Advertisement

ವಿದ್ಯುತ್‌ ಸಬ್‌ ಸ್ಟೇಷನ್‌ಗೆ ಶಂಕುಸ್ಥಾಪನೆ 

07:16 AM Mar 08, 2019 | |

ಹೊಳೆನರಸೀಪುರ: ತಾಲೂಕಿನ ಹಳ್ಳಿಮೈಸೂರು ಹೋಬಳಿಗೆ ಸೇರಿದ ನಗರ್ತಿ ಗ್ರಾಮದಲ್ಲಿ ಹತ್ತಾರು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಸಬ್‌ ಸ್ಟೇಷನ್‌ಗೆ ಇಂದು ಅಧಿಕೃತವಾಗಿ ಶಂಕುಸ್ಥಾಪನೆ ನೇರವೇರಿಸಲಾಗುತ್ತಿದೆ ಎಂದು ಲೊಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ನುಡಿದರು.

Advertisement

ನಗರ್ತಿ ಗ್ರಾಮದಲ್ಲಿ ವಿದ್ಯುತ್‌ ಸಬ್‌ ಸ್ಟೇಷನ್‌ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹಿಂದೆ ತಾವು ಇಂಧನ ಸಚಿವರಾಗಿದ್ದ ಅವಧಿಯಲ್ಲಿ ರಾಜ್ಯ ವಿದ್ಯುತ್‌ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಸಲುವಾಗಿ ರಾಜ್ಯದೆಲ್ಲಡೆ ವಿದ್ಯುತ್‌ ಸಬ್‌ ಸ್ಟೇಷನ್‌ ಆರಂಭಿಸಲಾಗಿತ್ತು.

ನಗರ್ತಿ ಗ್ರಾಮದಲ್ಲಿ ಸಬ್‌ ಸ್ಟೇಷನ್‌ ಗಾಗಿ ನಿವೇಶನ ಖರೀದಿಸಲಾಗಿತ್ತು. ಅಂದು ಖರೀದಿಸಿದ ನಿವೇಶನದಲ್ಲಿ ಸುಮಾರು 5.5 ಕೋಟಿ ರೂ. ವೆಚ್ಚದಲ್ಲಿ 8 ಎಂಯುಎ ವಿದ್ಯುತ್‌ ಸಬ್‌ ಸ್ಟೇಷನ್‌ಗೆ ಅನುಮೋದನೆ ದೊರೆತಿದ್ದು ಇದರಿಂದ ನಗರ್ತಿ ಸುತ್ತಮುತ್ತಲ ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ.

ಇಂದು ಶಂಕುಸ್ಥಾಪನೆ ನೇರವೇರಿಸಲಾಗಿದ್ದು ಅದರಂತೆ 6 ತಿಂಗಳ ಅವಧಿಯಲ್ಲಿ ಸ್ಟೇಷನ್‌ ಸಿದ್ಧವಾಗಿ ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗಲಿದೆ ಎಂದರು. ಶಂಕುಸ್ಪಾಪನೆ ನೇರವೇರಿಸಿ ಮಾತನಾಡಿದ ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ತಾವು ಶಾಸಕರಾಗಿದ್ದ ಅವಧಿಯಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಮತ್ತು ಎಚ್‌.ಡಿ.ರೇವಣ್ಣ ಅವರು ಈ ಭಾಗದ ಜನರ ಸಮಸ್ಯೆ ಅರಿತು ವಿದ್ಯುತ್‌ ಸಬ್‌ ಸ್ಟೇಷನ್‌ಗೆ ನಗರ್ತಿ ಗ್ರಾಮದಲ್ಲಿ ನಿವೇಶನ ಖರೀದಿಸಲಾಗಿತ್ತು.

ಆದರೆ ನಂತರದ ದಿನಗಳಲ್ಲಿ ಅದನ್ನು ಪೂರ್ಣಗೊಳಿಸಲು ಸಾದ್ಯವಾಗಲಿಲ್ಲ. ಆದರೆ ಇದೀಗ ತಾವು ಮತ್ತೂಮ್ಮ ಶಾಸಕರಾದ ನಂತರ ನೆನಗುದಿಗೆ ಬಿದಿದ್ದ ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಅವಕಾಶ ದೊರೆತಿದೆ ಎಂದರು. ಕಾರ್ಯಕ್ರಮದಲ್ಲಿ ತಾಪಂ ಸದಸ್ಯ ಜವರೇಗೌಡ, ಸೆಸ್ಕ್ ಇಇ ವೆಂಕಟೇಶ್‌, ಎಇಇ ಸ್ವಾಮಿಗೌಡ, ಮಂಜುನಾಥಾಚಾರ್‌ ಹಾಗೂ ಗ್ರಾಮಸ್ಥರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next