Advertisement

ಎಸ್ಸೆಂ ಕೃಷ್ಣ , ಪ್ರಸಾದ್‌ ಅವಕಾಶವಾದಿಗಳು: ಆರ್‌.ಧ್ರುವನಾರಾಯಣ 

12:37 PM Feb 21, 2017 | |

ನಂಜನಗೂಡು: ಇತ್ತೀಚೆಗೆ ಕಾಂಗ್ರೆಸ್‌ ತೊರೆದ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಹಾಗೂ ಮಾಜಿ ಸಚಿವ ವಿ. ಶ್ರೀನಿವಾಸ ಪ್ರಸಾದ್‌ ಅವಕಾಶವಾದಿಗಳು ಎಂದು ಸಂಸದ ಆರ್‌.ಧ್ರುವನಾರಾಯಣ ಕಿಡಿಕಾರಿದರು. ಸೋಮವಾರ ಮುಂಜಾನೆ ನಗರದ ಪ್ರವಾಸಿ ಮಂದಿರಕ್ಕೆ ಆಗಮಿಸಿದ ಅವರು ಎಪಿಎಂಸಿ ಚುನಾವಣೆ ಕುರಿತು ನೂತನ ಸದಸ್ಯರು ಹಾಗೂ ಸರ್ಕಾರಿ ನಾಮ ನಿರ್ದೇಶಿತ ಸದಸ್ಯರ ಸಭೆ ನಡೆಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಾದಪ್ಪ ಹಾಗೂ ಸಿದ್ದರಾಜು ಅವರನ್ನು ಪಕ್ಷದ ಹುರಯಾಳಾಗಿಸಿದರು.

Advertisement

ನಂತರ ಅವಿರೋಧವಾಗಿ ಆಯ್ಕೆಯಾದ ಅವರಿಂದ ಅಭಿನಂದನೆ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ನಂಜನಗೂಡು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗುವವರು ಸಾಕಷ್ಟು ಅಧಿಕಾರ ಅನುಭವಿಸಿ ನಿವೃತ್ತಿಯಾಗುವುದಾಗಿ ನಿಮ್ಮ ಮುಂದೆಯೇ ಸಾಕಷ್ಟು ಸಲ ಹೇಳಿದ್ದರು. ಈಗ ಅವರಿಗೆ ನಿವೃತ್ತಿಯಾಗುವ ಕಾಲ. ಅದಕ್ಕಾಗಿ ಮತದಾರರು ಹಾಗೂ ಸುದ್ದಿಗಾರರು ಈ ವಿಷಯವನ್ನು ಅವರಿಗೆ ಜಾnಪಿಸಿ ಹೊಸಬರನ್ನು ಅಧಿಕಾರಕ್ಕೆ ತರಲು ಸಹಕರಿಸಬೇಕು ಎಂದರು.

ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಹಾಗೂ ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್‌ ಅವಕಾಶವಾದಿಗಳು. ಕಾಂಗ್ರೆಸ್‌ನಿಂದ ಎಲ್ಲ ರೀತಿಯ ಅಧಿಕಾರ ಅಂತಸ್ತು ಅನುಭವಿಸಿ ನಿವೃತ್ತಿಯಾಗಿ ಹೊಸಬರನ್ನು ಹರಸಬೇಕಾದ ಕಾಲದಲ್ಲಿ ಪಕ್ಷ ತೊರೆದು ತಮ್ಮ ಅವಕಾಶವಾದಿ ರಾಜಕಾರಣ ಪ್ರದರ್ಶಿಸಿದ್ದಾರೆ. ಅವರಿಬ್ಬರಿಗೂ ಜನತೆ ಸಾಕಷ್ಟು ಬಾರಿ ಅಧಿಕಾರ ನೀಡಿದ್ದಾರೆ. ಈಗ ಜನತೆಯೇ ಹೊಸಬರಿಗೆ ಅವಕಾಶ ಮಾಡಿಕೊಡಲಿ ಎಂಬುದು ತಮ್ಮ ಆಸೆ ಎಂದರು.

“ಇಲ್ಲಿ ಗೆಲ್ಲುವುದು ಮಾತ್ರ ಕಾಂಗ್ರೆಸ್‌’: ನಂಜನಗೂಡಿನ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ನಿಶ್ಚಿತ ಎಂದು ಧ್ರುವನಾರಾಯಣ ಹೇಳಿದ್ದಾರೆ. ಮಾಜಿ ಸಚಿವ ವಿ.ಶ್ರೀನಿವಾಸ್‌ ಪ್ರಸಾದ್‌ ಅವರದೇ ಜಯ ಎಂದು ಕೋಡಿ ಮಠದ ಸ್ವಾಮಿಗಳು ಹೇಳಿದ್ದಾರೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ ವಿಚಲಿತರಾದ ಸಂಸದರು, ಕೋಡಿ ಮಠದ ಸ್ವಾಮಿಗಳ ಭವಿಷ್ಯವನ್ನೂ ನೀವು ನಂಬಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತ ನಡೆಸುವುದು ಕೇವಲ ಎರಡು ವರ್ಷ ಎಂದು ಅವರು 2013ರಲ್ಲಿ ನುಡಿದಿದ್ದ ಭವಿಷ್ಯವಾಣಿಯ ಕತೆ ಎನಾಯಿತು ಎಂದು ಪ್ರಶ್ನಿಸಿದರು. ಇಂದಿಗೂ ಸಿದ್ದರಾಮಯ್ಯನವರ ಆಡಳಿತವೇ ಮುಂದುವರಿದಿದೆಯಲ್ಲವೇ, ಅವರ ಮಾತನ್ನೂ ನೀವೂ ನಂಬುತ್ತೀರಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next