Advertisement
ಈಶ್ವರಮಂಗಲ-ಸುಳ್ಯಪದವು ಜಿ.ಪಂ. ರಸ್ತೆ ಕೇರಳ ರಾಜ್ಯವನ್ನು ಸಂಪರ್ಕಿಸುತ್ತದೆ. ಮೂರು ದಶಕಗಳಿಂದ ಈ ರಸ್ತೆ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಗೊಂಡಿಲ್ಲ. ಕಾಂಗ್ರೆಸ್, ಬಿಜೆಪಿ ಶಾಸಕರು ಆಯ್ಕೆಯಾ ದರೂ ಈ ರಸ್ತೆ ಹೊಂಡಗಳಿಂದ ಮುಕ್ತಿ ಗೊಂಡಿಲ್ಲ. ವರ್ಷ ವರ್ಷ ಈ ರಸ್ತೆ ಅಭಿ ವೃದ್ಧಿಗೆ ಲಕ್ಷಾಂತರ ರೂಪಾಯಿ ವ್ಯಯಿಸಿ ಕೊಟ್ಟ ಅನುದಾನ ಕೋಟ್ಯಂತರ ರೂಪಾಯಿ ಆಗಿ ಹೋಗಿದೆ. ರಸ್ತೆ ಮಾತ್ರ ನಾದುರಸ್ತಿಯಲ್ಲಿದೆ.
ಕೇರಳ – ಕರ್ನಾಟಕ ಗಡಿಭಾಗದ ಜನರಿಗೆ ಈ ರಸ್ತೆ ಅನಿವಾರ್ಯವಾಗಿದೆ. ಈಶ್ವರಮಂಗಲ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾಗಿದೆ. ಗಡಿಭಾಗದ ಜನರು ಈಶ್ವರಮಂಗಲ ಪೇಟೆಯನ್ನು ಅವಲಂಬಿಸಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಆಸ್ಪತ್ರೆ, ಗ್ರಾಮ ಕರಣಿಕರ ಕಚೇರಿ, ಶಿಕ್ಷಣ ಸಂಸ್ಥೆ, ಬ್ಯಾಂಕ್, ವಾಣಿಜ್ಯ ಮಳಿಗೆಗಳು, ದೂರವಾಣಿ ವಿನಿಮಯ ಕೇಂದ್ರ ಹೀಗೆ ಗ್ರಾಮಸ್ಥರು ಈ ಪ್ರದೇಶವನ್ನು ಅವಲಂಬಿಸಿದ್ದಾರೆ. ರಸ್ತೆ ಮೇಲೆ ನೀರು
ಚರಂಡಿಯ ಸಮರ್ಪಕ ವ್ಯವಸ್ಥೆ ಇಲ್ಲದೇ ಇರುವುದರಿಂದ ಮಳೆಗಾಲದಲ್ಲಿ ನೀರು ರಸ್ತೆ ಮೇಲೆ ಹರಿಯುತ್ತಿರುವ ಕಾರಣ ಇದ್ದ ಅಲ್ಪಸ್ವಲ್ಪ ಡಾಮರು ಕೂಡ ಕೊಚ್ಚಿ ಹೋಗುತ್ತಿದೆ. ಬೇಸಗೆಯಲ್ಲಿ ರಸ್ತೆಯು ಧೂಳಿನಿಂದ ಕೂಡಿರುತ್ತದೆ. ಇದರಿಂದ ಸವಾರರಿಗೆ ತೊಂದರೆಯಾಗುತ್ತಿದೆ. ಚರಂಡಿ ಗಳಲ್ಲಿ ಮೆಸ್ಕಾಂ ವಿದ್ಯುತ್ ಕಂಬಗಳು, ಬಡಗನ್ನೂರು ಗ್ರಾ.ಪಂ. ಸಂಬಂಧಪಟ್ಟ ಕುಡಿಯುವ ನೀರಿನ ಕೊಳವೆ ಬಾವಿಗಳು, ಅದರ ಶೆಡ್ಡಗಳು ಇವೆ. ಅಲ್ಲಲ್ಲಿ ರಸ್ತೆಯಲ್ಲಿ ಹೊಂಡಗಳು ಇದ್ದು ಮಳೆಯ ನೀರು ತುಂಬಿ ವಾಹನ ಸಂಚಾರ ದುಸ್ತರವಾಗಿದೆ.
Related Articles
Advertisement
ಬಲವಾದ ಗಾಳಿ ಬೀಸಿದರೆ ಮರಗಳು ರಸ್ತೆಗೆ ಬೀಳಲಿವೆ. ಇದರಿಂದ ಅನಾಹುತಗಳು ನಡೆಯುವ ಸಾಧ್ಯತೆಗಳು ಹೆಚ್ಚಿವೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಶೀಘ್ರವಾಗಿ ಸ್ಪಂದಿಸಬೇಕಾಗಿದೆ.
ಈ ರಸ್ತೆ ಬಗ್ಗೆ ಸ್ಥಳೀಯರೊಬ್ಬರು ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಮನವಿ ಮಾಡಿ ರಸ್ತೆ ಅಭಿವೃದ್ಧಿಪಡಿಸುವಂತೆ ಮನವಿ ಮಾಡಿ ಎರಡು ವರ್ಷ ಕಳೆದಿದೆ. ಜಿ.ಪಂ. ಎಂಜಿನಿಯರಿಂಗ್ ವಿಭಾಗದಿಂದ ವರದಿ ಕಾರ್ಯಾಲಯಕ್ಕೆ ತಲುಪಿದರೂ ಪ್ರಯೋಜನವಾಗಿಲ್ಲ.
ಪೂರ್ಣಪ್ರಮಾಣದ ಅನುದಾನ ಬಂದಿಲ್ಲಮಳೆಹಾನಿಯ ಅನುದಾನ ಇದೆ. ನೀರಿನ ಸಮಸ್ಯೆಯಿಂದಾಗಿ ರಸ್ತೆ ಕಾಮಗಾರಿ ನಡೆದಿಲ್ಲ. ಆಯ್ದ ಸ್ಥಳವನ್ನು ಗುರುತಿಸಿ ಕಾಮಗಾರಿ ನಡೆಸುತ್ತೇವೆ. ಪೂರ್ಣ ಪ್ರಮಾಣದಲ್ಲಿ ರಸ್ತೆ ಅಭಿವೃದ್ಧಿಗೆ ಯಾವುದೇ ಅನುದಾನ ಬಂದಿಲ್ಲ.
– ಗೋವರ್ಧನ, ಜಿ.ಪಂ. ಎಂಜಿನಿಯರ್ – ಮಾಧವ ನಾಯಕ್ ಕೆ.