Advertisement

Escom Online services; 10 ದಿನ ಎಸ್ಕಾಂ ಆನ್‌ಲೈನ್‌ ಸೇವೆ ಅಲಭ್ಯ

11:18 PM Mar 06, 2024 | Team Udayavani |

ಬೆಂಗಳೂರು: ಇಂಧನ ಇಲಾಖೆಯ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ ಕಾರ್ಯ ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ಹತ್ತು ದಿನಗಳ ಕಾಲ ಮೆಸ್ಕಾಂ ಸಹಿತ ರಾಜ್ಯದ ಎಲ್ಲ ವಿದ್ಯುತ್‌ ಸರಬರಾಜು ಕಂಪೆನಿ (ಎಸ್ಕಾಂ)ಗಳ ಆನ್‌ಲೈನ್‌ ಸೇವೆಗಳು ಅಲಭ್ಯವಾಗಲಿದೆ.

Advertisement

ಮಾರ್ಚ್‌ 10ರಿಂದ 19ರ ವರೆಗೆ ರಾಜ್ಯದ ಎಲ್ಲ ಎಸ್ಕಾಂಗಳ ವ್ಯಾಪ್ತಿಯಲ್ಲಿ ನಗರ ಪ್ರದೇಶಗಳಲ್ಲಿ ವಿದ್ಯುತ್‌ ಬಿಲ್‌ ಪಾವತಿ, ಹೊಸ ಸಂಪರ್ಕಕ್ಕಾಗಿ ಆನ್‌ಲೈನ್‌ ಅರ್ಜಿ ಸಲ್ಲಿಕೆ, ಹೆಸರು ಮತ್ತು ಜಕಾತಿ ಬದಲಾವಣೆ ಸಹಿತ ಯಾವುದೇ ಆನ್‌ಲೈನ್‌ ಸೇವೆಗಳು ಇರುವುದಿಲ್ಲ. ನಿತ್ಯ ಸಾವಿರಾರು ಜನ ವಿದ್ಯುತ್‌ಗೆ ಸಂಬಂಧಿಸಿದ ಆನ್‌ಲೈನ್‌ ಸೇವೆಗಳನ್ನು ಪಡೆಯುತ್ತಿದ್ದು, ಅವರೆಲ್ಲರಿಗೂ ಇದರಿಂದ ಕೊಂಚ ಕಿರಿಕಿರಿ ಆಗಲಿದೆ. ಆದರೆ ವಿದ್ಯುತ್‌ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ ಎಂದು ಎಸ್ಕಾಂಗಳು ಸ್ಪಷ್ಟಪಡಿಸಿವೆ.

ಬಿಲ್‌ ತಂತ್ರಾಂಶವು ಕಾರ್ಯಾರಂಭಗೊಂಡ ಬಳಿಕ ಸ್ಥಿರಗೊಳ್ಳಲು ಸುಮಾರು 15 ದಿನಗಳ ಕಾಲಾವಕಾಶ ಬೇಕಿರುವುದರಿಂದ ಈ ಸಮಯದಲ್ಲಿ ತಂತ್ರಾಂಶದ ಕಾರ್ಯನಿರ್ವಹಣೆಯಲ್ಲಿ ಸ್ವಲ್ಪ ಮಟ್ಟದ ವ್ಯತ್ಯಯ ಉಂಟಾಗಬಹುದು. ಆದರೆಸಾಫ್ಟ್ ವೇರ್‌ ಉನ್ನತೀಕರಣ ಸಂದರ್ಭದಲ್ಲಿ ವಿದ್ಯುತ್‌ ಪಾವತಿ ಸಾಧ್ಯವಾಗದ ಕಾರಣ, ಗ್ರಾಹಕರ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುವುದಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next