Advertisement

ಮಾಯವಾಯ್ತು ಗುಲಾಬಿ!

06:00 AM Jun 28, 2018 | |

ಒಂದು ದಿನ ರಾಮನ ಮಗ ಪಿಂಟು ಗುಲಾಬಿ ತೋಟದ ಬಳಿ ಹಾದು ಹೋಗುತ್ತಿದ್ದ. ಸುಂದರ ಗುಲಾಬಿ ಹೂವುಗಳು ಕಣ್ಣಿಗೆ ಬಿದ್ದವು. ತಾಯಿಗಾಗಿ ತೆಗೆದುಕೊಂಡು ಹೋಗಲು ಒಂದು ಗುಲಾಬಿ ಹೂವನ್ನು ಕಿತ್ತ. “ಹೇ ನೋಡಲ್ಲಿ. ಆ ಹುಡುಗ ಗುಲಾಬಿ ಹೂವುಗಳನ್ನು ಕೀಳುತ್ತಿದ್ದಾನೆ. ಅವನನ್ನುಹಿಡಿಯಿರಿ’ ಎಂದು ತೋಟದ ಕಾವಲುಗಾರರು ಓಡಿದರು. ಪಿಂಟು ಓಡಿಹೋಗಲು ಪ್ರಯತ್ನಿಸಲಿಲ್ಲ. ಕಾವಲುಗಾರರು ಪಿಂಟುವನ್ನು ಸಲೀಸಾಗಿ ಹಿಡಿದರು.

Advertisement

ಮಗನನ್ನು ಕಾವಲುಗಾರರು ಹಿಡಿದುಕೊಂಡಿರುವುದನ್ನು ರಾಮ ನೋಡಿದ. “ಏನು ವಿಷಯ? ನನ್ನ ಮಗನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿರುವಿರಿ?’ ಎಂದು ರಾಮ ಕೇಳಿದ. ನಿಮ್ಮ ಮಗ ತೋಟದಲ್ಲಿ ಒಂದು ಗುಲಾಬಿ ಹೂವನ್ನು ಕದಿಯುತ್ತಿದ್ದ. ಸಾಕ್ಷಿ ಸಮೇತ ಅವನನ್ನು ಹಿಡಿದಿದ್ದೇವೆ. ಅವನನ್ನು ಯಜಮಾನರ ಬಳಿ ನ್ಯಾಯತೀರ್ಮಾನಕ್ಕೆ ಕರೆದೊಯ್ಯುತ್ತಿದ್ದೇವೆ’ ಎಂದರು ಕಾವಲುಗಾರರು. ರಾಮನಿಗೆ ಯಾಕೋ ಕಾವಲುಗಾರರ ವರ್ತನೆ ಅತಿಯಾಯಿತು ಎಂದೆನಿಸಿತು. ಆದರೂ ತೋರಗೊಡದೆ ಸುಮ್ಮನಾದ. 

ಮಧ್ಯಾಹ್ನವಾಗಿದ್ದರಿಂದ ಮಗನಿಗೆ ಬಿಸಿಲು ತಾಕುವುದು ಬೇಡವೆಂದು ಟವೆಲ್ಲನ್ನು ಪಿಂಟುವಿನ ತಲೆ ಮೇಲೆ ಹಾಕಲು ಅನುಮತಿ ಕೋರಿದ. ಕಾವಲುಗಾರರು ಸಮ್ಮತಿಸಿದರು. ಪಿಂಟುವಿಗೆ ಅಪ್ಪನ ಉಪಾಯ ಅರ್ಥವಾಯಿತು. ತಲೆ ಮೇಲೆ ಬಟ್ಟೆ ಹಾಸಿದ ಕೂಡಲೆ ಪಿಂಟು ಗುಲಾಬಿಯ ಮುಳ್ಳು ತೆಗೆದು ತಿಂದುಬಿಟ್ಟನು. ಯಜಮಾನರ ಮುಂದೆ ಪಿಂಟುವನ್ನು ಹಾಜರು ಪಡಿಸುವಾಗ ಬಟ್ಟೆ ತೆಗೆದು ನೋಡಿದರೆ ಪಿಂಟುವಿನ ಕೈಯಲ್ಲಿ ಗುಲಾಬಿ ಇರಲೇ ಇಲ್ಲ. ಕಾವಲುಗಾರರಿಗೆ ಮುಖಭಂಗವಾಯಿತು. ಗುಲಾಬಿ ಎಲ್ಲಿ ಮಾಯವಾಯಿತೆಂದು ಅವರಿಗೆ ಕೊನೆಗೂ ಗೊತ್ತಾಗಲೇ ಇಲ್ಲ.

ಇತ್ತ ಯಜಮಾನರಿಗೆ ಏನು ನಡೆಯುತ್ತಿದೆ ಎಂದು ತಿಳಿಯದೆ ಗೊಂದಲಕ್ಕೀಡಾದರು. ಆಗ ರಾಮ ಮುಂದೆ ಬಂದು ಎಲ್ಲವನ್ನೂ ವಿವರಿಸಿದ. ಅದನ್ನು ಕೇಳಿ ಯಜಮಾನರೇ ಸ್ವತಃ ಗುಲಾಬಿಯ ಗೊಂಚಲನ್ನು ಕಿತ್ತು ಪಿಂಟುವಿನ ಕೈಗೆ ನೀಡಿದರು. ಪಿಂಟುವಿಗೆ ತುಂಬಾ ಖುಷಿಯಾಯಿತು.

ರತ್ನಮ್ಮ ಎ. ಆರ್‌., ಅರಕಲಗೂಡು 

Advertisement
Advertisement

Udayavani is now on Telegram. Click here to join our channel and stay updated with the latest news.

Next