Advertisement

ಉದ್ಯೋಗ ಒದಗಿಸಲು ಕಾರ್ಖಾನೆ ಸ್ಥಾಪನೆ

02:56 PM Feb 09, 2022 | Team Udayavani |

ಶಿಡ್ಲಘಟ್ಟ: ವಿಧಾನಸಭಾ ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೈಗಾರಿಕೆ ಸ್ಥಾಪನೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಎಬಿಡಿ ಗ್ರೂಪ್‌ ಅಧ್ಯಕ್ಷ ಹಾಗೂ ಕಾಂಗ್ರೆಸ್‌ ಮುಖಂಡ ರಾಜೀವ್‌ಗೌಡ ಹೇಳಿದರು.

Advertisement

ತಾಲೂಕಿನ ಸಾದಲಿಯಲ್ಲಿ ಎಬಿಡಿ ಗ್ರೂಫ್‌ ಟ್ರಸ್ಟ್‌ನಿಂದ ದಿವ್ಯಾಂಗರಿಗೆ ಆರ್ಥಿಕ ನೆರವು, ಹಿಂದುಳಿದವರಿಗೆ ದಿನಸಿ ಕಿಟ್‌, ದೇವಾಲಯಗಳ ಅಭಿವೃದ್ಧಿಗೆ ಹಣಕಾಸಿನ ನೆರವು ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕೊರೊನಾ ಸಂಕಷ್ಟದಲ್ಲಿದ್ದ ಜನರಿಗೆ ಸಹಾಯ ಮಾಡುವಉದ್ದೇಶದಿಂದ ಫ‌ುಡ್‌ಕಿಟ್‌ ವಿತರಣೆ ಕಾರ್ಯಕ್ರಮ ನಿರಂತರವಾಗಿ ನಡೆಸಿಕೊಂಡು ಬಂದಿದ್ದು, ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ ಎಂದು ತಿಳಿಸಿದರು.

ಉದ್ಯೋಗದ ಭರವಸೆ: ಸಾದಲಮ್ಮ ದೇವಾಲಯದ ಅಭಿವೃದ್ಧಿಗೆ ತಮ್ಮ ಟ್ರಸ್ಟ್‌ನ ಮೂಲಕ 1 ಲಕ್ಷ ರೂ. ನೀಡುವುದಾಗಿ ಘೋಷಣೆ ಮಾಡಿದರು. ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ಕೈಗಾರಿಕೆ ಸ್ಥಾಪನೆ ಮಾಡಿ ಉದ್ಯೋಗ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ವಿವರಿಸಿದರು.

60 ಸಾವಿರ ಕುಟುಂಬಗಳಿಗೆ ಕಿಟ್‌: ಕ್ಷೇತ್ರದಲ್ಲಿ ಒಂದು ಲಕ್ಷ ಕುಟುಂಬಗಳಿಗೆ ದಿನಸಿ ಕಿಟ್‌ ಹಂಚುವ ಉದ್ದೇಶವಿದ್ದು, ಈಗಾಗಲೇ 60 ಸಾವಿರ ಕುಟುಂಬಗಳಿಗೆ ವಿತರಿಸಲಾಗಿದೆ. ನಾನು ಚುನಾವಣೆ ಸಮಯದಲ್ಲಿ ಬಂದು ಹೋಗುವವನಲ್ಲ. ತಮ್ಮ ಬದುಕಿನ ಉದ್ದಕ್ಕೂ ನಿಮ್ಮೊಂದಿಗೆ ಇರುತ್ತೇನೆ. ನಿಮ್ಮ ಕಷ್ಟಸುಖಗಳಲ್ಲಿ ಭಾಗಿಯಾಗುತ್ತೇನೆ ಎಂದು ಭರವಸೆ ನೀಡಿದರು.

ಅಗತ್ಯ ಇರುವವರು ಬಳಸಿಕೊಳ್ಳಿ: ಸಾದಲಿ ಗ್ರಾಪಂನ ಜನರಿಗೆ ಅನುಕೂಲ ಕಲ್ಪಿಸಲು 24 ಗಂಟೆ ತುರ್ತು ವಾಹನಗಳ ಉಚಿತ ಸೇವೆಗೆ ಆರಂಭಿಸಿದ್ದೇನೆ. ಅದರ ಸಂಖ್ಯೆಯನ್ನು ನೀಡುತ್ತೇನೆ. ಜೊತೆಗೆ ಪ್ರತಿಯೊಂದುಹೋಬಳಿಯಲ್ಲೂ ಒಂದೊಂದು ಆ್ಯಂಬುಲೆನ್ಸ್‌ ನಮ್ಮ ಟ್ರಸ್ಟ್‌ನಿಂದ ವ್ಯವಸ್ಥೆ ಮಾಡಿದ್ದು, ಅಗತ್ಯ ಇರುವವರ ಬಳಸಿಕೊಳ್ಳಿ ಎಂದು ಮನವಿ ಮಾಡಿದರು.

Advertisement

ಕಾರ್ಯಕ್ರಮದಲ್ಲಿ ಸಮಾಜಸೇವಕಿ ಸಹನಾ ರಾಜೀವ್‌ ಗೌಡ ಮಾತನಾಡಿ, ಕ್ಷೇತ್ರದಲ್ಲಿ ಎಬಿಡಿ ಟ್ರಸ್ಟ್‌ನ ಮೂಲಕ ಸೇವೆ ಸಲ್ಲಿಸುತ್ತಿದ್ದೇವೆ. ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಆರ್ಥಿಕ ನೆರವು ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಮಹಿಳೆಯರಿಗಾಗಿ ಗಾರ್ಮೆಂಟ್ಸ್‌ ಕಾರ್ಖಾನೆಯನ್ನು ತೆರೆದು, ಉದ್ಯೋಗ ನೀಡಿ ಸ್ವಾವಲಂಬಿ ಜೀವನ ನಡೆಸಲುಸಹಕಾರ ನೀಡಿ ಪ್ರೋತ್ಸಾಹಿಸಲಾಗುವುದು ಎಂದು ಹೇಳಿದರು.

ಕೆಪಿಸಿಸಿ ಸದಸ್ಯ ಗುಡಿಹಳ್ಳಿ ಸ್ವಾಮಿ, ಕೊತ್ತನೂರು ಪ್ರಭಾಕರ್‌, ನರೇಂದ್ರ, ಆನೂರು ರವಿ, ಅಪ್ಪೇಗೌಡನಹಳ್ಳಿ ಮಂಜುನಾಥ್‌, ವಲ್ಲಪ್ಪನಹಳ್ಳಿ ಕೃಷ್ಣಪ್ಪ, ಏನಿಗದೆಲೆ ಬೈರಾರೆಡ್ಡಿ, ಮುತ್ತೂರು ರಾಮಚಂದ್ರ, ಹರೀಶ್‌, ಮುನಿರಾಜು ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next