Advertisement
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನೆರೆ ಹಾವಳಿಯಿಂದಾಗಿ ಲಕ್ಷಾಂತರ ಭೂಮಿಯಲ್ಲಿ ರೈತರು ಬೆಳೆದಿದ್ದ ಬೆಳೆ ನಾಶವಾಗಿದೆ, ಸಾವಿರಾರು ಮನೆಗಳು ನೆಲಸಮ ವಾಗಿವೆ, ರಸ್ತೆಗಳು ಕೊಚ್ಚಿ ಹೋಗಿವೆ.,ಇಂತಹ ಸಂಕಷ್ಟದ ಸಮಯದಲ್ಲಿ ಜನಸ್ಪಂದನೆ ಅಗತ್ಯ ಇತ್ತೆ ಎಂದು ಹರಿಹಾಯ್ದರು. ರಾಜ್ಯದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ನಿರು ದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಯುವಕ ರೆಲ್ಲರೂ ದಾರಿ ತಪ್ಪಿ ಹೋಗುತ್ತಿದ್ದಾರೆ. ಜತೆಗೆ ಸರ್ಕಾ ರವೂ ದಾರಿ ತಪ್ಪಿದೆ. ಈ ಸರ್ಕಾರದ ದುರಾಡಳಿತಕ್ಕೆ ಜನ ಬೇಸತ್ತು ಛೀಮಾರಿ ಹಾಕುತ್ತಿದ್ದಾರೆ ಎಂದರು.
Related Articles
Advertisement
ಆಂತರಿಕ ವಿಚಾರ: ಸರ್ಕಾರದ ಜನೋತ್ಸವ ಸಮಾ ವೇಶಕ್ಕೆ 7 ಮಂದಿ ಸಚಿವರ ಗೈರು ಹಾಜರಿ ಬಗ್ಗೆ ಪತ್ರ ಕರ್ತರು ಕೇಳಿದ ಪ್ರಶ್ನೆಗೆ ಅದು ಅವರ ಪಕ್ಷದ ಆಂತರಿಕ ವಿಚಾರ. ನಾನು ಆ ಬಗ್ಗೆ ಮಾತನಾಡುವುದಿಲ್ಲ. ಆದರೆ ಅನೇಕ ಮುಖಂಡರು ಬಿಜೆಪಿ ತೊರೆಯಲು ತುದಿಗಾಲಲ್ಲಿ ನಿಂತಿದ್ದಾರೆ ಎಂದರು.
ಸಿದ್ದರಾಮಯ್ಯ ಬಗ್ಗೆ ಬಿಜೆಪಿಗೆ ಹೆದರಿಕೆ : ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಬಗ್ಗೆ ಬಿಜೆಪಿ ಯವರಿಗೆ ಹೆದರಿಕೆ ಇದೆ. ಹಾಗಾಗಿ ವಿನಾಕಾರಣ ಟೀಕೆ ಮಾಡುತ್ತಾರೆ ಎಂದು ಈಶ್ವರ್ ಖಂಡ್ರೆ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ದೊಡ್ಡ ಸ್ಥಾನದಲ್ಲಿದ್ದುಕೊಂಡು ತಾಕತ್ತು ಮತ್ತು ಧಮ್ ಬಗ್ಗೆ ಮಾತನಾಡುವುದು ಎಷ್ಟು ಸರಿ ಎಂದು ಜನಸ್ಪಂದನ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿಯವರು ಜನರ ಸಮಸ್ಯೆಗೆ ಸ್ಪಂದಿಸುವ ಕಳಕಳಿ ಮನೋ ಭಾವವನ್ನು ಕಲಿಯಲಿ. ಬಿಜೆಪಿಯವರಿಗೆ ಸರಿಯಾದ ಸಮಯದಲ್ಲಿ ರಾಜ್ಯದ ಜನತೆ ತಕ್ಕ ಶಾಸ್ತಿ ಮಾಡುತ್ತಾರೆ ಎಂದು ಹೇಳಿದರು.
ಕೇಂದ್ರದವರು ರಾಜ್ಯದವರ ಮೇಲೆ ಪ್ರಹಾರದ ಮೇಲೆ ಪ್ರಹಾರ ಮಾಡುತ್ತಿ ದ್ದಾರೆ. ನೀರಾವರಿಯಲ್ಲಿ ಅನ್ಯಾಯ, ಪ್ರವಾಹ ಪರಿಹಾರದಲ್ಲಿ ಅನ್ಯಾಯ, ಜಿಎಸ್‌ಟಿಯಲ್ಲಿ ಅನ್ಯಾಯ, ಕೊರೊನಾ ಸಂದರ್ಭದಲ್ಲಿ ಆಕ್ಸಿ ಜನ್ ಒದಗಿಸುವಲ್ಲೂ ಅನ್ಯಾಯವಾಗಿದೆ. ಆದರೂ ಅಂಜು ಬುರುಕ ರಾಜ್ಯ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಈ ಧೋರಣೆ ವಿರುದ್ಧ ಧ್ವನಿ ಎತ್ತಿಲ್ಲ. – ಈಶ್ವರ್ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ