Advertisement

ಅಭಿವೃದ್ಧಿ ಕಾಮಗಾರಿಗೆ ಅಡಿಗಲ್ಲು

06:53 AM Feb 05, 2019 | |

ಚಿತ್ತಾಪುರ: ತಾಲೂಕಿನ ಭೀಮನಳ್ಳಿ ಗ್ರಾಮದಲ್ಲಿ ಎಚ್ಕೆಆರ್‌ಡಿ ಯೋಜನೆಯಡಿ 32 ಲಕ್ಷ ರೂ. ವೆಚ್ಚದಲ್ಲಿ ಪ್ರಾಥಮಿಕ ಶಾಲೆ ಕೋಣೆಗಳ ನಿರ್ಮಾಣ ಮತ್ತು ಆರ್‌ಐಡಿಎಫ್‌ ಯೋಜನೆಯಡಿ 36 ಲಕ್ಷ ರೂ. ವೆಚ್ಚದಲ್ಲಿ ಆರ್‌ವಿಡಿ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಸಮಾಜ ಕಲ್ಯಾಣ ಖಾತೆ ಸಚಿವ ಪ್ರಿಯಾಂಕ್‌ ಖರ್ಗೆ ಅಡಿಗಲ್ಲು ನೆರವೇರಿಸಿದರು.

Advertisement

ನಂತರ ಮಾತನಾಡಿದ ಅವರು, ಕಳೆದ ಚುನಾವಣೆ ಸಂದರ್ಭದಲ್ಲಿ ನೀಡಿದ ಆಶ್ವಾಸನೆಯಂತೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಎಲ್ಲರ ಸಹಕಾರ ಪ್ರಮುಖ ಎಂದು ಹೇಳಿದರು.

ಗ್ರಾಮಸ್ಥರ ಬೇಡಿಕೆಗೆ ತಕ್ಕಂತೆ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು. ಗ್ರಾಮದಲ್ಲಿ ರೈತರು ಅಧಿಕ ಸಂಖ್ಯೆಯಲ್ಲಿರುವುದರಿಂದ ಗಂಗಾ ಕಲ್ಯಾಣ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬಂದಿವೆ. ಹೀಗಾಗಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಮತ್ತು ಬೇರೆ ಗ್ರಾಮಕ್ಕಿಂತ ಹೆಚ್ಚುವರಿಯಾಗಿ ಯೋಜನೆ ಲಾಭ ಒದಗಿಸಿ ಕೊಡಲಾಗುವುದು ಎಂದು ಹೇಳಿದರು.

ಸರ್ಕಾರದ ಯೋಜನೆಗಳಿಗೆ ಆಹ್ವಾನಿಸಿದ ಅರ್ಜಿಗಳನ್ನು ಸಕಾಲದಲ್ಲಿ ಹಾಕಲಾಗುವುದು. ನಿರ್ದಿಷ್ಟ ಕಾಲಾಧಿವಯಲ್ಲಿ ಅರ್ಜಿಗಳು ವಿಲೇವಾರಿ ಆಗದೆ ಇದ್ದರೆ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳ ವಿರುದ್ದ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು. ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ಆಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದರು.

ಜಿಪಂ ಸದಸ್ಯರಾದ ಶಿವರುದ್ರ ಭೀಣಿ, ಶಿವಾನಂದ ಪಾಟೀಲ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ಸಾಲಿ, ಮಲ್ಲಿಕಾರ್ಜುನ ಮುಡಬೂಳಕರ್‌, ನಾಗರಾಜ ಸಜ್ಜನ, ತಹಶೀಲ್ದಾರ್‌ ಉಮಾಕಾಂತ ಹಳ್ಳೆ, ಡಿವೈಎಸ್‌ಪಿ ಕೆ. ಬಸವರಾಜ, ಸಿಪಿಐ ಪಂಚಾಕ್ಷರಿ ಸಾಲಿಮಠ, ಪಿಎಸ್‌ಐ ನಟರಾಜ ಲಾಡೆ, ಅಧಿಕಾರಿಗಳಾದ ಅಭಿಮನ್ಯು, ಶಂಕ್ರಮ್ಮ ಡವಳಗಿ, ಶ್ರೀಧರ, ಸಿದ್ದಣ್ಣ, ಬಸವರಾಜ ಹಿರೇಮಠ, ಮುಖಂಡರಾದ ಈರಪ್ಪ ಭೋವಿ, ದೇವಿಂದ್ರ ಜಡಿ, ಶಾಂತಣ್ಣ ಚಾಳೀಕಾರ, ಜಫರುಲ್ಲಾ ಹಸನ್‌, ಭೀಮರಾಯ ಹೊತಿನಮಡಿ, ಚಂದ್ರಶೇಖರ ಕಾಶಿ, ಉದಯಕುಮಾರ ಸಾಗರ, ಮಲ್ಲಿನಾಥರಾಯ ಮಲ್ಕನ್‌, ಭೀಮರಾಯ ಅಂಬರ, ಸುಭಾಷಗೌಡ, ಬಸವರಾಜ ಪೂಜಾರಿ, ರಮೇಶ ರಾಠೊಡ, ಯಂಕಪ್ಪ ಝೋಲಕರ್‌, ನರಸಣ್ಣ ಅಂಬಾರ, ಲೋಕೇಶ ಭೀಮನಳ್ಳಿ, ಸಿದ್ರಾಮ, ವೆಂಕಟೇಶ ಕುಲಕರ್ಣಿ, ಶರಣು ಡೋಣಗಾಂವ, ಮಲ್ಲಿಕಾರ್ಜುನ ಪೂಜಾರಿ ಇದ್ದರು. ನಿಂಗಣ್ಣ ಗೊಡೇಕಾರ ಸ್ವಾಗತಿಸಿದರು. ಶಿವಕುಮಾರ ಬಿರಾದಾರ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next