Advertisement
ಪ್ರಬಂಧ ಬರೆಯಲು ಎಲ್ಲರಿಗೂ ಇಷ್ಟವಿರುವುದಿಲ್ಲ ಆದರೆ ಅದರಿಂದ ಹಲವು ಅನೂಕೂಲಗಳಿವೆ. ಅದೆಂತಹ ಅನುಕೂಲ ಎಂಬ ಕೂತೂಹಲವಿರುವುದು ಸಾಮಾನ್ಯ. ಪ್ರಬಂಧ ಬರೆಯುವುದು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ.
ಒಂದು ಪ್ರಬಂಧ ಬರೆಯಬೇಕಾದರೆ ಹಲವು ರೀತಿಯ ಪುಸ್ತಕಗಳನ್ನು ಓದಬೇಕಾಗುತ್ತದೆ. ಆಗ ಹೊಸ ವಿಷಯಗಳ ಪರಿಚಯವಾಗುತ್ತದೆ. ಪ್ರಬಂಧಕ್ಕೆ ಪೂರಕವಾದಂತಹ ಮಾಹಿತಿಗಳು ದೊರಕುತ್ತವೆ. ಹಲವು ಪುಸ್ತಕಗಳು ನೆನಪಿನ ಶಕ್ತಿಯನ್ನು ಹೆಚ್ಚಿಸಿ ಬೇರೆ ಬೇರೆ ವಿಷಯಗಳನ್ನು ಸುಲಭವಾಗಿ ತಿಳಿದುಕೊಳ್ಳಲು ಸಹಾಯ ಮಾಡುತ್ತವೆೆ. ಓದುವುದು ಮಾತ್ರವಲ್ಲದೆ ಬೇರೆ ಬೇರೆ ಕಡೆಗಳಿಂದ ವಿಷಯ ಸಂಪಾದಿಸಿಕೊಳ್ಳಬಹುದು. ಇದರಿಂದ ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಳ್ಳಬಹುದು.
Related Articles
ವಿದ್ಯಾರ್ಥಿಗಳು ಹೇಗೆ ಒಂದು ವಿಷಯವನ್ನು ಪ್ರಸ್ತುತ ಪಡಿಸಬೇಕೆನ್ನುವುದನ್ನು ಪ್ರಬಂಧ ಕಲಿಸಿಕೊಡುತ್ತದೆ. ಒಂದು ವಿಷಯವನ್ನು ಹೇಗೆ ಆರಂಭಿಸಬೇಕು, ಹೇಗೆ ಆರಂಭಿಸಿದರೆ ಉತ್ತಮ ಮತ್ತು ಅದಕ್ಕೆ ಪೂರಕವಾದ ಅಂಶಗಳನ್ನು ನೀಡುವುದು ಹೇಗೆ ಎಂಬುದನ್ನು ಮನಗಾಣಲು ಸಹಾಯ ಮಾಡುತ್ತದೆ. ಇದರಿಂದ ಒಬ್ಬ ವಿದ್ಯಾರ್ಥಿ ತಾನು ಹೇಗೆ ಒಂದು ವಿಷಯವನ್ನು ಪ್ರಸ್ತುತಪಡಿಸಬಹುದು ಎಂಬುದನ್ನು ತಿಳಿದುಕೊಳ್ಳುತ್ತಾನೆ.
Advertisement
ಭಾಷಾ ಪ್ರೌಢಿಮೆಇವೆಲ್ಲವುದರ ಹೊರತಾಗಿ ಪ್ರಬಂಧ ಬರೆಯುವುದರಿಂದ ವಿದ್ಯಾರ್ಥಿ ತನ್ನ ಭಾಷಾ ಪ್ರೌಢಿಮೆಯನ್ನು ಹೆಚ್ಚಿಸಿಕೊಳ್ಳಬಹುದು. ಪ್ರಬಂಧ ಬರೆಯುವಾಗ ಬಳಸುವ ಪದಗಳು, ಅದು ಯಾವ ಅರ್ಥ ನೀಡಿದರೆ ಹೆಚ್ಚು ಸೂಕ್ತ, ಪದ ಬಳಕೆ ಯಾವುದು ಸರಿ? ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ಪ್ರಬಂಧ ಉತ್ತರ ನೀಡುತ್ತದೆ. ಒಬ್ಬ ವಿದ್ಯಾರ್ಥಿ ಹೆಚ್ಚು ಹೆಚ್ಚು ಬರೆಯುತ್ತಾ ಹೋದಂತೆ ಭಾಷೆಯ ಪ್ರೌಢಿಮೆ ಹೆಚ್ಚುತ್ತದೆ. ಹೀಗೆ ಪ್ರಬಂಧ ಬರೆಯುವುದರಿಂದ ವಿದ್ಯಾರ್ಥಿಯ ಕೌಶಲ ವೃದ್ಧಿ ಯಾಗುವುದಲ್ಲದೆ ಅವರ ಸಾಮರ್ಥ್ಯ ಕೂಡ ಹೆಚ್ಚುತ್ತದೆ ಉತ್ತಮ ಬರೆವಣಿಗೆ
ಪ್ರಬಂಧ ಬರೆಯುವ ರೂಢಿ ಬೆಳೆಸಿಕೊಂಡಲ್ಲಿ ಸರ್ವೇ ಸಾಮಾನ್ಯವಾಗಿ ಉತ್ತಮ ಬರವಣಿಗೆಗೆ ಸಹಕಾರಿ. ಅದಲ್ಲದೆ ಇದು ಕಾರ್ಯಕ್ಷಮತೆಯನ್ನು ಇಮ್ಮಡಿಗೊಳಿಸುತ್ತದೆ. ಹೆಚ್ಚು ಹೆಚ್ಚು ಬರೆಯುವುದರಿಂದ ಅಕ್ಷರಗಳು ಸುಂದರವಾಗಿ ಮೂಡುವುದಲ್ಲದೆ ಬರವಣಿಗೆಯ ವೇಗ ಕೂಡ ಹೆಚ್ಚುತ್ತದೆ. ಪ್ರೀತಿ ಭಟ್ ಗುಣವಂತೆ