಕ ಮುಖ್ಯಮೌಲ್ಯಮಾಪಕರು ಮಂಗಳವಾರ ಮತ್ತು ಬುಧವಾರ ಹಾಜರಾಗಿ ಉತ್ತರಪತ್ರಿಕೆಗಳ ಕೋಡಿಂಗ್‌, ಡೀಕೋಡಿಂಗ್‌ ಕಾರ್ಯ ಮುಗಿಸಿದ್ದರು. ಗುರುವಾರ ಸುಮಾರು 45 ಸಾವಿರ ಶಿಕ್ಷಕರು ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗಿದ್ದಾರೆ. 

ಮೇ 10ರಂದು ಫ‌ಲಿತಾಂಶ ಕಷ್ಟವಲ್ಲ: ಮೌಲ್ಯಮಾಪನ ಕಾರ್ಯ ಸಮರ್ಪಕವಾಗಿ ನಡೆದರೆ ಮೇ 10ಕ್ಕೆ ಫ‌ಲಿತಾಂಶ ನೀಡಲು ಶಿಕ್ಷಣ ಇಲಾಖೆ ಸಿದ್ಧತೆ ಆರಂಭಿಸಿದೆ. ಮೌಲ್ಯಮಾಪನಕಾರ್ಯ ಪೂರ್ಣಗೊಳ್ಳಲು ಎಷ್ಟು ದಿನ ಬೇಕು ಎಂದು ಈಗಲೇ ಹೇಳಲು ಸಾಧ್ಯವಿಲ್ಲ.

ಎಲ್ಲವೂ ವ್ಯವಸ್ಥಿತವಾಗಿ ಮತ್ತು ಅಂದುಕೊಂಡಂತೆ ನಡೆದರೆ ಸಚಿವರು ಹೇಳಿದಂತೆ ಮೇ 10ಕ್ಕೆ ಫ‌ಲಿತಾಂಶ ನೀಡುವುದು ಕಷ್ಟವಲ್ಲ ಎಂದು ವೇನೂ ಆಗುವುದಿಲ್ಲ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ಯಶೋದಾ ಬೋಪಣ್ಣ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next