ಶಿಡ್ಲಘಟ್ಟ: ಸರ್ಕಾರವು ನೀರಾವರಿ, ಆರೋಗ್ಯ, ಕೌಶಲಾಭಿವೃದ್ಧಿ ಯೋಜನೆ ಹಾಗೂ ಉದ್ಯೋಗ ಸೃಷ್ಟಿಗಾಗಿ ಜಿಲ್ಲೆಯ ಕೃಷಿ ಉತ್ಪನ್ನ ಗಳ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ 74ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ರತ್ನ ಪುರಸ್ಕೃತರಾದ ಸರ್ ಎಂ. ವಿಶ್ವೇಶ್ವರಯ್ಯ, ಪ್ರೂ.ಸಿ.ಎನ್.ಆರ್.ರಾವ್, ಪದ್ಮಭೂಷಣ ಪುರಸ್ಕೃತ, ಶಿಕ್ಷಣ ತಜ್ಞ ಎಚ್.ನರಸಿಂಹಯ್ಯ ಜಿಲ್ಲೆಗೆ ಕೀರ್ತಿ ತಂದುಕೊಟ್ಟಿದ್ದಾರೆ ಎಂದು ಹೇಳಿದರು.
ಪ್ರಧಾನಿಯಿಂದ ವಿಶೇಷ ನೆರವು: ಕೊರೊನಾದಿಂದ ಸಂಕಷ್ಟದಲ್ಲಿರುವ ಬಡಜನರು, ಕೂಲಿ ಕಾರ್ಮಿಕರು, ರೈತರಿ ಗಾಗಿ ಪ್ರಧಾನಿ ಮೋದಿ ವಿಶೇಷ ನೆರವು ನೀಡಿದ್ದಾರೆ. ಹಸಿವು ನಿಂದ ಯಾರೂ ಅಸುನೀಗಬಾರದೆಂದು ಮೂರು ತಿಂಗಳು ಮುಂಗಡ ವಾಗಿ ಉಚಿತವಾಗಿ ಪಡಿತರ ಅಕ್ಕಿ ನೀಡಿದ್ದಾರೆ ಎಂದು ಹೇಳಿದರು.
ಅವಕಾಶ ಕಲ್ಪಿಸಿದ್ದಕ್ಕೆ ಆಭಾರಿ: ರಾಜ್ಯದ ಮತ್ತು ಜಿಲ್ಲೆಯ ಜನತೆಯ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಟ್ಟ ತಮ್ಮೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ನಿಮ್ಮೆಲ್ಲರ ನೈತಿಕ ಬಲದಿಂದ ನಾನುಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ. ಸರ್ಕಾರಿ ವೈದ್ಯಕೀಯ ಕಾಲೇಜು, ಸರ್ಕಾರಿ ಆಸ್ಪತ್ರೆಯೊಂದಿಗೆ ಹೆಲ್ತ್ ಸಿಟಿ ನಿರ್ಮಾಣ, ಎಚ್.ಎನ್.ವ್ಯಾಲಿ ಯೋಜನೆಯಿಂದ ಈ ಭಾಗದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆಗುತ್ತಿದೆ. ಅಧಿಕಾರ ವಿಕೇಂದ್ರಿಕರಣದ ಹಿನ್ನೆಲೆಯಲ್ಲಿ ಮಂಚೇನಹಳ್ಳಿ ಯನ್ನು ತಾಲೂಕಾಗಿ ರೂಪಿಸಿರುವ ಮಹತ್ವದ ಕಾರ್ಯ ನಮ್ಮ ಸರ್ಕಾರದಿಂದಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಿಗೆ ಹೆಚ್ಚುವರಿ ಸೌಲಭ್ಯ, ವೈದ್ಯರ ನೇಮಕ, ಹೆಲ್ತ್ ಸಿಟಿ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಪೂರೈಕೆ ಜೊತೆಗೆ ಪ್ರತಿ ವ್ಯಕ್ತಿಯ ಆರೋಗ್ಯ ಸ್ಥಿತಿಗತಿ ಕುರಿತಂತೆ ವಿಶ್ವಾಸನೀಯ ಅಂಶಗಳನ್ನು ದಾಖಲಿಸಿ, ಹೆಲ್ತ್ ಕಾರ್ಡ್ ವಿತರಿಸಲಾಗುತ್ತದೆ ಎಂದು ಹೇಳಿದರು. ಜಿಲ್ಲೆ ಅಭಿವೃದ್ಧಿ ಕಾರ್ಯಗಳು: ಕಳೆದ 13 ವರ್ಷಗಳಲ್ಲಿ ಸರ್ಕಾರದಿಂದ ನಮ್ಮ ಜಿಲ್ಲೆ ಅಭಿವೃದ್ಧಿ ಚಾಲನೆಗೊಂಡಿದ್ದು, ಹಿಂದಿನ 6-7 ವರ್ಷಗಳಲ್ಲಿ ಸರ್ಕಾರದ ದೊಡ್ಡ ಪ್ರಮಾಣದ ಅನುದಾನದಿಂದ ಎತ್ತಿನಹೊಳೆ ಯೋಜನೆ, ಜಿಲ್ಲಾಡಳಿತ ಭವನ, ಮೂಲ ಸೌಲಭ್ಯಗಳ ವಿಸ್ತರಣೆ, ಸಾಮಾಜಿಕ ನ್ಯಾಯದ ಯೋಜನೆಗಳ ಜಾರಿ, ಪ್ರವಾಸಿ ಸ್ಥಳಗಳ ಅಭಿವೃದ್ಧಿ, ಜಿಲ್ಲಾ ಆಸ್ಪತ್ರೆ ನಿರ್ಮಾಣ, ಜಿಲ್ಲಾ ಗ್ರಂಥಾಲಯ, ಖಾಸಗಿ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಪ್ರವಾಸಿ ಮಂದಿರ, ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗಿದೆ ಎಂದು ತಿಳಿಸಿದರು.
ಸಂಸದ ಬಿ.ಎನ್.ಬಚ್ಚೇಗೌಡ, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಜಿಪಂ ಅಧ್ಯಕ್ಷ ಎಂ.ಬಿ. ಚಿಕ್ಕ ನರ ಸಿಂಹಯ್ಯ, ಸದಸ್ಯ ಪಿ.ಎನ್.ಕೇಶವರೆಡ್ಡಿ, ಜಿಲ್ಲಾಧಿಕಾರಿ ಆರ್. ಲತಾ, ಜಿಪಂ ಸಿಇಒ ಬಿ.ಫೌಝೀಯಾ ತರನ್ನುಮ್, ಎಸ್ಪಿ ಮಿಥುನ್‌ಕುಮಾರ್, ಎಡೀಸಿ ಎಚ್.ಅಮರೇಶ್, ಎಸಿ ರಘು ನಂದನ್ ಉಪಸ್ಥಿತರಿದ್ದರು..