Advertisement

ಜೆಎನ್ ಯು ಘರ್ಷಣೆ ಸರ್ಕಾರಿ ಪ್ರಾಯೋಜಿತ; ಮೋದಿ ಅಮಿತ್ ಅವರ ಕೈವಾಡವಿದೆ: ಖಂಡ್ರೆ

09:37 AM Jan 08, 2020 | keerthan |

ಬೆಂಗಳೂರು: ಹೊಸದಿಲ್ಲಿಯ ಜೆಎನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಸರ್ಕಾರಿ ಪ್ರಾಯೋಜಿತ ಘಟನೆಯಾಗಿದೆ.  ಇದರ ಹಿಂದೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಕೈವಾಡ ಇದೆ ಎಂದು ಕಾಂಗ್ರೆಸ್ ನಾಯಕ ಈಶ್ವರ್ ಖಂಡ್ರೆ ಹೇಳಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸುಕುಧಾರಿ ವ್ಯಕ್ತಿಗಳು ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಮಹಿಳಾ ಹಾಸ್ಟೆಲ್ ಮೇಲೂ ದಾಳಿ ನಡೆಸಿದ್ದಾರೆ. ಮೋದಿ- ಶಾ ಆಡಳಿತದಲ್ಲಿ ದೇಶ ಯಾವ ಕಡೆಗೆ ಹೊರಟಿದೆ.  ಸುಮಾರು ಮೂರು ತಾಸು ಹಲ್ಲೆ ಗಲಾಟೆ ನಡೆಯುತ್ತಿದ್ದರೂ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿಲ್ಲ. ಪೊಲೀಸರು ಭೇಟಿ ನೀಡಿದಾಗ ಮುಸುಕುಧಾರಿಗಳು ಅಲ್ಲಿಯೇ ಇದ್ದರೂ ಅವರನ್ನು ಬಂಧಿಸಿಲ್ಲ. ಅದರ ಬದಲು ಪ್ರತಿಭಟನೆ ಮಾಡುವವರ ವಿರುದ್ಧ ಕಿರುಕುಳ ನೀಡಿದ್ದಾರೆ ಎಂದು ಖಂಡ್ರೆ ಆರೋಪಿಸಿದ್ದಾರೆ.

ಸಿಎಎ ಹಾಗೂ ಎನ್ ಆರ್ ಸಿ ವಿರುದ್ಧ ದೇಶದಲ್ಲಿ ವಿವಿ ಪ್ರಾಧ್ಯಾಪಕರು ಸೇರಿದಂತೆ ಬುದ್ದಿ ಜೀವಿಗಳು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಅದನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಹಿಂಸೆಯ ದಾರಿ ತುಳಿಯುತ್ತಿದೆ. ಕೇಂದ್ರದ ನೀತಿ ವಿರುದ್ಧ ವಿಶ್ವದಲ್ಲಿಯೇ ಪ್ರತಿಭಟನೆಗಳು ನಡೆಯುತ್ತಿವ ಎಂದರು.

ಅಮಿತ್ ಶಾ ಮತ್ತು ನರೇಂದ್ರ ಮೋದಿ ಆಡಳಿತದಲ್ಲಿ ಸರ್ವಾಧಿಕಾರದ ಸರ್ಕಾರ ಜಾರಿಗೆ ತರಲು ಮುಂದಾಗಿದ್ದಾರೆ. ದೇಶದ ಜನರು ಇದಕ್ಕೆ ಬೆಂಬಲ ನೀಡುವುದಿಲ್ಲ ಎಂದರು.

ಕಾರ್ಮಿಕ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ ಇದೆ
ಕೇಂದ್ರ ಸರ್ಕಾರದ ಕಾರ್ಮಿಕ ಹಾಗೂ ರೈತ ವಿರೋಧಿ ಸರ್ಕಾರದ ವಿರುದ್ಧ ಜನರು ಪ್ರತಿಭಟಿಸುತ್ತಿದ್ದಾರೆ. ಅವರಿಗೆ ಕಾಂಗ್ರೆಸ್ ಬೆಂಬಲ ಇದೆ ಎಂದ ಅವರು, ಸರ್ಕಾರ ಬೆಂಬಲಿತ  ಸಿಎಎ ಪರ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಅದಕ್ಕೆ ಬುದ್ದ, ಬಸವ, ಅಂಬೇಡ್ಕರ್ ತತ್ವದಲ್ಲಿ ನಂಬಿಕೆ ಇಟ್ಟವರು ಬೆಂಬಲಿಸುವುದಿಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next