Advertisement

ರಾಯಣ್ಣ ಮೂರ್ತಿ ಸ್ಥಾಪನೆ; ಗೆಜೆಟ್ ನೋಟಿಫಿಕೇಶನ್ ಹೊರಡಿಸಲು ಕ್ರಮ: ಜಾರಕಿಹೊಳಿ

12:50 PM Aug 29, 2020 | Mithun PG |

ಬೆಳಗಾವಿ: ಶಿವಾಜಿ ಮಹಾರಾಜರು ಹಾಗೂ ಸಂಗೊಳ್ಳಿ ರಾಯಣ್ಣ ಯಾವುದೇ ಜಾತಿಗೆ ಸೀಮಿತರಲ್ಲ. ಪೀರನವಾಡಿಯಲ್ಲಿ ಉಲ್ಭಣಿಸಿದ್ದ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ವಿವಾದ ಸುಖಾಂತ್ಯ ಕಂಡಿದ್ದು, ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಕುರಿತು ಗೆಜೆಟ್ ನೋಟಿಫಿಕೇಶನ್ ಹೊರಡಿಸಲು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು‌ ಜಲಸಂಪನ್ಮೂಲ ಸಚಿವ   ರಮೇಶ ಜಾರಕಿಹೊಳಿ ಹೇಳಿದರು.

Advertisement

ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೀರನವಾಡಿಯಲ್ಲಿನ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದ ಸುಖಾಂತ್ಯಗೊಂಡಿದೆ. ರಾಯಣ್ಣ ಹಾಗೂ ಶಿವಾಜಿ ಯಾವುದೇ ಜಾತಿಗೆ ಸೀಮಿತರಲ್ಲ.‌ ಜಾತಿಗೆ ಸೀಮಿತಗೊಳಿಸುವುದು ತಪ್ಪು.‌ ಇವರಿಬ್ಬರೂ ನಮ್ಮ ಸಮಾಜದ ಆಸ್ತಿ. ಇಂಥ ವೀರ ಪುರುಷರಿಗೆ ಅವಮಾನ ಆಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು.

ಕನ್ನಡ ಸಂಘಟನೆಯವರ ಮೇಲಿನ ಪ್ರಕರಣಗಳ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.‌ ಇಂಥ ವಿಷಯಗಳ ಬಗ್ಗೆ ನಾನೊಬ್ಬನೇ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ. ಪ್ರಕರಣ ಹಿಂಪಡೆಯುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ಹೇಳಿದರು.

ಶಿವಸೇನೆ ಉದ್ದೇಶವೇ ಪತ್ರ ಬರೆಯೋದು. ಪತ್ರ ಬರೆಯುವುದನ್ನು ಶಿವಸೇನೆ ಅಜೆಂಡಾ ಮಾಡಿಕೊಂಡಿದೆ.‌ ಅಜೆಂಡಾ ಇಟ್ಟುಕೊಂಡೇ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಶಿವಸೇನೆ ಏರಿದೆ. ಇಂಥಹ ವಿಷಯಗಳಿಗೆ ಬಹಳ ಮಹತ್ವ ಕೊಡುವ ಅಗತ್ಯವಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next