Advertisement

ಶಬರಿಮಲೆ ಭಕ್ತರಿಗೆ ಅಗತ್ಯ ಸಹಕಾರ: ಶೇಖರ್‌

02:01 PM Jan 06, 2021 | Team Udayavani |

ತುಮಕೂರು: ಕೋವಿಡ್‌-19 ಹಿನ್ನೆಲೆ ಈ ಬಾರಿಯ ಅಯ್ಯಪ್ಪ ಯಾತ್ರೆ “ಭುವನಂ ಸನ್ನಿಧಾನಂ’ ಎಂಬಂತೆ ಆಗಿದೆ. ಮನೆಯಲ್ಲಿಯೇ ಇದ್ದುಕೊಂಡು ಅಯ್ಯಪ್ಪನಸ್ಮರಣೆ ಮಾಡುವಂತೆ ಭಕ್ತರಿಗೆ ಮನವಿ ಮಾಡಲಾಗಿದ್ದು ಅವರೂ ಅದೇ ರೀತಿ ನಡೆದುಕೊಳ್ಳುತ್ತಿರುವುದು ಸಂತಸದಸಮಾಚಾರ ಎಂದು ಶಬರಿಮಲೈ ಅಯಪ್ಪ ಸೇವಾ ಸಮಾಜಂನ ರಾಷ್ಟ್ರೀಯ ಅಧ್ಯಕ್ಷ ಟಿ.ಬಿ.ಶೇಖರ್‌ ತಿಳಿಸಿದರು.

Advertisement

ಚಿಕ್ಕತೊಟ್ಲುಕೆರೆ ಅಟವಿ ಶಿವಯೋಗಿ ಮಠದಲ್ಲಿ ಆಯೋಜಿಸಿದ್ದ ಅಯ್ಯಪ್ಪ ಸೇವಾ ಸಮಾಜಂನರಾಜ್ಯಮಟ್ಟದ ಕಾರ್ಯಕಾರಣಿ ಸಭೆ ಉದ್ಘಾಟಿಸಿಮಾತನಾಡಿದರು. ಕೋವಿಡ್‌ ಹಿನ್ನೆಲೆಯಲ್ಲಿ ಕಳೆದ 8ತಿಂಗಳಿನಿಂದ ವರ್ಚುವಲ್‌ ಸಭೆ ಮೂಲಕವೇ ಸಭೆನಡೆಸಿ, ಸಂಘದ ಚಟುವಟಿಕೆಗಳನ್ನು ನಡೆಸಲಾಗುತ್ತಿತ್ತು.ಇಂದು ಸರ್ಕಾರದ ನಿಯಮದಂತೆ ಸಾಮಾಜಿಕಅಂತರ ಕಾಯ್ದುಕೊಂಡು ಸಭೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಕೇರಳದಲ್ಲಿರುವ ಹರಿ, ಹರರ ಸಮಾಗಮ ಕ್ಷೇತ್ರ ಶಬರಿಮಲೆಗೆ ಕೇರಳಿಗರಿಗಿಂತ ದಕ್ಷಿಣ ಭಾರತದ ಇತರೆರಾಜ್ಯಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರೆ ಕೈಗೊಳ್ಳುತ್ತಾರೆ. ಸಾವಿರ ಸಂಖ್ಯೆಯಲ್ಲಿದ್ದ ಯಾತ್ರಾರ್ಥಿಗಳ ಸಂಖ್ಯೆ ಕೋಟಿಗೆ ತಲುಪಿದೆ ಎಂದು ತಿಳಿಸಿದರು.

ಹಿರಿಯ ಅಯ್ಯಪ್ಪ ಭಕ್ತರಾದ ಶಿವರಾಂ ಮಾತನಾಡಿ,ಶಬರಿ ಮಲೆಗೆ ಹರಿ, ಹರ ಇಬ್ಬರು ಭಕ್ತರು ಯಾತ್ರೆಕೈಗೊಳ್ಳುತ್ತಾರೆ. ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂಬ ಸದುದ್ದೇಶದಿಂದ ಅಯ್ಯಪ್ಪ ಸೇವಾ ಸಮಿತಿ ರಚಿಸಲಾಗಿದೆ. ರಾಜ್ಯದ 23 ಜಿಲ್ಲೆಗಳಲ್ಲಿ ಸಕ್ರಿಯವಾಗಿಸಂಘಟನೆ ಇದ್ದು, ಎಲ್ಲರೂ ಸೇರಿ ಶಬರಿ ಮಲೆಗೆ ಬರುವ ಭಕ್ತರಿಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸ್ನಾನ ಗೃಹ, ಕುಡಿಯುವ ನೀರು, ಅನ್ನದಾನ ಸೇರಿ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತಾದಿಗಳ ಸಂಖ್ಯೆಗೆ ಹೋಲಿಕೆ ಮಾಡಿದರೆ, ನಾವು ಮಾಡುವಸೇವೆ ಅತ್ಯಂತ ಕಡಿಮೆ. ಸೇವೆ ಮೂಲಕ ಅಯ್ಯಪ್ಪನನ್ನುರಕ್ಷಿಸುವುದರ ಜತೆಗೆ, ಯಾತ್ರಾರ್ಥಿಗಳನ್ನುರಕ್ಷಿಸುವುದು ಸಂಘಟನೆಯ ಕೆಲಸ ಎಂದರು.ಅಯ್ಯಪ್ಪಸೇವಾ ಸಮಾಜಂನ ರಾಜ್ಯಾಧ್ಯಕ್ಷ ಕೃಷ್ಣಪ್ಪ ಮಾತನಾಡಿ,ಟಿ.ಬಿ.ಶೇಖರ್‌ ರಾಷ್ಟ್ರೀಯ ಅಧ್ಯಕ್ಷರಾದ ನಂತರಮತ್ತಷ್ಟು ವ್ಯವಸ್ಥಿತವಾಗಿ ಯಾತ್ರಾರ್ಥಿಗಳಿಗೆ ಅಗತ್ಯಸೌಲಭ್ಯ ಕಲ್ಪಿಸಲಾಗುತ್ತಿದೆ. 18 ಜಿಲ್ಲೆಯ ಅಧ್ಯ ಕ್ಷರು,ಪ್ರಧಾನ ಕಾರ್ಯದರ್ಶಿಗಳು ಮಾತ್ರ ಕಾರ್ಯ ಕಾರಣಿಸಭೆಯಲ್ಲಿ ಭಾಗವಹಿಸಿದ್ದು, ಉಳಿದವರು ಮುಂದಿನದಿನಗಳಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

Advertisement

ಅಟವಿ ಶಿವಯೋಗಿ ಸುಕ್ಷೇತ್ರದ ಶ್ರೀಅಟವಿ ಶಿವಲಿಂಗಸ್ವಾಮೀಜಿ ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ಅಯ್ಯಪ್ಪ ಸೇವಾ ಸಮಾಜಂ ನ ಪ್ರಧಾನಕಾರ್ಯದರ್ಶಿ ಕೃಷ್ಣಯ್ಯ, ತುಮಕೂರು ಜಿಲ್ಲಾಕಾರ್ಯದರ್ಶಿ ಸತ್ಯನಾರಾಯಣ್‌, ರಾಜ್ಯ ಖಜಾಂಚಿ ನರಸಿಂಹಸ್ವಾಮಿ, ತುಮಕೂರು ಜಿಲ್ಲಾ ಅಧ್ಯಕ್ಷರಾದನಾಗೇಂದ್ರಣ್ಣ, ರಾಜ್ಯ ಉಪಾಧ್ಯಕ್ಷ ಸಂಪತ್‌ ಗುರುಸ್ವಾಮಿಗಳು, ರಾಜ್ಯ ಉಪಾಧ್ಯಕ್ಷ ಮುನಿರಾಜು, ರಾಜ್ಯ ಸಂಘ ಟನಾ ಕಾರ್ಯದರ್ಶಿ ದತ್ತುಶಿಂದ್ರೆ ಉಪಸ್ಥಿತರಿದ್ದರು.

ಭಕ್ತರಿಗೆ ಅನ್ನದಾನ :  ಕಳೆದ 10 ವರ್ಷಗಳಿಗೆ ಹೋಲಿಕೆ ಮಾಡಿದರೆ ಶಬರಿ ಮಲೆಯಲ್ಲಿ ಯಾತ್ರಾತ್ರಿಗಳಿಗೆ ಅಂತಹ ವ್ಯವಸ್ಥೆ ಇರಲಿಲ್ಲ. ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಇದನ್ನು ಮನಗಂಡ ಕೆಲ ಸಮಾನ ಮನಸ್ಕ ಯಾತ್ರಾತ್ರಿಗಳು ಸೇರಿ ಅಯ್ಯಪ್ಪ ಸೇವಾ ಸಮಾಜಂ ಅನ್ನು ಹುಟ್ಟು ಹಾಕಿದರು.ಶಬರಿ ಮಲೆಗೆ ಬರುವ ಭಕ್ತರಿಗೆ ಅನ್ನದಾನಮಾಡುವ ಮೂಲಕ ಕೈಲಾದಷ್ಟು ಸೌಲಭ್ಯಕಲ್ಪಿಸಿ,ಮತ್ತಷ್ಟು ಯಾತ್ರಾತ್ರಿಗಳನ್ನು ಆಕರ್ಷಿಸಲು ಸಾಧ್ಯವಾಯಿತು ಎಂದು ಶಬರಿಮಲೈ ಅಯಪ್ಪಸೇವಾ ಸಮಾಜಂನ ರಾಷ್ಟ್ರೀಯ ಅಧ್ಯಕ್ಷ ಟಿ.ಬಿ.ಶೇಖರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next