ತುಮಕೂರು: ನಗರದ ಅಮಾನಿಕೆರೆಗೆ ಆಗಮಿಸುವ ದೇಶ, ವಿದೇಶಗಳ ಪಕ್ಷಿಗಳಿಗೆ ಅನುಕೂಲಕರ ವಾತಾವರಣ ನಿರ್ಮಿಸುವ ದೃಷ್ಟಿಯಿಂದ ಪರಿಸರ ದಿನಾಚರಣೆ ಅಂಗವಾಗಿ ಗಿಡಗಳನ್ನು ನೆಡುವ ಮೂಲಕ ಪಕ್ಷಿಧಾಮಕ್ಕೆ ಅಗತ್ಯವಿರುವ ಸೌಲಭ್ಯ ಕಲ್ಪಿಸಲಾಗುವುದು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.
ನಗರದ ಅಮಾನಿಕೆರೆಯಲ್ಲಿರುವ ದ್ವೀಪದಲ್ಲಿ ಪರಿ ಸರ ದಿನಾಚರಣೆ ಅಂಗವಾಗಿ ಗಿಡನೆಟ್ಟು ಮಾತನಾಡಿ, ಅಮಾನಿಕೆರೆಯಲ್ಲಿರುವ ಜೀವ ವೈವಿಧ್ಯವನ್ನು ಕಾಪಾ ಡುವ ದೃಷ್ಟಿಯಿಂದ ಈ ದ್ವೀಪಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಪಕ್ಷಿಗಳಿಗೆ ಅಗತ್ಯವಾಗಿರುವ ಇಕೋ ಪರಿಸರವನ್ನು ನಿರ್ಮಿಸುವ ದೃಷ್ಟಿಯಿಂದ ತಜ್ಞರೊಂದಿಗೆ ಚರ್ಚಿಸಿ ವಲಸೆ ಪಕ್ಷಿಗಳಿಗೆ ಅಗತ್ಯವಿರುವ ಮರಗಳನ್ನು ಬೆಳೆಸಲಾಗುತ್ತಿದೆ ಎಂದರು.
ಅಮಾನಿಕೆರೆಯಲ್ಲಿರುವ ಬಫರ್ ಜಾಗದಲ್ಲಿ ಪಕ್ಷಿ ಧಾಮಕ್ಕೆ ಅಗತ್ಯವಾದ ವಾತಾವರಣವನ್ನು ಸ್ಮಾರ್ಟ್‌ಸಿಟಿ ವತಿಯಿಂದ 40 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ದೇಶದಲ್ಲಿಯೇ ಅತ್ಯುತ್ತಮವಾದ ಪ್ರವಾಸಿತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಅಧಿಕಾರಿ ಗಳೊಂದಿಗೆ ಚರ್ಚಿಸಲಾಗಿದೆ ಎಂದು ಹೇಳಿದರು.
ತುಮಕೂರು ಅಮಾನಿಕೆರೆಗೆ 57 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರು ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಹೇಮಾವತಿ ನೀರನ್ನು ಇಲ್ಲಿ ಸಂಗ್ರಹಿಸುವುದಷ್ಟೇ ಅಲ್ಲದೇ ಈ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ನೀಡು ವುದರಿಂದ ಇಲ್ಲಿಂದ ಪಿ.ಎನ್.ಆರ್.ಪಾಳ್ಯಕ್ಕೆ ಪೂರೈಸುವ ಯೋಜನೆ ಚಾಲ್ತಿಯಲ್ಲಿದೆ ಎಂದು ತಿಳಿಸಿದರು. ಮೇಯರ್ ಫರೀದಾಬೇಗಂ ಮಾತನಾಡಿ, ಪರಿಸರ ದಿನದಂದು ನೆಟ್ಟ ಗಿಡಗಳನ್ನು ಪೋಷಿಸಬೇಕು ಎಂದ ಹೇಳಿದರು.
ಪಾಲಿಕೆ ಆಯುಕ್ತ ಟಿ. ಭೂಬಾಲನ್ ಮಾತನಾಡಿ, ಅಮಾನಿಕೆರೆಯಲ್ಲಿ ರಾಜ್ಯಕ್ಕೆ ಮಾದರಿಯಾದ ಪಕ್ಷಿಧಾಮವನ್ನು ನಿರ್ಮಿಸುವ ದೃಷ್ಟಿಯಿಂದ ಚಾಲನೆ ನೀಡಲಾಗಿದೆ ಎಂದರು.