Advertisement
ಜಿಪಂ ವತಿಯಿಂದ ಗುರುತಿಸಲಾದ ಮಹಾತ್ಮ ಗಾಂಧಿಧೀಜಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಯನಿರ್ವಹಿಸುವ ಕೂಲಿ ಕಾರ್ಮಿಕ ಮಹಿಳೆಯರ ಶಿಶು ಗಳಿಗೆ ಹಾಗೂ ಇತರ ಕಾರ್ಮಿಕ ವರ್ಗದ ಮಕ್ಕಳಿಗಾಗಿ ಹಿರೇಕೆರೂರು ತಾಲೂಕಿನ ಕೋಡ ಗ್ರಾಮ ಹಾಗೂ ಸವಣೂರ ತಾಲೂ ಕಿನ ತೆವರಮೆಳ್ಳಳ್ಳಿ ಗ್ರಾಮದಲ್ಲಿ ಗುರುತಿಸಲಾದ ಶಿಶು ಪಾಲನಾ ಕೇಂದ್ರದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Related Articles
Advertisement
ಜಿಪಂ ಉಪಕಾರ್ಯದರ್ಶಿ ಸೋಮಶೇಖರ ಮುಳ್ಳಳ್ಳಿ ಮಾತನಾಡಿ, ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಎರಡು ಶಿಶುಪಾಲನಾ ಕೇಂದ್ರ ಸ್ಥಾಪನೆಗೆ ಸ್ಥಳ ಆಯ್ಕೆ ಮಾಡಲಾಗಿದ್ದು, ಹಿರೇಕೆರೂರು ತಾಲೂಕಿನ ಕೋಡ ಗ್ರಾಮದಲ್ಲಿ(ಕೋಡ ಗ್ರಾಮದಲ್ಲಿ 1500 ಕೂಲಿಕಾರರು ಕೆಲಸ ನಿರ್ವಹಿಸುತ್ತಿದ್ದಾರೆ) 20ರಿಂದ 21 ಮಕ್ಕಳಿದ್ದಾರೆ. ಸವಣೂರ ತಾಲೂಕಿನ ತವರಮೆಳ್ಳಿಹಳ್ಳಿ ಗ್ರಾಮದಲ್ಲಿ 200ಕ್ಕೂ ಹೆಚ್ಚು ಕೂಲಿಕಾರರು ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿದ್ದಾರೆ(9 ಮಕ್ಕಳಿವೆ)ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದಹಳ್ಳಿ ಮಾತನಾಡಿ, ಜಿಲ್ಲಾ ಪಂಚಾಯತಿ ಕಾರ್ಯಾಲಯದಲ್ಲಿ, ಹನುಮರಹಳ್ಳಿ ಹಾಗೂ ಹಾವೇರಿ ತಾಲೂಕಿನ ದೇವರಾಜ ಅರಸು ಭವನದಲ್ಲಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಚಿಕ್ಕಮಕ್ಕಳಿಗೆ ಹಾಲುಣಿಸುವುದು ಹಾಗೂ ಇತರೆ ಪೋಷಣೆಗೆ ಸಂಬಂಧಿಸಿದಂತೆ ಕೆಲಸ ನಿರ್ವಹಿಸುವ ಮಹಿಳೆಯರಿಗೆ ಶಿಶುಪಾಲನಾ ಕೇಂದ್ರ ಅತ್ಯಗತ್ಯವಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯ ಎರಡು ಕಡೆ ಶಿಶು ಪಾಲನಾ ಕೇಂದ್ರ ಆರಂಭಿಸಲು ಸ್ಥಳ ಗುರುತಿಸಲಾಗಿದೆ. ಪ್ರತಿ ಶಿಶುಪಾಲನಾ ಕೇಂದ್ರದ ಪ್ರಾರಂಭ ಹಾಗೂ ನಿರ್ವಹಣೆಗಾಗಿ ಗರಿಷ್ಠ ಒಂದು ಲಕ್ಷ ರೂ. ವರೆಗೆ ಮಹಾತ್ಮಗಾಂಧಿ ನರೇಗಾ ಯೋಜನೆಯ ಆಡಳಿತಾತ್ಮಕ ವೆಚ್ಚದಲ್ಲಿ ಭರಿಸಲು ಅನುಮತಿ ನೀಡಲಾಗಿದೆ. ಪ್ರತಿ ಶಿಶುಪಾಲನಾ ಕೇಂದ್ರದಲ್ಲಿ ಮಕ್ಕಳ ಆರೈಕೆಗಾಗಿ 10 ಜನ ನರೇಗಾ ಯೋಜನೆಯಡಿ ನೋಂದಾಯಿತ ಮಹಿಳೆಯರನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗುವುದು. –ಮಹಮ್ಮದ್ ರೋಷನ್, ಜಿಪಂ ಸಿಇಒ