Advertisement

ಹೆಸರು-ಉದ್ದು ಖರೀದಿ ಕೇಂದ್ರ ಸ್ಥಾಪನೆ

06:56 PM Oct 02, 2020 | Suhan S |

ಯಾದಗಿರಿ: ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಹೆಸರು, ಉದ್ದು ಖರೀದಿಗೆಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ  ಡಾ| ರಾಗಪ್ರಿಯಾ ಆರ್‌. ತಿಳಿಸಿದ್ದಾರೆ.

Advertisement

ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಏಫ್‌ಪಿಒಗಳ ಮೂಲಕ ಹೆಸರು ಕಾಳು ಪ್ರತಿ ಕ್ವಿಂಟಾಲ್‌ಗೆ ಸರ್ಕಾರದ ಬೆಂಬಲ ಬೆಲೆ 7,196 ರೂ.ದಂತೆ, ಪ್ರತಿಯೊಬ್ಬ ರೈತರಿಂದ ಎಕರೆಗೆ 4 ಕ್ವಿಂಟಾಲ್‌ ಖರೀದಿಸಲಾಗುವುದು. ಉದ್ದು ಪ್ರತಿಕ್ವಿಂಟಾಲ್‌ಗೆ ಬೆಂಬಲ ಬೆಲೆ 6000 ರೂ.ನಂತೆ ಪ್ರತಿಯೊಬ್ಬ ರೈತರಿಂದ ಎಕರೆಗೆ ಕನಿಷ್ಠ 3 ಕ್ವಿಂಟಲ್‌, ಗರಿಷ್ಠ 6 ಕ್ವಿಂಟಲ್‌ ಖರೀದಿಸಲಾಗುವುದು. ಉದ್ದು ಖರೀದಿಸುವ ಸಂಬಂಧ, ಜಿಲ್ಲೆಯಲ್ಲಿ ಶ್ರೀ ವಾತ್ಸ ಎಫ್‌ಪಿಒ ಗುರುಮಠಕಲ್‌ ವತಿಯಿಂದ ಯಾದಗಿರಿ ನಗರದಲ್ಲಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಚಪೇಟ್ಲಾಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಹೆಸರುಕಾಳು ಹಾಗೂ ಉದ್ದು ಖರೀದಿಗೆ ರೈತರ ನೋಂದಣಿ ಕಾರ್ಯ ಸೆ. 30ರಿಂದ ಅ,29ರವರೆಗೆ ಹಾಗೂ ನೋಂದಣಿ ಜೊತೆಗೆ ಖರೀದಿಸಲಾಗುವುದು ಎಂದು ತಿಳಿಸಿದ್ದಾರೆ.

ರೈತರು ಹತ್ತಿರದ ಖರೀದಿ ಕೇಂದ್ರಗಳಲ್ಲಿ ಪಹಣಿ, ಆಧಾರ್‌ ಕಾರ್ಡ್‌, ಕೃಷಿ ಇಲಾಖೆ ನೀಡುವ ಫ್ರೂಟ್ಸ್‌ ಐಡಿ ಪ್ರತಿಗಳೊಂದಿಗೆ ಹೆಸರು ನೋಂದಾಯಿಸಬೇಕು.

ಖರೀದಿ ಕೇಂದ್ರಗಳು: ಶ್ರೀ ವಾತ್ಸ ಎಫ್‌ಪಿಒ, ಗುರುಮಠಕಲ್‌, ಯಾದಗಿರಿ ನಗರದಲ್ಲಿ, ಪಿಕೆಪಿಎಸ್‌ ಚಪೇಟ್ಲಾ, ಪಿಕೆಪಿಎಸ್‌ ಹತ್ತಿಕುಣಿ, ಪಿಕೆಪಿಎಸ್‌ ಎಲ್ಲೇರಿ, ಫಾರ್ಮರ್‌ ಪ್ರೊಡ್ಯುಸರ್‌ ಆರ್ಗನೈಜೇಷನ್‌ (ಎಫ್‌ಪಿಒ)ಸೈದಾಪುರ, ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತ ಶಹಾಪುರ, ಫಾರ್ಮರ್‌ ಪ್ರೊಡ್ಯುಸರ್‌ ಆರ್ಗನೈಜೇಷನ್‌ (ಎಫ್‌ಪಿಒ) ಗಂಗನಾಳ, ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತ ಸುರಪುರ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕೆಂಭಾವಿ-1, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕೊಡೇಕಲ್‌ ಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next