Advertisement

ESI ವೇತನ ಮಿತಿ ಹೆಚ್ಚಳ: ಶಾಸಕ ಯಶ್‌ಪಾಲ್‌ ಸುವರ್ಣ ಮನವಿ

12:11 AM Dec 06, 2024 | Team Udayavani |

ಉಡುಪಿ: ಇಎಸ್‌ಐ ಸೌಲಭ್ಯ ವೇತನ ಮಿತಿ ಏರಿಕೆ ಮಾಡುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಶಾಸಕ ಯಶ್‌ಪಾಲ್‌ ಸುವರ್ಣ ಮನವಿ ಮಾಡಿದರು.

Advertisement

ದಿಲ್ಲಿಯಲ್ಲಿ ಸಚಿವೆಯನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಅವರು, ಈ ಹಿಂದೆ ಇದ್ದ 15 ಸಾವಿರ ರೂ. ವೇತನ ಮಿತಿಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 2016ರಲ್ಲಿ ರೂ. 21 ಸಾವಿರಕ್ಕೆ ಏರಿಸಿ ದೇಶದ ಕೋಟ್ಯಂತರ ಕಾರ್ಮಿಕರು,ಉದ್ಯೋಗಿಗಳು ಹಾಗೂ ಅವರ ಕುಟುಂಬಕ್ಕೆ ಉಚಿತ ವೈದ್ಯಕೀಯ ಸೌಲಭ್ಯ ಒದಗಿಸಿತ್ತು.

ಕಳೆದ 8 ವರ್ಷಗಳಿಂದ ಇಎಸ್‌ಐ ಸೌಲಭ್ಯಕ್ಕೆ ಅರ್ಹ ವೇತನ ಮಿತಿ ಏರಿಕೆಯಾಗದ ಕಾರಣ 21 ಸಾವಿರ ರೂ. ಮೇಲ್ಪಟ್ಟ ವೇತನ ಶ್ರೇಣಿಯ ಕಾರ್ಮಿಕರು ಯೋಜನೆಯಿಂದ ವಂಚಿತರಾಗುತ್ತಿದ್ದಾರೆ.

ವರ್ಷದಿಂದ ವರ್ಷಕ್ಕೆ ಖಾಸಗಿ ಕ್ಷೇತ್ರದಲ್ಲಿ ನೀಡಲಾಗುವ ವಾರ್ಷಿಕ ಭಡ್ತಿ, ಬೆಲೆ ಏರಿಕೆ ಅನುಗುಣವಾಗಿ ವೇತನ ಏರಿಕೆಯಾಗುತ್ತಿರುವುದರಿಂದ ಮಿತಿ ಹೆಚ್ಚಿಸಿದರೆ ಕಾರ್ಮಿಕ ವರ್ಗಕ್ಕೆ ಅನುಕೂಲ ಕಲ್ಪಿಸಿದಂತಾಗುತ್ತದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಮನವಿಗೆ ಸ್ಪಂದಿಸಿದ ಸಚಿವೆ ಪೂರಕ ಕ್ರಮದ ಭರವಸೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next