Advertisement

ನಾಯಿಗಳಿಂದ ಬಚಾವ್‌ ಮಾಡಿದರು !

06:33 PM Sep 30, 2019 | mahesh |

ನಮ್ಮ ಕಡೆ ಶಾಲೆಯ ರಜಾ ದಿನಗಳನ್ನು ಮಜಾ ಮಾಡಬೇಕೆಂದರೆ ಗೆಳೆಯರೊಡನೆ ತಿರುಗಾಟ ಮಾಡುವುದೂ ಒಂದು ದಾರಿ. ನಮ್ಮ ಪಾಲಿಗೆ ಇದು ದಿನನಿತ್ಯದ ಹವ್ಯಾಸವಾಗಿಯೇ ಬಿಟ್ಟಿತ್ತು. ನಾವೆಲ್ಲ ಹೈಸ್ಕೂಲ್‌ನಲ್ಲಿ ಕೊಡಿಸಿದ ಸೈಕಲ್‌ ಹತ್ತಿ ಬಿಡುವಿನ ಸಮಯದಲ್ಲಿ ಸಮೀಪದ ಬೇರೆ ಊರುಗಳಿಗೆ ಸವಾರಿ ಮಾಡುವುದು ನಮಗೆಲ್ಲಾ ಸಂಭ್ರಮದ ಸಂಗತಿಯೇ ಆಗಿತ್ತು.

Advertisement

ಒಂದು ದಿನ ನಮ್ಮೂರಿಗೆ ಸಮೀಪದ, ಮಾಡಿಯಾಳ ಎಂಬ ಊರಿನಲ್ಲಿ ಜಾತ್ರೆ ಇತ್ತು. ಅಲ್ಲಿನ ವಿಶೇಷ ಏನೆಂದರೆ, ಪ್ರತಿ ವರ್ಷ ಅಲ್ಲಿ ನಾಟಕ ಪ್ರದರ್ಶನ ಇರುತ್ತಿತ್ತು. ಗೆಳೆಯರೆಲ್ಲ ಕೂಡಿಕೊಂಡು ಆದಿನ ರಾತ್ರಿ ನಾಟಕ ನೋಡಿದೆವು.ಆನಂತರ ಮರಳಿ ನಮ್ಮೂರಿಗೆ ನಸುಕಿನಲ್ಲಿಯೇ ಸೈಕಲ್‌ ಮೂಲಕವೇ ಹೊರಟೆವು. ನನ್ನ ಗೆಳೆಯರು ಎಲ್ಲರೂ ಮುಂದೆ ಹೋದರು. ಆದರೆ, ಹಿಂದೆ ಉಳಿದದ್ದು ನಾನು ಮಾತ್ರ. ಆ ಸಮಯದಲ್ಲಿ ನಾಲ್ಕೆçದು ನಾಯಿಗಳು ನನ್ನನ್ನು ಅಟ್ಟಾಡಿಸಿಕೊಂಡು ಬಂದವು. ಗಾಬರಿಗೊಂಡು ಸೈಕಲ್‌ ಅನ್ನು ಸ್ಪೀಡ್‌ ಆಗಿ ತುಳಿದರೂ ಅವು ನನ್ನ ಬೆನ್ನು ಹತ್ತಿದ್ದವು. ಒಂದು ಪಕ್ಷ ಈ ನಾಯಿಗಳಿಂದ ಕಚ್ಚಿಸಿಕೊಂಡರೆ, ನನ್ನ ಜೀವ ಇಲ್ಲಿಗೆ ಮುಕ್ತಾಯ ವಾಗುತ್ತೇ.. ಅನ್ಕೊಂಡೆ..!!

ಏನು ಮಾಡುವುದು ತಿಳಿಯುತ್ತಿಲ್ಲ. ಸೈಕಲ್‌ ನಿಲ್ಲಿಸಿದರೆ ಗತಿ ಏನೋ ತಿಳಿಯದು. ಸೈಕಲ್‌ನಿಂದ ಕೆಳಗೆ ಇಳಿದರೆ ಅಷ್ಟೂ ನಾಯಿಗಳು ನನ್ನ ಮೇಲೆ ದಾಳಿ ಮಾಡುತ್ತವೆ ಎಂಬುದ ನನಗೆ ಚೆನ್ನಾಗಿ ಅರ್ಥವಾಗಿತ್ತು. ಈ ಸಂಕಷ್ಟದಿಂದ ಪಾರಾಗುವ ದಾರಿ ಯಾವುದು ಎಂದು ನಾನು ಯೋಚಿಸುತ್ತಿದ್ದಾಗಲೇ, ಆಪದಾºಂಧವರಂತೆ ಬಂದ ಇಬ್ಬರು ಹುಡುಗರು ಆ ನಾಯಿಗಳನ್ನ ಕಲ್ಲಿನಿಂದ ಹೊಡೆಯುತ್ತ ಅವುಗಳನ್ನ ದೂರ ಅಟ್ಟುವಲ್ಲಿ ಯಶಸ್ವಿಯಾದರು ನನ್ನತ್ತ ತಿರುಗಿ ” ಹೇ,,ಪಾರ ಸೈಕಲ್‌ ಜೋರ್ಸಿ ತುಳಿ’ ಎಂದು ಧೈರ್ಯ ಹೇಳಿ ನನ್ನನ್ನು ಅಪಾಯದಿಂದ ಪಾರು ಮಾಡಿದರು. ಆ ಪುಣ್ಯಾತ್ಮರು..!!

ದಸ್ತಗೀರ ನದಾಫ್ ಯಳಸಂಗಿ

Advertisement

Udayavani is now on Telegram. Click here to join our channel and stay updated with the latest news.

Next