Advertisement
ವಿಷಯವಾರು ತೂಕ, ನೀಲನಕಾಶೆಗಳ ಅನುಸರಣೆಯಿಂದ ಗಣಿತ ಪ್ರಶ್ನೆಪತ್ರಿಕೆ ವಿದ್ಯಾರ್ಥಿಗಳ ನಿರೀಕ್ಷೆಯಂತಿತ್ತು ಎಂದು ಉಡುಪಿಯ ಗಣಿತ ಅಧ್ಯಾಪಕರೊರ್ವರು ತಿಳಿಸಿದ್ದಾರೆ. ಎರಡು ಪೂರ್ವಸಿದ್ಧತಾ ಪರೀಕ್ಷೆಗಳಿಗಿಂತಲೂ ಇದು ಸುಲಭವಾಗಿತ್ತು ಎಂದು ವಿದ್ಯಾರ್ಥಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಮಂಗಳೂರು/ಉಡುಪಿ: ಸೋಮವಾರ ನಡೆದ ಎಸೆಸೆಲ್ಸಿ ಗಣಿತ ಪರೀಕ್ಷೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 43,925 ಮಂದಿ ಹಾಜರಾಗಿದ್ದು, 713 ಮಂದಿ ಗೈರುಹಾಜರಾಗಿದ್ದಾರೆ. ದಕ್ಷಿಣ ಕನ್ನಡದಲ್ಲಿ 30,691 ಮಂದಿಯ ಪೈಕಿ 30,164 ಮಂದಿ ಹಾಜರಾಗಿ 527 ಮಂದಿ ಗೈರಾಗಿದ್ದಾರೆ. ಉಡುಪಿಯಲ್ಲಿ 13,947 ವಿದ್ಯಾರ್ಥಿಗಳ ಪೈಕಿ 13,761 ಮಂದಿ ಹಾಜರಾಗಿದ್ದು, 186 ಮಂದಿ ಗೈರುಹಾಜರಾದರು. ಯಾವುದೇ ಲೋಪವಿಲ್ಲದೆ ಪರೀಕ್ಷೆ ಸುಗಮವಾಗಿ ನಡೆದಿದೆ ಎಂದು ಉಭಯ ಜಿಲ್ಲಾ ಡಿಡಿಪಿಐಗಳು ತಿಳಿಸಿದ್ದಾರೆ.