Advertisement

ಕುವೈತ್ ನಲ್ಲಿ ಸಂಕಷ್ಟದಲ್ಲಿರುವ ಕನ್ನಡಿಗರ ರಕ್ಷಣೆಗಾಗಿ ಸಿಎಂಗೆ ಪತ್ರ ಬರೆದ ಈಶ್ವರ ಖಂಡ್ರೆ

06:50 PM Jul 31, 2020 | sudhir |

ಬೀದರ್ : ಹೆಮ್ಮಾರಿ ಕೋವಿಡ್ ನಿಂದ ಎದುರಾಗಿರುವ ಸಂಕಷ್ಟದಿಂದಾಗಿ ಗಲ್ಫ್ ರಾಷ್ಟ್ರ ಕುವೈತ್‌ನಲ್ಲಿ ಸಿಲುಕಿಕೊಂಡಿರುವ ಬೀದರ್ ಮತ್ತು ಕಲಬುರ್ಗಿ ಜಿಲ್ಲೆಯ ಕನ್ನಡಿಗರನ್ನು ತಾಯ್ನಾಡಿಗೆ ಕರೆತರುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಭಾಲ್ಕಿ ಶಾಸಕರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

Advertisement

ಅಂತರಾಷ್ಟ್ರೀಯ ವಿಮಾನಯಾನಕ್ಕೆ ನಿರ್ಬಂಧ ಹಾಗೂ ಹೈದ್ರಾಬಾದ್ ಮೂಲದ ಮೇಘಾ ಕಂಪನಿಯ ಅವಾಂತರದಿಂದ ಬೀದರ್ ಮತ್ತು ಕಲಬುರ್ಗಿಯ ಜಿಲ್ಲೆಯ 200ಕ್ಕೂ ಹೆಚ್ಚು ಜನರು ಸಿಲುಕಿಕೊಂಡಿದ್ದು, ಕೈಯಲ್ಲಿ ಉದ್ಯೋಗವೂ ಇಲ್ಲದೇ, ಖರ್ಚಿಗೆ ಹಣವೂ ಇಲ್ಲದೇ ಪರಿತಪಿಸುತ್ತಿದ್ದಾರೆ. ಸರ್ಕಾರ ನಮ್ಮ ನೆರವಿಗೆ ಬರಬೇಕೆಂದು ವಿಡಿಯೋ ಸಂದೇಶದ ಮೂಲಕ ಕುವೈತ್ ಕನ್ನಡಿಗರು ಮನವಿ ಮಾಡಿದ್ದರು. ಈ ಬಗ್ಗೆ ‘ಉದಯವಾಣಿ’ಯಲ್ಲಿ ವಿಸ್ತ್ರತ ವರದಿ ಪ್ರಕಟಗೊಂಡಿತ್ತು.

ಕೂಡಲೇ ಎಚ್ಚೆತ್ತ ಈಶ್ವರ ಖಂಡ್ರೆ, ಕುವೈತ್‌ನಲ್ಲಿ ಸಿಲುಕಿರುವ ಯುವಕರ ಮಾಹಿತಿ ಪಡೆದು, ವಿಡಿಯೋ ಕಾಲ್ ಮೂಲಕ ಅವರನ್ನು ಸಂಪರ್ಕಿಸಿ ಶೀಘ್ರದಲ್ಲಿ ನಿಮ್ಮನ್ನು ರಕ್ಷಣೆ ಮಾಡಲಾಗುವುದು ಎಂದು ಅಭಯ ನೀಡಿದ್ದಾರೆ. ಅಷ್ಟೇ ಅಲ್ಲ ಸಿಎಂಗೆ ಪತ್ರ ಬರೆದು ಕುವೈತ್ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ವಿದೇಶಾಂತ ವ್ಯವಹಾರ ಸಚಿವರೊಂದಿಗೆ ಮಾತನಾಡಬೇಕು ಹಾಗೂ ಉದ್ಯೋಗಕ್ಕಾಗಿ ಕುವೈತ್‌ಗೆ ಕರೆದೊಯ್ದು ಈಗ ಊಟಕ್ಕೂ ಗತಿ ಇಲ್ಲದಂತೆ ತೊಂದರೆಗೆ ಸಿಲುಕಿಸಿರುವ ಮೇಗಾ ಇನ್ಪ್ರಾಸ್ಟ್ರಕ್ಚರ್ ಕಂಪನಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next