ಮಣಿಪಾಲ:ಕೇರಳದ ಮಲಪ್ಪುರಂ ಜಿಲ್ಲೆಯ ಕುಗ್ರಾಮವಾದ “ತಿರುವಾಲಿ” ಎಂಬಲ್ಲಿ 2005ರಲ್ಲಿ ಪೊಪೀಸ್ ಆರಂಭವಾಗಿತ್ತು. ಒಂದು ವರ್ಷದ ನಂತರ ನಿಧಾನವಾಗಿ ಪೋಪೀಸ್ “ಬೇಬಿ ಫ್ಯಾಶನ್ ಬ್ರ್ಯಾಂಡ್” ಮೂಲಕ ಜನಪ್ರಿಯವಾಗತೊಡಗಿತ್ತು.
ಶಾಜು ಥಾಮಸ್ ಎಂಬ ಕುಶಾಗ್ರಮತಿ ಉದ್ಯಮಿ, ಹೊಸ, ಹೊಸ ಆಲೋಚನೆಗಳನ್ನು ಹೊಂದಿದ್ದ ಶಾಜು ಅವರ ಕನಸಿನ ಕೂಸು ಈ ಪೋಪೀಸ್. ಅವರ ನೆರವು, ಮಾರ್ಗದರ್ಶನದಲ್ಲಿ ಎಲ್ಲಾ ಶ್ರೇಣಿಯಲ್ಲಿಯೂ ಪೋಪೀಸ್ ಅತ್ಯಂತ ಹೆಚ್ಚು ಮಾರಾಟವಾಗುವ ಮೂಲಕ ಬ್ರ್ಯಾಂಡ್ ಆಗಿ ಪರಿಚಯಿಸಲ್ಪಟ್ಟಿತ್ತು.
ಒಂದು ವರ್ಷದ ಮಗುವಿನಿಂದ ಹಿಡಿದು ಆರು ವರ್ಷದ ತುಂಟ ಹುಡುಗಿಯವರೆಗೂ ಅದ್ಭುತ ವಿನ್ಯಾಸದ ವಸ್ತ್ರದ ಆಫರ್ ಗ್ರಾಹಕರನ್ನು ಸೆಳೆಯುತ್ತಿದೆ. ತಾಯಂದಿರ ಮೊದಲ ಆದ್ಯತೆಯೂ ಪೋಪೀಸ್ ಆಗಿದೆ. ಪೋಪೀಸ್ ತುಂಬಾ ಕಂಫರ್ಟೇಬಲ್ ಹಾಗೂ ಅತ್ಯುತ್ತಮ ನೈರ್ಮಲ್ಯಯುತ, ಅಗ್ಗದ ಬೆಲೆಯ ಮಕ್ಕಳ ಬಟ್ಟೆಗಳಿಗೆ ಪೊಪೀಸ್ ಬ್ರ್ಯಾಂಡ್ ಹೆಸರುವಾಸಿಯಾಗಿದೆ.
ಪೊಪೀಸ್ ಹೆಚ್ಚಿನ ಸುರಕ್ಷತೆಯ ಗುಣಮಟ್ಟವನ್ನು ಮತ್ತು ನೈರ್ಮಲ್ಯದ ಕಾಳಜಿಯನ್ನು ಹೊಂದಿದೆ. ನವನವೀನ ಬ್ರ್ಯಾಂಡ್ ಗಳ ಆಫರ್ ಅನ್ನು ಜನರು ಹೆಚ್ಚು ಇಷ್ಟಪಡುತ್ತಾರೆ. ಪೋಪೀಸ್ ನಲ್ಲಿ ಹಲವಾರು ಉಪ ಬ್ರ್ಯಾಂಡ್ ಗಳಿವೆ, ಇದರಲ್ಲಿ ಜ್ಯೂನಿಯರ್ ಪೊಪೀಸ್, ಪೊಪೀಸ್ ಕಿಡ್ಸ್ ಪೋಪೀಸ್ ಫಾರ್ ವುಮೆನ್, ಅವರ್ ಕಿಡ್ಸ್ ಮ್ಯಾಗಜೀನ್ ಫಾರ್ ಪೇರೆಂಟಿಂಗ್ ಕೂಡಾ ಸೇರಿದೆ.
ಬೆಂಗಳೂರಿನ ಇಂದಿರಾನಗರದಲ್ಲಿ ಪೋಪೀಸ್ ಎಕ್ಸ್ ಪೀರಿಯನ್ಸ್ ಸೆಂಟರ್ ಇದ್ದು, ಶೀಘ್ರದಲ್ಲಿಯೇ ಉದ್ಯಾನನಗರಿಯ ಕಾಮನಹಳ್ಳಿಯೂ ಪೋಪೀಸ್ ಶಾಖೆ ತೆರೆಯಲಿದೆ. ಅಷ್ಟೇ ಅಲ್ಲ ಈ ಬಾರಿಯ ಉದಯವಾಣಿ ಡಿಜಿಟಲ್ ನ ಮಕ್ಕಳ ಪೋಟೋ ಸ್ಪರ್ಧೆ “ಪಬ್ಲಿಕ್ ಚಾಯ್ಸ್ “ನಲ್ಲಿ ಆಯ್ಕೆಯಾದ ನೂರು ಮಕ್ಕಳಿಗೆ ಸ್ಪೆಷಲ್ ಗಿಫ್ಟ್ ವೋಚರ್ ಸಿಗಲಿದೆ.