ನಗರಗಳಲ್ಲಿ, ಮಾಲ್ ಮತ್ತಿತರ ಕಟ್ಟಡಗಳಲ್ಲಿ ಚಲಿಸುವ ಮೆಟ್ಟಿಲು ಅಥವಾ ಏರು ಬಂಡಿ (ಎಸ್ಕಲೇಟರ್)ಯನ್ನು ನೀವು ನೋಡಿರಬಹುದು. ನಗರವಾಸಿಗಳು ಸಲೀಸಾಗಿ ಯಾವುದೇ ಭಯವಿಲ್ಲದೆ ಹತ್ತಿಕೊಳ್ಳುತ್ತಾರೆ. ಅವರಿಗೆ ಅದನ್ನು ಬಳಸಿ ಗೊತ್ತಿರುತ್ತದೆ. ಆದರೆ, ಮೊದಲ ಬಾರಿ ಅದನ್ನು ಕಂಡವರು ಅದರ ಮೇಲೆ ಹತ್ತಿಕೊಳ್ಳಲು ಹಿಂದೇಟು ಹಾಕುತ್ತಾರೆ. ಅನೇಕ ವೇಳೆ ಅವರದನ್ನು ಹತ್ತಿ ನಂತರ ಸಮತೋಲನ ಕಾಪಾಡಿಕೊಳ್ಳಲಾಗದೆ ಪರದಾಡುವುದೂ ಉಂಟು. ಲಂಡನ್‌ನಲ್ಲೂ ಇಂಥದ್ದೇ ಪರಿಸ್ಥಿತಿ ಇತ್ತು. ಆದರೆ ಈಗಲ್ಲ 1911ರಲ್ಲಿ. ಆಗ ತಾನೇ ಮೊತ್ತ ಮೊದಲ ಬಾರಿಗೆ ಲಂಡನ್‌ನಲ್ಲಿ ಎಸ್ಕಲೇಟರ್ ಅಳವಡಿಸಿದ್ದರು. ಜನರು ಅದನ್ನು ಬಳಸಲು ಹಿಂದೇಟು ಹಾಕಿದರು. ಸರ್ಕಾರಕ್ಕೆ ಪೀಕಲಾಟ ಶುರುವಾಯಿತು. ಒಂದೊಳ್ಳೆಯ ಸವಲತ್ತನ್ನು ಒದಗಿಸಿದರೆ ಸಾರ್ವಜನಿಕರು ಅದನ್ನು ಬಳಸುತ್ತಿಲ್ಲವಲ್ಲ ಎಂದು. ಕಡೆಗೆ ಒಂದು ಉಪಾಯ ಮಾಡಿದರು. ಜನರ ಭಯವನ್ನು ಹೋಗಲಾಡಿಸಲು ಸರ್ಕಾರಿ ನೌಕರನಾಗಿದ್ದ ವಿಲಿಯಂ ಬಂಪರ್ ಹ್ಯಾರಿಸ್ ಎಂಬಾತನನ್ನು ಎಲ್ಲರೆದುರೇ ಎಸ್ಕಲೇಟರ್ ಹತ್ತಿಸಿದರು. ನಂತರವೇ ಜನರು ಯಾವುದೇ ಆತಂಕವಿಲ್ಲದೆ ಎಸ್ಕಲೇಟರ್ ಬಳಸಲು ಶುರುಮಾಡಿದ್ದು. ವಿಲಿಯಂ ಬಂಪರ್ ಕುಂಟನಾಗಿದ್ದ. ಕುಂಟನೇ ಬಳಸುತ್ತಾನೆಂದರೆ ಎಸ್ಕಲೇಟರ್‌ಅನ್ನು ಯಾರು ಬೇಕಾದರೂ ಬಳಸಬಹುದು ಎಂಬ ಧೈರ್ಯ ಮೂಡಲಿ ಎಂದೇ ಸರ್ಕಾರ ಈ ಉಪಾಯವನ್ನು ಹೂಡಿತ್ತು. ಆ ಉಪಾಯ ಫಲಿಸಿತ್ತು!
ಹವನ