Advertisement

ಸರ್ಕಾರದ ವಿರುದ್ದ ಸದನದ ಒಳಗೆ-ಹೊರಗೆ ಹೋರಾಟ

02:39 PM Aug 15, 2021 | Team Udayavani |

ರಾಯಚೂರು: ರಾಜ್ಯದಲ್ಲಿ ಕೊರೊನಾ ಸೋಂಕಿನಿಂದಮೃತಪಟ್ಟವರ ಮನೆಗೆ ತೆರಳಿ ಸಾಂತ್ವನ ಹೇಳುವಜತೆಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅವರಿಗೆಸರ್ಕಾರ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿಸದನದ ಒಳಗೆ-ಹೊರಗೆ ಕಾಂಗ್ರೆಸ್‌ನಿಂದ ಹೋರಾಟನಡೆಸುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆತಿಳಿಸಿದರು.

Advertisement

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಜ್ಯ-ಕೇಂದ್ರದಲ್ಲಿ ಬಿಜೆಪಿ ದುರಾಡಳಿತ ನಡೆಸುತ್ತಿದೆ.ಕೊರೊನಾದಿಂದ ಲಕ್ಷಾಂತರ ಜನ ಸತ್ತರೂ ಕೇಂದ್ರಸರ್ಕಾರ ಸುಳ್ಳು ಮಾಹಿತಿ ನೀಡುತ್ತದೆ. ರಾಜ್ಯದಲ್ಲಿಕನಿಷ್ಟ 3 ಲಕ್ಷ ಜನ ಕೋವಿಡ್‌ಗೆ ಬಲಿಯಾಗಿದ್ದಾರೆ.

ಸೋಂಕಿನಿಂದ ಮೃತಪಟ್ಟವರ ಕುಟುಂಬಗಳು ಸಂಕಷ್ಟಕ್ಕೆಸಿಲುಕಿವೆ. ಆದರೆ, ಸರ್ಕಾರ ಅವರಿಗೆ ಕನಿಷ್ಟ ಸಹಾಯಮಾಡಿಲ್ಲ. ಹೀಗಾಗಿ ನಮ್ಮ ಕಾರ್ಯಕರ್ತರು ಅವರ ಮನೆಗೆತೆರಳಿ ಸಾಂತ್ವನ ಹೇಳುವ ಜತೆಗೆ ಸಾವಿನ ಮಾಹಿತಿಸಂಗ್ರಹಿಸಿ ಪರಿಹಾರ ಒದಗಿಸಲು ಶ್ರಮಿಸುವುದಾಗಿತಿಳಿಸಿದರು.ಮೊದಲ ಮತ್ತು ಎರಡನೇ ಅಲೆಯಲ್ಲಿ ವಹಿಸಿದನಿರ್ಲಕ್ಷ ಮೂರನೇ ಅಲೆಯಲ್ಲೂ ವಹಿಸಲಾಗುತ್ತಿದೆ.ಸೂಕ್ತ ಮುನ್ನೆಚ್ಚರಿಕೆ ವಹಿಸುತ್ತಿಲ್ಲ. ಆಸ್ಪತ್ರೆಗಳಲ್ಲಿ ಬೆಡ್‌ಗಳವ್ಯವಸ್ಥೆ, ಆಂಬ್ಯುಲೆನ್ಸ್‌, ಆಕ್ಸಿಜನ್‌ ಸಿಗದೇ ಮೃತಪಟ್ಟವರಸಂಖ್ಯೆ ಹೆಚ್ಚಾಗಿದೆ ಎಂದು ದೂರಿದರು.

ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕ ಎಂದುಹೆಸರು ಮಾತ್ರ ಬದಲಾಯಿಸಿದೆ. ಆದರೆ, ಅಭಿವೃದ್ಧಿಮಾಡುವುದನ್ನು ಮರೆತಿದೆ. ಹಿಂದೆ ಯುಪಿಎ ಸರ್ಕಾರಅಭಿವೃದ್ಧಿಗಾಗಿ 371ಜೆ ಸೌಲಭ್ಯ ಕಲ್ಪಿಸಿದರೆ, ಈಸರ್ಕಾರ ಮಾತ್ರ ಈ ಭಾಗ ಸಂಪೂರ್ಣ ಕಡೆಗಣಿಸಿದೆ.ಈ ಭಾಗದಲ್ಲಿ ಖಾಲಿ ಇರುವ 40 ಸಾವಿರಕ್ಕೂ ಅ ಧಿಕಉದ್ಯೋಗ ಭರ್ತಿ ಮಾಡಿಲ್ಲ. ಒಂದೇ ಒಂದು ನೀರಾವರಿಯೋಜನೆ ಘೋಷಿಸಿಲ್ಲ ಎಂದು ಅಸಮಾಧಾನವ್ಯಕ್ತಡಿಸಿದರು.ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆನಿಯಮಮಾನುಸಾರ ನಾಮ ನಿರ್ದೇಶಿತ ಸ್ಥಾನಗಳನ್ನುಕೂಡ ನೇಮಕ ಮಾಡಿ ಸಮಿತಿಯನ್ನೇ ರಚಿಸಿಲ್ಲ.

ಇಷ್ಟೆಲ್ಲ ಆದರೂ ಬಿಜೆಪಿಯವರಿಗೆ ಈ ಭಾಗದಬಗ್ಗೆ ಮಾತನಾಡುವ ನೈತಿಕತೆ ಇದೆಯಾ? ಎಂದುಪ್ರಶ್ನಿಸಿದರು.ಪಕ್ಷದ ರಾಜ್ಯ ಮಟ್ಟದ ಪದಾ ಧಿಕಾರಿಗಳ ನೇಮಕವಿಳಂಬವಾಗಿದ್ದು, ಅದರಿಂದ ಪಕ್ಷದ ಕೆಲಸಗಳಿಗೆತೊಂದರೆ ಆಗಿಲ್ಲ. ನಮ್ಮಲ್ಲಿ ಶಿಸ್ತು ಸಮಿತಿ ಇದೆ. ಏನೇಸಮಸ್ಯೆಗಳಿದ್ದರೂ ಎಲ್ಲ ಅದೇ ನೋಡಿಕೊಳ್ಳಲಿದೆ. ಜಿಲ್ಲಾಮಟ್ಟದಲ್ಲಿ ಸಮಿತಿ ಅಂತಿಮಗೊಂಡಿದೆ.

Advertisement

ಮನೆ ಎಂದಮೇಲೆ ಅಭಿಪ್ರಾಯ ಭೇದಗಳಿರುವುದು ಸಹಜ. ಎಲ್ಲಮುಖಂಡರ ಜತೆ ಮಾತನಾಡಿ, ಏನೇ ಸಮಸ್ಯೆಗಳಿದ್ದರೂಬಗೆಹರಿಸಲಾಗುವುದು ಎಂದರು.ಕಾಂಗ್ರೆಸ್‌ ರಾಜಕೀಯ ಪಕ್ಷ ಮಾತ್ರವಲ್ಲದೇಆಂದೋಲನವಾಗಿದೆ. ಸ್ವಾತಂತ್ರÂಕ್ಕಾಗಿ ಹೋರಾಡಿದಪಕ್ಷ. ಮುಂದಿನ ಒಂದು ವರ್ಷದ ಕಾಲ ಅಮೃತಮಹೋತ್ಸವ ಆಚರಣೆ ಮಾಡಲಾಗುವುದು ಎಂದುತಿಳಿಸಿದರು.ಈ ವೇಳೆ ಜಿಲ್ಲಾಧ್ಯಕ್ಷ ಬಿ.ವಿ. ನಾಯಕ, ಮಾಜಿಎಂಎಲ್‌ಸಿ ಎನ್‌.ಎಸ್‌. ಬೋಸರಾಜ್‌, ಶಾಸಕಬಸನಗೌಡ ದದ್ದಲ್‌, ಮುಖಂಡರಾದ ಬಸವರಾಜ್‌ಪಾಟೀಲ್‌ ಇಟಗಿ, ವಸಂತಕುಮಾರ್‌, ಸೈಯದ್‌ಯಾಸಿನ್‌ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next