Advertisement

ಈಶ್ವರಪ್ಪ ಹೇಳಿಕೆ, ಇಡೀ ಪಕ್ಷದ ಹೇಳಿಕೆ: ಮಾಜಿ ಸಚಿವ ಯು.ಟಿ ಖಾದರ್

10:36 AM Feb 20, 2022 | Team Udayavani |

ಬೆಂಗಳೂರು: ಭಾರತ ದೇಶದ ಧ್ವಜಕ್ಕೆ ಮಾಡಿದ ಅವಮಾನ, ದೇಶಕ್ಕೆ ಮಾಡಿದ ಅವಮಾನ, ರಾಜೀನಾಮೆ ಬಗ್ಗೆ ಬಿಜೆಪಿ ನಾಯಕರು ಕ್ರಮ ಕೈಗೊಳ್ಳದೇ ಇದ್ದರೆ, ಅದು ಇಡೀ ದೇಶಕ್ಕೆ ಗೊತ್ತಾಗುತ್ತದೆ, ಆಗ ಈಶ್ವರಪ್ಪ ಹೇಳಿಕೆ, ಇಡೀ ಪಕ್ಷದ ಹೇಳಿಕೆ ಆಗುತ್ತದೆ ಎಂದು ಮಾಜಿ ಸಚಿವ ಯು ಟಿ ಖಾದರ್ ಕಿಡಿಕಾರಿದ್ದಾರೆ.

Advertisement

ಕಾಂಗ್ರೆಸ್ ನಾಯಕರಿಂದ ಆಹೋರಾತ್ರಿ ಧರಣಿ ವಿಚಾರವಾಗಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಇದರ ಬಗ್ಗೆ ಇನ್ನೂ ಹೋರಾಟ ಮುಂದುವರೆಸುತ್ತೇವೆ. ಸ್ಪೀಕರ್ ಅಧಿವೇಶನ ಮುಂದಕ್ಕೆ ಹಾಕಿದರೆ, ಜನರ ಮುಂದೆ ಹೋಗುತ್ತೇವೆ ಎಂದರು.

ಇದನ್ನೂ ಓದಿ:ಹಿಜಾಬ್‌ ವಿವಾದ: ಪ್ರಧಾನಿ ಮೋದಿ ಮೌನವಹಿಸಿರುವುದೇಕೆ?

ದೇಶದ ಸಂವಿಧಾನ, ಸಾರ್ವಭೌಮತೆ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು. ರಾಷ್ಟ್ರ ಧ್ವಜಕ್ಕಾದ ಅವಮಾನ ಬಗ್ಗೆ ಬಿಜೆಪಿ ನಾಯಕರು ಚರ್ಚೆ ಮಾಡಲಿ. ಬೇರೆ, ಸಣ್ಣ ವಿಚಾರಗಳ ಬಗ್ಗೆಯೂ ಕಾಂಗ್ರೆಸ್ ಹೋರಾಟ ಮಾಡಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next