ಬೆಂಗಳೂರು: ಆಸ್ಪತ್ರೆಗಳ ಶವಾಗಾರಗಳಲ್ಲಿ ಕೋವಿಡ್ 19 ಪರೀಕ್ಷೆ ಮುಗಿಯದೆ ಪಾರ್ಥಿವ ಶರೀರ ಕೊಡುತ್ತಿಲ್ಲ ಎಂಬ ದೂರುಗಳು ಇದ್ದು ಆ ಸಮಸ್ಯೆ ನಿವಾರಣೆಗೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ತಿಳಿಸಿದ್ದಾರೆ. ಗುರುವಾರ ಸಿಸ್ಕೋ ವತಿಯಿಂದ ಐಸಿಯೂ ಟೆಲಿಕಾರ್ಡ್ ಸೇವೆಗೆ ಚಾಲನೆ ನೀಡಿ ಮಾತನಾಡಿ, ಕೋವಿಡ್ 19 ಪರೀಕ್ಷೆಗೆ ಹೆಚ್ಚು ಪ್ರಯೋ ಗಾಲಯ ಆರಂಭಿಸಲು ಮುಖ್ಯಮಂತ್ರಿಯವರು ಆದೇಶಿಸದ್ದಾರೆ.
ತಜ್ಞರ ಸಭೆಯಲ್ಲೂ ಆ ಕುರಿತು ಚರ್ಚೆ ಯಾಗಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿ ಯಲಿದೆ ಎಂದರು. ಪ್ಲಾಸ್ಮಾ ಥೆರಪಿ ಎಲ್ಲ ಜಿಲ್ಲೆಗಳಲ್ಲಿ ಮಾಡಲು ತೀರ್ಮಾನ ಮಾಡುತ್ತಿದ್ದೇವೆ. ಪ್ರತಿ ವಾರ್ಡ್‌ಗೆ ಎರಡು ಆ್ಯಂಬುಲೆನ್ಸ್ ಮೀಸಲಿಡಲು ತೀರ್ಮಾನಿ ಸಲಾಗಿದೆ. ಆ್ಯಂಬುಲೆನ್ಸ್ ಕೊರತೆಯಾದರೆ ಖಾಸಗಿ ಯವರ ಬಳಿ ಬಾಡಿಗೆಗೆ ಪಡೆಯಲಾಗುವುದು ಎಂದರು. ಕೋವಿಡ್ 19 ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿಯ ಸೇವೆ ಅತ್ಯಗತ್ಯ. ಎಂದು ಹೇಳಿದರು.
ಗುತ್ತಿಗೆ ವೈದ್ಯರ ವೇತನ ಹೆಚ್ಚಳ: ಆರೋಗ್ಯ ಇಲಾಖೆ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 504 ಗುತ್ತಿಗೆ ವೈದ್ಯರ ವೇತನವನ್ನು 45,000 ದಿಂದ 60,000ಕ್ಕೆ ಹೆಚ್ಚಿಸಿ ಸರ್ಕಾರ ಆದೇಶಿಸಿದೆ. ವೇತನ ಹೆಚ್ಚಳದೊಂದಿಗೆ ಸೇವೆ ಕಾಯಂಗೊಳಿಸುಬೇಕು ಎಂದು ಅನೇಕ ದಿನಗಳಿಂದ ಗುತ್ತಿಗೆ ವೈದ್ಯರು ಪ್ರತಿಭಟನೆ ಮಾಡುತ್ತಾ ಬಂದಿದು. ಸರ್ಕಾರ ಸ್ಪಂದಿಸದ ಹಿನ್ನೆಲೆ ಜು.1 ರಂದು ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿ ಸುತ್ತಿದ್ದ 507 ಗುತ್ತಿಗೆ ವೈದ್ಯರು ಜಿಲ್ಲಾಧಿಕಾರಿಗಳಿಗೆ ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದರು.
ಜು.8 ರಿಂದ ಕೆಲಸ ಬಹಿಷ್ಕರಿಸುವುದಾಗಿ ಹೇಳಿದ್ದರು. ಸದ್ಯ ಸರ್ಕಾರ ವೇತನ ಹೆಚ್ಚಿಸಿ ಆದೇಶ ಹೊರಡಿಸಿದೆ. ಇನ್ನೊಂಡೆದೆ ಸರ್ಕಾರ ಕೇವಲ ವೇತನ ಹೆಚ್ಚಿಸಿದ್ದು, ಸೇವಾ ಭದ್ರತೆ ನೀಡಿಲ್ಲ. ಸಾವಿರಾರು ಹುದ್ದೆಗಳು ಖಾಲಿ ಇದ್ದರು ನಮ್ಮನ್ನು ಕಾಯಂ ಮಾಡಿಕೊಂಡಿಲ್ಲ. ವೇತನಕ್ಕಿಂತ ಸೇವಾಭದ್ರತೆಯಾಗಬೇಕಿದೆ ಎಂದು ಹಾಸನದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ನಿತಿನ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.