ಶಿವಮೊಗ್ಗ : ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಅಲ್ಲೊಂದು ಇಲ್ಲೊಂದು ಗೊಂದಲ ಇದ್ದಿದ್ದು ನಿಜ. ನಮ್ಮ ನಾಯಕರಾದ ಅರುಣ್ ಸಿಂಗ್ ಬಂದು, ಸಮಸ್ಯೆ ಪರಿಹಾರ ಮಾಡಿದ್ದಾರೆ. ನಾಲ್ಕು ಗೋಡೆ ಮಧ್ಯೆ ಕುಳಿತು ಎಲ್ಲರ ಸಮಸ್ಯೆ ಕೇಳಿ ಬಗೆಹರಿಸಿದ್ದಾರೆ. ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಸಹ ಸ್ಪಷ್ಟಪಡಿಸಿದ್ದಾರೆ ಎಂದು ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಅವರು ಬರುವ ಮುಂಚೆ ಇದ್ದ ಗೊಂದಲ ಬಗೆಹರಿದಿದ್ದು, ಸರ್ಕಾರ ಶಕ್ತಿಶಾಲಿಯಾಗಿ ಕೆಲಸ ಮಾಡಲಿದೆ. ಜೊತೆಗೆ ಯಾರು ಕೂಡ ಪರ- ವಿರೋಧದ ಬಹಿರಂಗ ಹೇಳಿಕೆ ನೀಡದಂತೆ ಅರುಣ್ ಸಿಂಗ್ ಸೂಚಿಸಿದ್ದಾರೆ. ಅಭಿವೃದ್ಧಿ ಬಗ್ಗೆ, ಪಕ್ಷದ ಸಂಘಟನೆ ಬಗ್ಗೆ ಗಮನ ಹರಿಸಲು ಮಾತ್ರ ಸೂಚನೆ ನೀಡಿದ್ದಾರೆ.
ಕಾಂಗ್ರೆಸ್ಸಿಗರು ಐದು ವರ್ಷ ಹಾಗೋ ಹೀಗೋ ಅಧಿಕಾರ ಮಾಡಿದ್ರು. ಬಳಿಕ ರಾಜ್ಯದ ಜನ ತಿರಸ್ಕಾರ ಮಾಡಿದ್ರು. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, ಸಚಿವರುಗಳು, ಶಾಸಕರುಗಳು ಸೋತು ಸರ್ಕಾರವೇ ಹೋಯ್ತು. ಸರ್ಕಾರ ಹೋದ ಮೇಲೂ ಕೆಲವು ನಾಯಕರು ಸಿಎಂ ಸ್ಥಾನದ ಕನಸು ಕಾಣ್ತಾನೆ ಇದ್ದಾರೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮೇಲ್ನೋಟಕ್ಕೆ ಇಬ್ಬರು ಸಿಎಂ ಸ್ಥಾನಕ್ಕೆ ಹೋರಾಟ ಮಾಡ್ತಿದ್ದಾರೆ.
ಸಿಎಂ ಸ್ಥಾನದ ಬಗ್ಗೆ ಅಗೆವರು ಹೇಳಲ್ಲ. ಯಾರೋ ಜನ ಹೇಳ್ತಾರೆ. ಶಾಸಕರು ಹೇಳ್ತಾರೆ ಅಂತಾರೇ. ಅದು ಜಮೀರ್ ವೈಯಕ್ತಿಕ ಅಭಿಪ್ರಾಯ ಅಂತಾರೆ. ಹಾಗಾದ್ರೇ ನಿಮ್ಮ ಅಭಿಪ್ರಾಯ ಏನು..?? ನೀವು ಮೊದಲು ಶಾಸಕರಾಗಿ ಗೇಲ್ತಿರಾ ನೋಡಿಕೊಳ್ಳಿ… ಜನ ನಿಮ್ಮನ್ನ ತಿರಸ್ಕಾರ ಮಾಡಿದ್ದಾರೆ. ಸಿಎಂ ಸ್ಥಾನದ ಕನಸು ಬಿಟ್ಟು ಮೊದಲನೆಯದಾಗಿ ಇಬ್ಬರೂ ಶಾಸಕರಾಗಿ ಗೆದ್ದು ಬನ್ನಿ ಎಂದು ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.