Advertisement

ಈಶ್ವರಪ್ಪ ಮಾತಿನ‌‌ ಮರ್ಮ ಏನು ?: ರಾಜ್ಯಾಧ್ಯಕ್ಷ ಸ್ಥಾನದ‌ ಮೇಲೆ ಕಣ್ಣು?

11:26 AM Jan 24, 2022 | Team Udayavani |

ಬೆಂಗಳೂರು : ಒಂದೆಡೆ ಸಂಪುಟ ವಿಸ್ತರಣೆ ಬಗ್ಗೆ ಶಾಸಕ ಎಂ.ಪಿ.ರೇಣುಕಾಚಾರ್ಯ ದಿನೇ ದಿನೇ ರಚ್ಚೆ ಹಿಡಿಯುತ್ತಿರುವಾಗಲೇ ” ವರಿಷ್ಠರು ಒಪ್ಪಿದರೆ ಯಾವುದೇ ಜವಾಬ್ದಾರಿ ಹೊರುವುದಕ್ಕೆ ಸಿದ್ದ” ಎಂದು ಹೇಳಿಕೆ ನೀಡಿರುವುದು ಈಗ ಕುತೂಹಲಕ್ಕೆ ಕಾರಣವಾಗಿದೆ.

Advertisement

ವರಿಷ್ಠರು ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ ಎಂದು ಈಶ್ವರಪ್ಪ ಹೇಳಿಕೆಯ ಮರ್ಮವೇನು ? ಎಂಬ ಬಗ್ಗೆ ಈಗ ಚರ್ಚೆ ಆರಂಭವಾಗಿದೆ. ಸಂಪುಟದಲ್ಲಿ ಪ್ರಭಾವಿ ಖಾತೆ ನಿಭಾಯಿಸುತ್ತಿರುವ ಈಶ್ವರಪ್ಪ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಂದರ್ಭದಲ್ಲೂ ಇದೇ ಹೇಳಿಕೆ ನೀಡಿದ್ದರು.

ಹಾಗಾದರೆ ಚುನಾವಣಾ ದೃಷ್ಟಿಯಿಂದ ವರಿಷ್ಠರು ಸಂಪುಟ ಪುನಾರಚನೆ ಚಿಂತನೆ ನಡೆಸಿದ್ದಾರೆಯೇ ? ಆ ಸಂದರ್ಭದಲ್ಲಿ ಹಿರಿಯ ಸಚಿವರನ್ನು ಕೈ ಬಿಡುವ ಸಾಧ್ಯತೆ ಇದೆಯೇ ? ಎಂಬ ತರ್ಕವೂ ಈಗ ಶುರುವಾಗಿದೆ. ಹಾಗೆ ನೋಡಿದರೆ ಬೊಮ್ಮಾಯಿ ಸಂಪುಟದಲ್ಲಿ ಈಶ್ವರಪ್ಪ ಹಾಗೂ ಗೋವಿಂದ ಕಾರಜೋಳ ಹಿರಿಯರು.

ಇದನ್ನೂ ಓದಿ :ವರಿಷ್ಠರು ಒಪ್ಪಿದರೆ ಸಂಪುಟ ವಿಸ್ತರಣೆ: ಸಿಎಂ ಬೊಮ್ಮಾಯಿ ಸ್ಪಷ್ಟ ನುಡಿ

ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟರಾ ?
ಈಶ್ವರಪ್ಪ ಈ ಹೇಳಿಕೆಯಿಂದ ಅವರು ರಾಜ್ಯಾಧ್ಯಕ್ಷ ಸ್ಥಾನದ ಮೇಲೆ‌ ಕಣ್ಣಿಟ್ಟಿದ್ದಾರೆಯೇ ? ಎಂಬ ಅನುಮಾನವೂ ಆರಂಭವಾಗಿದೆ. ಈಶ್ವರಪ್ಪ ಈ ಹಿಂದೆಯೂ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ನಳೀನ್ ಕುಮಾರ್ ಕಟೀಲ್ ಬದಲಾವಣೆಯಾದಾಗ ಹಿಂದುಳಿದ ವರ್ಗದ ಖೋಟಾದಲ್ಲಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸಾಧ್ಯತೆ ಇದೆ.

Advertisement

ಭವಿಷ್ಯದ ಲೆಕ್ಕಾಚಾರಗಳನ್ನು ಆಧರಿಸಿ ಪಕ್ಷದ ಅಧ್ಯಕ್ಷ ಸ್ಥಾನ ನಿರ್ವಹಣೆ ಬಗ್ಗೆ ಈಶ್ವರಪ್ಪ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ. ಪ್ರಭಾವಿ ಲಿಂಗಾಯಿತ ಸಮುದಾಯದವರು ಮುಖ್ಯಮಂತ್ರಿ ಸ್ಥಾನದಲ್ಲಿರುವುದರಿಂದ ಹಿಂದುಳಿದ ವರ್ಗಕ್ಕೆ ರಾಜ್ಯಾಧ್ಯಕ್ಷ ಸ್ಥಾನ ಪಟ್ಟ ಕಟ್ಟಿದರೆ ಚುನಾವಣೆ ದೃಷ್ಟಿಯಿಂದ ಅನುಕೂಲ, ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಎಸೆಯುವ ದಾಳಕ್ಕೆ ಇದರಿಂದ ಪ್ರತಿತಂತ್ರ ಹೆಣೆಯಬಹುದೆಂಬ ಲೆಕ್ಕಾಚಾರ ಅಡಗಿದೆ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next