ಗಂಗಾವತಿ: ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು ಡ್ಯಾಂ ಗೆ ನೀರಿನ ಹೊಳರಿ ಹೆಚ್ಚಾಗಿರುವ ಸಂದರ್ಭದಲ್ಲಿ ಶೀಘ್ರದಲ್ಲಿ ಎಡದಂಡೆ ಕಾಲುವೆ ಸೇರಿ ವಿಜಯನಗರ ಕಾಲವೇ ಗಳಿಗೆ ನೀರು ಹರಿಸುವ ಸಂದರ್ಭದಲ್ಲಿ ಇದೀಗ ಕೊಪ್ಪಳ ತಾಲೂಕಿನ ಶಿವಪುರ ಬೋರುಕ ಪವರ್ ಹೌಸ್ ಬಳಿ ಎಸ್ಕೇಪ್ ಕ್ರಸ್ಟ್ ಗೇಟ್ ದುರಸ್ಥಿ
ಕಾರ್ಯವನ್ನು ಕೈಗೆತ್ತಿಕೊಂಡಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಪ್ಪಳ ತಾಲೂಕಿನ ಶಿವಪುರ ಸಮೀಪದ ಬೋರುಕಾ ವಿದ್ಯುತ್ ಘಟಕದ ಹತ್ತಿರವಿರುವ 10 ನೇ ಮೈಲು ಎಸ್ಕೇಪ್ ಕ್ರಸ್ಟ್ ಗೇಟ್ ದುರಸ್ಥಿಯಾಗಿದ್ದು ಕಾಲುವೆಗೆ ನೀರು ಬಿಡುವ ಸಂದರ್ಭದಲ್ಲಿ ದುರಸ್ಥಿ ಕಾಮಗಾರಿ ಆರಂಭಿಸಲಾಗಿದೆ.
ಇದರಿಂದ ಕಾಲುವೆಗೆ ನೀರು ಬಿಡುವುದು ತಡವಾಗುವ ಸಂಭವವಿದ್ದು ಈಗಾಗಲೇ ಭತ್ತ ನಾಟಿ ಮಾಡಲು ಅಚ್ಚುಕಟ್ಟು ಪ್ರದೇಶದ ರೈತರು ಭತ್ತದ ಸಸಿಮಡಿ ಹಾಕಿಕೊಂಡು ನಾಟಿ ಮಾಡಲು ಸಿದ್ದತೆ ನಡೆಸಿದ್ದಾರೆ. ಆಗಸ್ಟ್ ಮೊದಲವಾರದಲ್ಲಿ ಭತ್ತದ ನಾಟಿ ಮಾಡುದರೆ ಉತ್ತಮ ಇಳುವರಿ ಬರುತ್ತದೆ. ಆದ್ದರಿಂದ ಕಾಲುವೆಯಲ್ಲಿ ನಾಲ್ಕು ತಿಂಗಳು ಕಾಲ ನೀರು ಇಲ್ಲದ ಸಂದರ್ಭದಲ್ಲಿ ಎಸ್ಕೇಪ್ ಕ್ರಸ್ಟ್ ಗೇಟ್ ದುರಸ್ಥಿ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿ ಇದೀಗ ಕಾಮಗಾರಿ ಕೈಗೆತ್ತಿ ಕೊಂಡಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಇದುವರೆಗೂ ನಿರ್ಲಕ್ಷ ವಹಿಸಿ ಇದೀಗ ಎಸ್ಕೇಪ್ ಕ್ರಸ್ಟ್ ಗೇಟ್ ದುರಸ್ಥಿ ಕಾರ್ಯ ಮಾಡುತ್ತಿರುವ ಅಧಿಕಾರಿಗಳು ಹಗಲು ರಾತ್ರಿ ಸ್ಥಳದಲ್ಲಿ ನಿಂತು ಕಾಮಗಾರಿ ಕೈಗೊಳ್ಳಬೇಕಿದ್ದು ಅಧಿಕಾರಿಗಳು ನಿರ್ಲಕ್ಷ್ಯ ಮಾಡದೆ ಬೇಗನೆ ಕಾಮಗಾರಿ ಮುಗಿಸಬೇಕಿದೆ ಎಂದು ರೈತರು ಒತ್ತಾಯಿಸಿದ್ದಾರೆ.