Advertisement

ಬಿಜೆಪಿಯಲ್ಲಿ ಜಾತಿ ಆಧಾರದಡಿ ಸಚಿವ ಸ್ಥಾನ ನೀಡಲ್ಲ: ಈಶ್ವರಪ್ಪ

11:03 PM Sep 08, 2019 | Lakshmi GovindaRaju |

ಬೆಳಗಾವಿ: ಬಿಜೆಪಿಯಲ್ಲಿ ಜಾತಿ ಆಧಾರದ ಮೇಲೆ ಸಚಿವ ಸ್ಥಾನ ನೀಡುವ ಪರಿಪಾಠ ಇಲ್ಲ. ನಮ್ಮಲ್ಲಿ ಜಾತಿಗಳ ಹೆಸರಿನ ಮೇಲೆ ಹುದ್ದೆಗಳನ್ನು ನೀಡುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಕುರುಬರ ಸಂಖ್ಯೆ ಹೆಚ್ಚಿದೆ ಎಂಬುದು ಪ್ರಮುಖ ಮಾನದಂಡವಲ್ಲ.

Advertisement

ಆದರೆ ಎಲ್ಲ ಜಾತಿ ಮತ್ತು ಸಮಾಜಗಳು ಸೇರಿಯೇ ಸರ್ಕಾರ ರಚನೆಯಾಗುತ್ತದೆ. ಮೋದಿ ಅವರ ಜಾತಿ ಯಾವುದು ಅಂತಾ ತಿಳಿದುಕೊಳ್ಳಲು ನಾನು ಒದ್ದಾಡಿದ್ದೇನೆ. ಜಾತಿಯೇ ಹುದ್ದೆ ಕೊಡಲು ಮಾನ ದಂಡ ಅಲ್ಲ. ಜಾತಿ ಪ್ರಶ್ನೆ ಬಿಜೆಪಿಯಲ್ಲಿ ಉದ್ಭವ ಆಗಿಲ್ಲ, ಹಿರಿಯರ ತೀರ್ಮಾನವೇ ಅಂತಿಮ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next