Advertisement
ಜೈಲುಗಳ ಅಭಿವೃದ್ಧಿ, ಅಧಿಕಾರಿಗಳಿಗೆ ಸೌಲಭ್ಯ ಮತ್ತು ಕೈದಿಗಳ ಸುಧಾರಣೆ ಮಾಡುವ ಉದ್ದೇಶದಿಂದ ಕಾರಾಗೃಹ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಲಾಗುವುದು. ಈ ಮೂಲಕ ಮಾನವ ಹಕ್ಕುಗಳ ಆಯೋಗಗಳ ಶಿಫಾರಸು ಜಾರಿಗೆ ತರಲಾಗುವುದು ಎಂದರು. ಪ್ರಾಯಶ್ಚಿತ್ತ ಮತ್ತು ಪಶ್ಚಾತ್ತಾಪ ಎರಡೂ ಬಹು ದೊಡ್ಡ ಗುಣಗಳು. ಈ ಗುಣಗಳನ್ನು ಸಾಧನವಾಗಿ ಬಳಸಿ ಸನ್ನಡತೆ ರೂಢಿಸಿಕೊಳ್ಳಬೇಕು. ಸನ್ನಡತೆ ಆಧಾರದಲ್ಲಿ ಬಿಡುಗಡೆಯಾ ಗುತ್ತಿರುವ ಕೈದಿಗಳು ಹೊರಗಡೆ ಹೋಗುತ್ತಿದ್ದಂತೆ ಸಕಾರಾತ್ಮ ಕವಾಗಿ ಜೀವನ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
Related Articles
Advertisement
ಈ ವೇಳೆ ಮಾತನಾಡಿದ ಸಜಾಬಂಧಿ ಛತ್ರಪತಿ, “ನಾನು ಶಿವಮೊಗ್ಗ ಜಿಲ್ಲೆಯ ಆಯನೂರು ಮೂಲದವನಾಗಿದ್ದು, ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದೇನೆ. ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡಿದ್ದು, ಇದೀಗ ಕಂಪ್ಯೂಟರ್ ತರಬೇತಿ ಪಡೆಯುತ್ತಿದ್ದೇನೆ. ಈ ಮೂಲಕ ಡೇಟಾ ಎಂಟ್ರಿ, ಟ್ಯಾಲಿ, ಹಾರ್ಡ್‌ವೇರ್ ಕಲಿಯುತ್ತೇನೆ. ಒಂದು ವೇಳೆ ಜಾಮೀನು ಪಡೆದು ಹೊರ ಹೋದರೆ ತಂತ್ರಜ್ಞಾನದ ಮೂಲಕ ಹೊಸ ಬದುಕು ಕಟ್ಟಿಕೊಳ್ಳುತ್ತೇನೆ ಎಂದು ಹೇಳಿದರು.
141 ಬಂಧಿಗಳ ಬಿಡುಗಡೆ: ಸನ್ನಡತೆ ಆಧಾರದಲ್ಲಿ ಬೆಂಗಳೂರಿನ 71, ಮೈಸೂರಿನ 23, ಬೆಳಗಾವಿಯ ಒಬ್ಬ ಮಹಿಳೆ ಸೇರಿ 6, ಕಲಬುರಗಿ 13, ವಿಜಯಪುರ 6, ಬಳ್ಳಾರಿ 11 ಹಾಗೂ ಧಾರವಾಡದ 11 ಮಂದಿ ಸೇರಿ ಒಟ್ಟು 141 ಮಂದಿ ಕೈದಿಗಳನ್ನು ಬಿಡುಗಡೆ ಮಾಡಲಾಯಿತು.
ಕಾರಾಗೃಹ ಎಡಿಜಿಪಿ ಎನ್.ಎಸ್. ಮೇಘರಿಕ್, ಗೃಹ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ರಜನೀಶ್ ಗೋಯಲ್, ಕಾರ್ಯದರ್ಶಿ ಬಿ.ಕೆ.ಸಿಂಗ್, ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ಸಮಾಲೋಚಕರು ಎಚ್.ಎಸ್.ರೇವಣ್ಣ ಹಾಗೂ ಶಾಸಕರಾದ ಎಂ.ಕೃಷ್ಣಪ್ಪ, ಸೌಮ್ಯರೆಡ್ಡಿ, ಕಾರಾಗೃಹ ಮುಖ್ಯ ಅಧೀಕ್ಷಕ ವಿ.ಶೇಷುಮೂರ್ತಿ, ಅಧೀಕ್ಷಕಿ ಆರ್. ಲತಾ ಇತರರು ಇದ್ದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಮಹಿಳಾ ಕೈದಿಗಳು ತಯಾರಿಸುವ ತಂಜಾವೂರು ಕಲಾಕೃತಿಗಳನ್ನು ಗೃಹ ಸಚಿವರು ಹಾಗೂ ಅತಿಥಿಗಳಿಗೆ ಉಡುಗೊರೆಯಾಗಿ ನೀಡಲಾಯಿತು.
ಔರಾದ್ಕರ್ ವರದಿಯಲ್ಲಿ ಪೊಲೀಸ್ ಇಲಾಖೆಯವರಿಗೆ ಸೌಲಭ್ಯಗಳನ್ನು ಕಲ್ಪಿಸಿದ್ದು, ಅದರಲ್ಲಿ ಕಾರಾಗೃಹ ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಸೇರ್ಪಡೆ ಮಾಡಿರ ಲಿಲ್ಲ. ಇದೀಗ ಅವರಿಗೂ ಕೂಡ ಔರಾದ್ಕರ್ ವರದಿಯಂತೆ ಎಲ್ಲ ಸೌಲಭ್ಯಗಳನ್ನು ನೀಡಲು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದಕ್ಕೆ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ.-ಬಸವರಾಜ ಬೊಮ್ಮಾಯಿ, ಗೃಹ ಸಚಿವ